ಆ್ಯಪ್ನಗರ

ದರೋಡೆಕೋರರ ಬಂಧನ: ಮಾರಕಾಸ್ತ್ರ ವಶ

ಮಲೆನಾಡು ಭಾಗದಲ್ಲಿ ಒಂಟಿಮನೆಗಳನ್ನು ನುಗ್ಗಿ ದರೋಡೆ ಮಾಡಲು ಹೊಂಚು ಹಾಕಿದ್ದ ಆರೋಪಿಗಳನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.

Vijaya Karnataka 5 Feb 2019, 5:00 am
ಹೊಸನಗರ (ಶಿವಮೊಗ್ಗ) : ಮಲೆನಾಡು ಭಾಗದಲ್ಲಿ ಒಂಟಿಮನೆಗಳನ್ನು ನುಗ್ಗಿ ದರೋಡೆ ಮಾಡಲು ಹೊಂಚು ಹಾಕಿದ್ದ ಆರೋಪಿಗಳನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web weapons seize criminals arrest
ದರೋಡೆಕೋರರ ಬಂಧನ: ಮಾರಕಾಸ್ತ್ರ ವಶ


ಪಟ್ಟಣ ಸಮೀಪದ ಕಾರಣಗಿರಿ ಬಸ್‌ನಿಲ್ದಾಣದ ಸಮೀಪ ಭಾನುವಾರ ರಾತ್ರಿ ನಾಲ್ಕೈದು ವ್ಯಕ್ತಿಗಳು ಮಾರಕಾಸ್ತ್ರಗಳೊಂದಿಗೆ ಅಡ್ಡಾಡುತ್ತಿರುವ ಮಾಹಿತಿ ಮೇಲೆ ಇಲ್ಲಿನ ಪಿಎಸ್‌ಐ ಅಶ್ವಿನಿಕುಮಾರ್‌ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರು ಶಿವಮೊಗ್ಗ ನಗರದವರಾಗಿದ್ದು ಸೂಳೆಬೈಲಿನ ನದೀಮ್‌, ಖಲೀಲ್‌ಖಾನ್‌, ಶಾಂತಿನಗರದ ಅನ್ವರ್‌ಖಾನ್‌, ಇಂದಿರಾನಗರದ ಇರ್ಫಾನ್‌ಖಾನ್‌, ಗೋಪಾಲಗೌಡ ಬಡಾವಣೆಯ ಮಂಜುನಾಥ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಮಚ್ಚು, ಕಬ್ಬಿಣದ ರಾಡ್‌, ಹಗ್ಗ, ಕತ್ತಿ, ಖಾರದ ಪುಡಿ ವಶಪಡಿಸಿಕೊಳ್ಳಲಾಗಿದೆ. ಮಲೆನಾಡು ಭಾಗದಲ್ಲಿ ಅಡಕೆ ಕೊಯಿಲು ಹಾಗೂ ಸುಗ್ಗಿಯ ಸಮಯವಾಗಿದ್ದು, ಒಂಟಿ ಮನೆಗಳಿಗೆ ನುಗ್ಗಿ, ಹಣ, ಒಡವೆಗಳನ್ನು ದೋಚುವ ಹುನ್ನಾರದಿಂದ ಬಂದಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ