ಆ್ಯಪ್ನಗರ

ಸುಳುಗೋಡಿನಲ್ಲಿ ಮತದಾನ ಜಾಗೃತಿ

ಇಲ್ಲಿನ ಕೊಡಚಾದ್ರಿ ಸರಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ತಂಡ ತಾಲೂಕಿನ ಸುಳುಗೋಡು ಗ್ರಾಮದಲ್ಲಿ ಬುಧವಾರ ಮತಜಾಗೃತಿ ಕಾರ‍್ಯಕ್ರಮ ನಡೆಸಿದರು.

Vijaya Karnataka 5 Apr 2019, 5:00 am
ಹೊಸನಗರ: ಇಲ್ಲಿನ ಕೊಡಚಾದ್ರಿ ಸರಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ತಂಡ ತಾಲೂಕಿನ ಸುಳುಗೋಡು ಗ್ರಾಮದಲ್ಲಿ ಬುಧವಾರ ಮತಜಾಗೃತಿ ಕಾರ‍್ಯಕ್ರಮ ನಡೆಸಿದರು.
Vijaya Karnataka Web SMR-3HOSP4


ಇಲ್ಲಿನ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಮತದಾನದ ಮಹತ್ವ ಅರಿವು ಮೂಡಿಸುವ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಮೊದಲ ಬಾರಿ ಮತ ಚಲಾವಣೆ ಮಾಡುವವರು ಮತಯಂತ್ರ, ನೋಟಾ ಹಾಗೂ ವಿವಿ ಪ್ಯಾಟ್‌ಗಳ ಕುರಿತು ಸೂಕ್ತ ಅರಿವು ಹೊಂದಬೇಕೆಂದರು.

ಮತದಾನದ ಹಕ್ಕು ಅತ್ಯಂತ ಅಮೂಲ್ಯವಾಗಿದ್ದು, ಮತದಾರರು ಯಾವುದೇ ಆಮಿಷಕ್ಕೆ ಒಳಗಾಗಬಾರದು. ಅರ್ಹ ಅಭ್ಯರ್ಥಿಗೆ ಮತ ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳಿಸಬೇಕಿದೆ. ಚುನಾವಣಾ ಅಕ್ರಮ ಕಂಡು ಬಂದರೆ ಮೊಬೈಲ್‌ ಆಪ್‌ ಅಥವಾ ಉಚಿತ ಕರೆ ಮೂಲಕ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ಅವರು ತಿಳಿಸಿದರು. ವಿಭಾಗ ಚುನಾವಣಾಧಿಕಾರಿ ಅಂಜನ್‌ಕುಮಾರ್‌ ಮತಯಂತ್ರದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ವಿದ್ಯಾರ್ಥಿಗಳಾದ ರವಿ, ಅಶ್ವಥ್‌, ಶಮಂತ, ಸ್ಮಿತ, ಅಶ್ವಿನಿ, ಅಪೂರ್ವ, ತಾರಾ, ಗ್ರಾಪಂ ಸದಸ್ಯೆ ಜ್ಯೋತಿ, ಗ್ರಾಮಸ್ಥರಾದ ಶಿವಕುಮಾರ್‌ ಜೋಯ್ಸ್‌, ಮಹೇಶ್‌, ವಿಷ್ಣುಗೌಡ, ಅಣ್ಣಪ್ಪ, ಪಕೀರಪ್ಪ, ಚನ್ನೇಶ್‌ ಮತ್ತಿತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ