ಆ್ಯಪ್ನಗರ

‘ಜನರಿಗೆ ತಕ್ಕ ಯೋಜನೆ ಅನುಷ್ಠಾನ ಅಸಾಧ್ಯ’

ಜನಸಂಖ್ಯೆ ಹೆಚ್ಚಳ ವೇಗಕ್ಕೆ ಅನುಗುಣವಾಗಿ ಸರಕಾರದ ಯೋಜನೆ ರೂಪಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ತಾ.ಪಂ. ಪ್ರಭಾರ ಅಧ್ಯಕ್ಷ ಸುರೇಶ್‌ನಾಯ್ಕ ಹೇಳಿದರು.

Vijaya Karnataka 12 Jul 2019, 5:00 am
ಶಿಕಾರಿಪುರ: ಜನಸಂಖ್ಯೆ ಹೆಚ್ಚಳ ವೇಗಕ್ಕೆ ಅನುಗುಣವಾಗಿ ಸರಕಾರದ ಯೋಜನೆ ರೂಪಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ತಾ.ಪಂ. ಪ್ರಭಾರ ಅಧ್ಯಕ್ಷ ಸುರೇಶ್‌ನಾಯ್ಕ ಹೇಳಿದರು.
Vijaya Karnataka Web SMR-11SKP1-1


ಪಟ್ಟಣದಲ್ಲಿ ಗುರುವಾರ ತಾಲೂಕು ಆರೋಗ್ಯ ಇಲಾಖೆ, ಚನ್ನಮಲ್ಲಿಕಾರ್ಜುನ ಶಾಲೆ ಆಯೋಜಿಸಿದ್ದ ವಿಶ್ವ ಜನಸಂಖ್ಯೆ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಮಿತಿ ಮೀರಿದ ಜನಸಂಖ್ಯೆಗೆ ಮೂಲ ಸೌಕರ‍್ಯ ಕಲ್ಪಿಸಲು ತೊಂದರೆ ಆಗುತ್ತದೆ, ಯೋಜನೆ ನಿರ್ದಿಷ್ಟ ಗುರಿ ಮುಟ್ಟುವುದಿಲ್ಲ, ದೇಶದ ಪ್ರಗತಿಗೂ ಅದು ಮಾರಕವಾಗುತ್ತದೆ. ಜನಸಂಖ್ಯೆ ನಿಯಂತ್ರಣಕ್ಕೆ ಎಲ್ಲರೂ ಆದ್ಯತೆ ನೀಡಬೇಕು, ಜನಸಂಖ್ಯೆ ಹೆಚ್ಚಳದ ದುಷ್ಪರಿಣಾಮ ಕುರಿತು ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸ ಆಗಬೇಕಿದೆ ಎಂದರು.

ಜಿ.ಪಂ.ಸದಸ್ಯೆ ಮಮತಾಸಾಲಿ ಮಾತನಾಡಿ, ವಲಸೆ, ಅನಾರೋಗ್ಯ, ಅಪೌಷ್ಟಿಕತೆಗೂ, ಆಹಾರ, ನಿರುದ್ಯೋಗ ಸಮಸ್ಯೆಗೂ ಜನಸಂಖ್ಯೆ ಹೆಚ್ಚಳ ಕಾರಣವಾಗುತ್ತದೆ. ಯೋಜನೆ ಅರ್ಹರಿಗೆ ತಲುಪುವ ಬದಲು ಅನರ್ಹರ ಪಾಲಾಗುತ್ತಿದೆ. ಎಲ್ಲರಲ್ಲೂ ದೇಶಪ್ರೇಮ ಮೂಡಬೇಕು. ಅರ್ಹರಿಗೂ ಸೌಲಭ್ಯ ಸಿಗಲು ಎಲ್ಲರೂ ಗಮನ ನೀಡಬೇಕು. ಮಿತ ಕುಟುಂಬ ಸುಖಿ ಕುಟುಂಬ ಈ ಘೋಷಣೆ ಎಲ್ಲರಿಗೂ ಆದರ್ಶವಾಗಬೇಕೆಂದರು. ತಾಲೂಕು ವೈದ್ಯಾಧಿಕಾರಿ ಮಂಜುನಾಥ ನಾಗಲೀಕರ ಅಧ್ಯಕ್ಷ ತೆ ವಹಿಸಿದ್ದರು. ಪ್ರಾಚಾರ‍್ಯ ಮೋಹನ್‌ಕುಮಾರ್‌, ಆರೋಗ್ಯ ಇಲಾಖೆಯ ಪಾಂಡು, ಜ್ಯೋತಿಕಿರಣ್‌, ಸುರೇಶ್‌, ಸೌಭಾಗ್ಯ, ವಿದ್ಯಾರ್ಥಿಗಳು, ಚನ್ನಮಲ್ಲಿಕಾರ್ಜುನ ಶಾಲೆ ಶಿಕ್ಷ ಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ