ಆ್ಯಪ್ನಗರ

ಅಚ್ಚೇದಿನ್‌, ಸಮಸ್ಯೆಗೆ ಪರಿಹಾರ ಯಾವಾಗ?

ಇದೇ ಮೊದಲ ಬಾರಿ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಸ್ವರಾಜ್‌ ಇಂಡಿಯಾ ಪಕ್ಷದ ಜಿಲ್ಲಾ ವಕ್ತಾರ ಕೆ.ಪಿ.ಶ್ರೀಪಾಲ್‌ ಒತ್ತಾಯಿಸಿದರು

Vijaya Karnataka 5 May 2018, 5:00 am
ಶಿವಮೊಗ್ಗ: ಇದೇ ಮೊದಲ ಬಾರಿ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಸ್ವರಾಜ್‌ ಇಂಡಿಯಾ ಪಕ್ಷದ ಜಿಲ್ಲಾ ವಕ್ತಾರ ಕೆ.ಪಿ.ಶ್ರೀಪಾಲ್‌ ಒತ್ತಾಯಿಸಿದರು.
Vijaya Karnataka Web when come good day
ಅಚ್ಚೇದಿನ್‌, ಸಮಸ್ಯೆಗೆ ಪರಿಹಾರ ಯಾವಾಗ?


ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಅವರು ಮಾತನಾಡಿ, ಪ್ರಧಾನಿ ಆದ ನಂತರ ಶಿವಮೊಗ್ಗಕ್ಕೆ ಮೊದಲ ಬಾರಿಗೆ ಆಗಮಿಸುತ್ತಿರುವ ನರೇಂದ್ರ ಮೋದಿ ಅವರಿಗೆ ಸ್ವರಾಜ್‌ ಪಕ್ಷ ಸ್ವಾಗತಿಸುತ್ತದೆ. ಬಿಜೆಪಿಯ ಚುನಾವಣಾ ಪ್ರಚಾರದ ಬಹಿರಂಗ ಸಭೆಯಲ್ಲಿ ಮೋದಿ ಅವರು ಕೋಟಿ ಕೋಟಿ ಉದ್ಯೋಗದ, ಲಕ್ಷ ಹಣವನ್ನು ಖಾತೆಗೆ ಜಮಾ ಮಾಡುವ ಭರವಸೆಗಳ ಅಚ್ಚೇ ದಿನದ ಸುಳ್ಳುಗಳನ್ನು ಹೇಳದೆ ನಮ್ಮ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸಿ ಹಲವು ಸಮಸ್ಯೆ ಬಗ್ಗೆ ಕೇಂದ್ರ ಸರಕಾರದ ನಿಲುವು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು.

ಭದ್ರಾವತಿಯ ವಿಐಎಸ್‌ಎಲ್‌ ಕಾರ್ಖಾನೆಗೆ ಯಾವಾಗ ಜೀವ ತುಂಬುವಿರಿ? ಸಾಗರ- ತಾಳಗುಪ್ಪ ಮಾರ್ಗವನ್ನು ಕೊಂಕಣ ರೈಲ್ವೆಗೆ ಸೇರಿಸುವುದಾಗಿ ನಿಮ್ಮ ಸಂಸದರು ಹಿಂದಿನ ಚುನಾವಣೆಯಲ್ಲಿ ತಿಳಿಸಿದ್ದರೂ ಯಾಕೆ ಇಲ್ಲಿವರೆಗೆ ಈ ಬೇಡಿಕೆ ಈಡೇರಿಲ್ಲ. ಯಾವಾಗ ಸಂಶೋಧನೆ ನಡೆಸಿ ಅಡಕೆ ಹಾನಿಕರವಲ್ಲವೆಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವಿರಿ. ಈ ಬಗ್ಗೆ ಉತ್ತರಿಸಬೇಕೆಂದು ಒತ್ತಾಯಿಸಿದರು.

ಕಸ್ತೂರಿ ರಂಗನ್‌ ವರದಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಮಲೆನಾಡಿಗರ ಪರವಾಗಿ ಅರ್ಜಿ ಸಲ್ಲಿಸುತ್ತಿರಾ, ರೈತರ ಸಾಲ ಮನ್ನಾ ಯಾವಾಗ, ದುಬಾರಿಯಾಗಿರುವ ಪೆಟ್ರೋಲ್‌, ಡೀಸೆಲ್‌ ಬೆಲೆ ದರ ಕಡಿಮೆ ಯಾವಾಗ ಮಾಡುತ್ತೀರಾ, ಭೂಗತ ಪಾತಕಿ ದಾವೂದ್‌ ಇಬ್ರಾಹಿಂನನ್ನು ಯಾವಾಗ ಹಿಡಿದು ತರುವಿರಿ. ಈ ಬಗ್ಗೆ ಉತ್ತರಿಸಬೇಕೆಂದರು.

ಮಲ್ಯ ಮತ್ತು ನೀರವ್‌ ಮೋದಿಗೆ ಶಿಕ್ಷೆ ಯಾವಾಗ, ಇವರಿಂದ ಯಾವಾಗ ಹಣ ವಸೂಲಿ ಮಾಡುತ್ತೀರಿ, ಸ್ವಿಸ್‌ ಬ್ಯಾಂಕ್‌ ಹಣ ಯಾವಾಗ ತರುತ್ತೀರಿ, ಯುವಜನರಿಗೆ ಉದ್ಯೋಗ ಯಾವಾಗ ನೀಡುವಿರಿ. ನೀವು 2014ರ ಪೂರ್ವದಲ್ಲಿ ಹೇಳಿದಂತೆ ಅಗ್ಗದ ದರದಲ್ಲಿ ಯಾವಾಗ ಅಡುಗೆ ಅನಿಲ ನೀಡುವಿರಿ ಎಂಬುದು ಸೇರಿದಂತೆ ಹಲವುಪ್ರಶ್ನೆಗಳಿಗೆ ಮೋದಿ ಅವರು ಉತ್ತರಿಸಬೇಕೆಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಮಾಲತೇಶ್‌ ಬೊಮ್ಮನಕಟ್ಟೆ, ಗಿರೀಶ್‌ ನಾಯಕ್‌, ಕಿರಣ್‌ ಕುಮಾರ್‌, ಮಂಜುನಾಥ ನವುಲೆ, ರಾಜಪ್ಪ ದೇವಕಾತಿಕೊಪ್ಪ, ದಸ್ತಗೀರ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ