ಆ್ಯಪ್ನಗರ

ರೌಡಿಗಳಿಗೆ ಖಡಕ್‌ ವಾರ್ನಿಂಗ್‌

ಗಣೇಶ ಚತುರ್ಥಿ ಪ್ರಯುಕ್ತ ನಗರದಲ್ಲಿಯ ರೌಡಿಗಳಿಗೆ ಪೊಲೀಸ್‌ ಇಲಾಖೆ ಖಡಕ್‌ ವಾರ್ನಿಂಗ್‌ ನೀಡಿದೆ. ಸುಮಾರು ಮುನ್ನೂರಕ್ಕೂ ಅಧಿಕ ರೌಡಿಗಳ ಪರೇಡ್‌ ನಡೆಸಿ, 29 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

Vijaya Karnataka 10 Sep 2018, 9:34 pm
ಶಿವಮೊಗ್ಗ : ಗಣೇಶ ಚತುರ್ಥಿ ಪ್ರಯುಕ್ತ ನಗರದಲ್ಲಿಯ ರೌಡಿಗಳಿಗೆ ಪೊಲೀಸ್‌ ಇಲಾಖೆ ಖಡಕ್‌ ವಾರ್ನಿಂಗ್‌ ನೀಡಿದೆ. ಸುಮಾರು ಮುನ್ನೂರಕ್ಕೂ ಅಧಿಕ ರೌಡಿಗಳ ಪರೇಡ್‌ ನಡೆಸಿ, 29 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
Vijaya Karnataka Web warning to rowdies
ರೌಡಿಗಳಿಗೆ ಖಡಕ್‌ ವಾರ್ನಿಂಗ್‌


ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಹಾಗೂ ನಗರದಲ್ಲಿ ಶಾಂತಿ ಭಂಗ ಉಂಟು ಮಾಡುತ್ತಿದ್ದ ರೌಡಿಗಳ ಕಡಿವಾಣಕ್ಕಾಗಿ ಝಳಪಿಸುತ್ತಿದ್ದ ಲಾಂಗು, ಮಚ್ಚುಗಳು ಗುಪ್‌ಚುಪ್‌ ಆಗಿರುವಂತೆ ಪೊಲೀಸ್‌ ಇಲಾಖೆ ಸೂಚಿಸಿದೆ.

ನಗರದಲ್ಲಿ ಮುಚ್ಚು ಲಾಂಗು ಇಟ್ಟುಕೊಂಡು ಓಡಾಡುವುದು, ಜನಸಾಮಾನ್ಯರನ್ನು ಬೆದರಿಸುವುದು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಗಣೇಶ ಹಬ್ಬಕ್ಕೂ ಮುನ್ನ ಕಾರ್ಯಾಚರಣೆ ನಡೆಸಿ, 300ಕ್ಕೂ ಹೆಚ್ಚು ರೌಡಿಶೀಟರ್‌ಗಳ ಪರೇಡ್‌ ನಡೆಸಿ ಎಚ್ಚರಿಕೆ ನೀಡಲಾಗಿದೆ.

ಪರೇಡ್‌ಗೆ ಬಾರದೆ ತಪ್ಪಿಸಿಕೊಂಡಿದ್ದ ಮೂವರು ಸೇರಿ ಒಟ್ಟು 29 ರೌಡಿಗಳನ್ನು ಬಂಧಿಸಲಾಗಿದೆ. ಬಂಧನ ವೇಳೆ ಲಾಂಗು ಮಚ್ಚು ಸಹ ಜಪ್ತಿ ಮಾಡಲಾಗಿದೆ. 100 ಜನರಿಂದ ಬಾಂಡ್‌ ಕೂಡ ಬರೆಸಿಕೊಳ್ಳಲಾಗಿದೆ. ಶುಕ್ರವಾರ ಹಾಜರಾಗದ ಕೆಲವರು ಶನಿವಾರ ಬಂದಿದ್ದರು ಎಂದು ಎಸ್‌ಪಿ ಅಭಿನವ್‌ ಖರೆ ತಿಳಿಸಿದ್ದಾರೆ.

ಚುನಾವಣೆ ಸಮಯದಲ್ಲಿ ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗಿದ್ದ ರೌಡಿಶೀಟರ್‌ಗಳ ಮೇಲೆ ಕಣ್ಣಿಟ್ಟಿದ ಪೊಲೀಸ್‌ ಇಲಾಖೆಯು ಗಣೇಶ ಹಬ್ಬಕ್ಕೂ ಮುನ್ನವೇ ಶಿಸ್ತು ಕ್ರಮಕ್ಕೆ ಮುಂದಾಗಿದೆ. ನಗರದಲ್ಲಿ 1,200ಕ್ಕೂ ಹೆಚ್ಚು ರೌಡಿಶೀಟರ್‌ಗಳಿದ್ದಾರೆ. ರೌಡಿಗಳ ಪರೇಡ್‌ ಮೂಲಕ ಉಳಿದವರಿಗೂ ಖಡಕ್‌ ಸಂದೇಶ ರವಾನೆ ಮಾಡಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ