ಆ್ಯಪ್ನಗರ

ಲಿಂಗನಮಕ್ಕಿಯಿಂದ ಮತ್ತೆ ನದಿಗೆ ನೀರು

ವಿಕ ಸುದ್ದಿಲೋಕ ಶಿವಮೊಗ್ಗ ಲಿಂಗನಮಕ್ಕಿ ಜಲಾಶಯದಲ್ಲಿಮತ್ತೊಮ್ಮೆ ನೀರು ಪೂರ್ಣಮಟ್ಟ ತಲುಪಿದ ಹಿನ್ನೆಲೆಯಲ್ಲಿಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ಮತ್ತೆ ತೆರೆಯಲಾಗಿದೆ...

Vijaya Karnataka 19 Oct 2019, 10:02 pm
ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯದಲ್ಲಿಮತ್ತೊಮ್ಮೆ ನೀರು ಪೂರ್ಣಮಟ್ಟ ತಲುಪಿದ ಹಿನ್ನೆಲೆಯಲ್ಲಿಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ಮತ್ತೆ ತೆರೆಯಲಾಗಿದೆ.
Vijaya Karnataka Web water from the river back to the river
ಲಿಂಗನಮಕ್ಕಿಯಿಂದ ಮತ್ತೆ ನದಿಗೆ ನೀರು

ಜಲಾಶಯದಲ್ಲಿನೀರಿನ ಮಟ್ಟ ಶುಕ್ರವಾರ ಸಂಜೆ ಪೂರ್ಣಮಟ್ಟ 1819ಅಡಿಗೆ ತಲುಪಿದ ಹಿನ್ನೆಲೆಯಲ್ಲಿಆರಂಭದಲ್ಲಿ3 ಕ್ರಸ್ಟ್‌ಗೇಟ್‌ಗಳನ್ನು ತೆರೆದು 4,800 ಕ್ಯೂಸೆಕ್‌ ನೀರನ್ನು ಬಿಡಲು ಆರಂಭಿಸಲಾಯಿತು. ಬೆಳಗ್ಗೆ 6ಸಾವಿರ ಕ್ಯೂಸೆಕ್‌ ಇದ್ದ ಒಳಹರಿವು ಸಂಜೆ 6ಗಂಟೆ ಹೊತ್ತಿಗೆ 30ಸಾವಿರಕ್ಕೆ ಏರಿಕೆಯಾಯಿತು. ನೀರು ಪೂರ್ಣಮಟ್ಟ ಇದ್ದ ಕಾರಣ 7 ಗೇಟ್‌ಗಳನ್ನು ಒಂದೂವರೆ ಅಡಿಯಷ್ಟು ತೆರೆದು ನದಿಗೆ 15,300 ಕ್ಯೂಸೆಕ್‌ ನೀರನ್ನು ಹರಿಸಲಾಗುತ್ತಿದೆ. ರಾತ್ರಿ 8ಗಂಟೆ ಹೊತ್ತಿಗೆ ಒಳಹರಿವು 37ಸಾವಿರ ಕ್ಯೂಸೆಕ್‌ಗೆ ಏರಿಕೆಯಾ ಗಿತ್ತು.
ವಿದ್ಯುತ್‌ ಉತ್ಪಾದನೆಗೆ 7,150 ಕ್ಯೂಸೆಕ್‌ ಬಳಸಲಾಗುತ್ತಿದ್ದು ಒಟ್ಟಾರೆ ಜಲಾಶಯದಿಂದ 22,150 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಜೂನ್‌ ಮತ್ತು ಜುಲೈನಲ್ಲಿಮಳೆ ಇಲ್ಲದೆ ಜಲಾಶಯದಲ್ಲಿನೀರಿನ ಮಟ್ಟ ತುಂಬ ಕೆಳಗೆ ಇಳಿದಿತ್ತು. ಆಗಸ್ಟ್‌ನಲ್ಲಿಭಾರಿ ಮಳೆ ಹಿನ್ನೆಲೆಯಲ್ಲಿಒಂದೇ ತಿಂಗಳಲ್ಲಿಜಲಾಶಯ ಭರ್ತಿಯಾಗಿ ಸೆಪ್ಟೆಂಬರ್‌ 2ರಂದು ಕ್ರಸ್ಟ್‌ಗೇಟ್‌ಗಳನ್ನು ತೆರೆದು ಹೆಚ್ಚುವರಿ ನೀರನ್ನು ನದಿಗೆ ಬಿಡಲು ಆರಂಭಿಸ ಲಾಗಿತ್ತು. ಎರಡು ವಾರಗಳ ಕಾಲ ನದಿಗೆ ಭಾರಿ ಪ್ರಮಾಣದ ನೀರು ಹರಿಸಲಾಗಿತ್ತು.
ಹೀಗಾಗಿ ಜೋಗ ಜಲಪಾತದಲ್ಲಿಶರಾವತಿ ನದಿ ವೈಭವ ಇಮ್ಮಡಿಗೊಳಿಸಿತ್ತು. ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿಸೆ.15ರಂದು ರಾತ್ರಿ ಎಲ್ಲಗೇಟ್‌ಗಳನ್ನು ಬಂದ್‌ ಮಾಡಲಾಗಿತ್ತು. ಒಂದು ತಿಂಗಳ ಬಳಿಕ ಮತ್ತೊಮ್ಮೆ ಕ್ರಸ್ಟ್‌ಗೇಟ್‌ಗಳನ್ನು ತೆರೆಯಲಾಗಿದೆ. ಜಲಾನಯನ ಪ್ರದೇಶದಲ್ಲಿಕಳೆದ ಒಂದು ವಾರದಿಂದ ಚದುರಿದಂತೆ ಪ್ರತಿದಿನವೂ ಭಾರಿ ಮಳೆಯಾ ಗುತ್ತಿದೆ. ಹೀಗಾಗಿ ಒಳಹರಿವು ನೋಡಿಕೊಂಡು ಹೊರ ಹರಿವು ಪ್ರಮಾಣವನ್ನು ಏರಿಳಿತ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ