ಆ್ಯಪ್ನಗರ

ವಿಐಎಸ್‌ಎಲ್‌ ಕಾರ್ಮಿಕರ ಹಿತರಕ್ಷಣೆಗೆ ಕೇಂದ್ರದೊಂದಿಗೆ ಮಾತುಕತೆ

ಸಂಕಷ್ಟದ ಹಾದಿಯಲ್ಲಿರುವ ವಿಐಎಸ್‌ಎಲ್‌ ಕಾರ್ಖಾನೆ ಹಾಗು ಕಾರ್ಮಿಕರ ಹಿತರಕ್ಷಣೆಗೆ ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸಲು ಬದ್ಧವಾಗಿರುವುದಾಗಿ ಭಾರತೀಯ ಮಜ್ದೂರ್‌ ಸಂಘದ(ಬಿಎಂಎಸ್‌) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಹೇಳಿದರು.

Vijaya Karnataka 7 Sep 2019, 5:00 am
ಭದ್ರಾವತಿ: ಸಂಕಷ್ಟದ ಹಾದಿಯಲ್ಲಿರುವ ವಿಐಎಸ್‌ಎಲ್‌ ಕಾರ್ಖಾನೆ ಹಾಗು ಕಾರ್ಮಿಕರ ಹಿತರಕ್ಷಣೆಗೆ ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸಲು ಬದ್ಧವಾಗಿರುವುದಾಗಿ ಭಾರತೀಯ ಮಜ್ದೂರ್‌ ಸಂಘದ(ಬಿಎಂಎಸ್‌) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಹೇಳಿದರು.
Vijaya Karnataka Web 6BDVT1_46


ವಿಐಎಸ್‌ಎಲ್‌ ಕಾರ್ಖಾನೆ ಮುಖ್ಯದ್ವಾರ ಮುಂಭಾಗ ಕಾರ್ಮಿಕ ಸಂಘ 63 ದಿನಗಳಿಂದ ನಡೆಸುತ್ತಿರುವ ಧರಣಿಯಲ್ಲಿಸೋಮವಾರ ಸಂಜೆ ಪಾಲ್ಗೊಂಡಿದ್ದ ಅವರು ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದರು.

ಪಶ್ಚಿಮ ಬಂಗಾಳದ ದುರ್ಗಾಪುರದ ಕಾರ್ಖಾನೆ, ಸೇಲಂ ಹಾಗೂ ಭದ್ರಾವತಿಯ ವಿಐಎಸ್‌ಎಲ್‌ಗೆ ಭೇಟಿ ನೀಡಿದ್ದು, ಕಾರ್ಖಾನೆಗಳಲ್ಲಿಬಂಡವಾಳ ಹಿಂತೆಗೆತ ಮತ್ತು ಮಾರಾಟ ಮಾಡಲು ಮುಂದಾಗಿರುವ ಕೇಂದ್ರ ಉಕ್ಕು ಪ್ರಾಧಿಕಾರ ಹಾಗು ಕೇಂದ್ರ ಸರಕಾರದ ನಿರ್ಧಾರ ಸರಿಯಾದ ಕ್ರಮವಲ್ಲಎಂದು ಪ್ರತಿಪಾದಿಸಿದರು.

ಈ ಮೂರು ಕಾರ್ಖಾನೆಗಳ ಪೈಕಿ ವಿಐಎಸ್‌ಎಲ್‌ ಕಾರ್ಖಾನೆ ಪರಿಸ್ಥಿತಿ ಉಳಿದೆರಡು ಕಾರ್ಖಾನೆಗಳಿಗೆ ಹೋಲಿಸಿದರೆ ಉತ್ತಮವಾಗಿದೆ. ಇಲ್ಲಿಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸದೆ ಇರುವುದು ಹಾಗೂ ರೈಲ್ವೆ, ರಕ್ಷಣಾ ಇಲಾಖೆ ಸೇರಿದಂತೆ ವಿವಿಧ ಘಟಕಗಳಿಗೆ ಅಗತ್ಯ ಕಬ್ಬಿಣ ಮತ್ತು ಉಕ್ಕಿನ ವಸ್ತುಗಳನ್ನು ಸರಬರಾಜು ಮಾಡಲು ಆದೇಶ ಪಡೆಯಲು ಉಕ್ಕು ಪ್ರಾಧಿಕಾರ ವಿಫಲವಾಗಿರುವುದರಿಂದ ಕಾರ್ಖಾನೆ ಹೀನಸ್ಥಿತಿಗೆ ತಲುಪಿದೆ ಎಂದು ಆರೋಪಿಸಿದರು.

ಈ ಬಗ್ಗೆ ಬಿಎಂಎಸ್‌ ಅತಿ ಶೀಘ್ರದಲ್ಲಿಸಂಸದ ಬಿ.ವೈ.ರಾಘವೇಂದ್ರ ಅವರೊಂದಿಗೆ ಚರ್ಚಿಸಿ ಕೇಂದ್ರ ಉಕ್ಕು ಸಚಿವರೊಂದಿಗೆ ಮಾತುಕತೆ ನಡೆಸಿ ಕಾರ್ಖಾನೆ ಪುನಶ್ಚೇತನಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ವಿಐಎಸ್‌ಎಲ್‌ ಆಡಳಿತ ಮಂಡಳಿ ಕಾರ್ಖಾನೆಯ ಸಾವಿರಾರು ಮನೆಗಳನ್ನು ಲೀಸ್‌ ಆಧಾರದಡಿ ನೀಡಿ ಮತ್ತೀಗ ಆ ಮನೆಗಳಲ್ಲಿವಾಸವಿರುವ ಕಾರ್ಮಿಕರಿಗೆ ಮತ್ತು ನಿವೃತ್ತ ಕಾರ್ಮಿಕರನ್ನು ತೆರವುಗೊಳಿಸುವ ಪಿತೂರಿ ನಡೆಸುತ್ತಿರುವುದು ಖಂಡನೀಯ. ಗುತ್ತಿಗೆ ಕಾರ್ಮಿಕರಿಗೆ ತಿಂಗಳಿಗೆ 30 ದಿನಗಳ ಕೆಲಸ ನೀಡಿ ಅವರ ಕುಟುಂಬಗಳ ರಕ್ಷಣೆಗೆ ಮುಂದಾಗಬೇಕೆಂದು ಒತ್ತಾಯಿಸಿದರು.

ರಾಷ್ಟ್ರೀಯ ಕಾರ್ಯದರ್ಶಿ ದೇವೇಂದ್ರ ಕುಮಾರ್‌ ಪಾಂಡೆ, ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್‌, ಸಂಘದ ಪದಾಧಿಕಾರಿಗಳಾದ ಬಸಂತ್‌ ಕುಮಾರ್‌, ಅಮೃತ್‌ ಕುಮಾರ್‌, ಮೋಹನ್‌, ಗುತ್ತಿಗೆ ಕಾರ್ಮಿಕ ಸಂಘದ ಪದಾಧಿಕಾರಿಗಳು, ನಿವೃತ್ತ ಕಾರ್ಮಿಕ ಕಲ್ಯಾಣ ಕೇಂದ್ರದ ಅಧ್ಯಕ್ಷ ನಾಗಭೂಷಣ್‌ , ಬಿಎಂಎಸ್‌ ಮುಖಂಡ ಎಚ್‌.ಎಲ್‌.ವಿಶ್ವನಾಥ್‌, ಬಿಜೆಪಿ ಜಿಲ್ಲಾಕಾರ್ಯದರ್ಶಿ ಧರ್ಮಪ್ರಸಾದ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ