ಆ್ಯಪ್ನಗರ

ಕಲಹಕ್ಕೆ ಬೇಸತ್ತು ಗಂಡನನ್ನ ಕೊಂದ ಪತ್ನಿ

ಕೊಲೆಯಾದ ವ್ಯಕ್ತಿ ಚಿತ್ರದುರ್ಗ ತಾಲೂಕಿನ ಸಜ್ಜನಕೆರೆ ಗ್ರಾಮದ ದಾಸಪ್ಪ (35). ಸಲಬೊಮ್ಮನಹಳ್ಳಿ ಗ್ರಾಮದ ನೇತ್ರಾವತಿ ಎಂಬವರನ್ನ 10 ವರ್ಷದ ಹಿಂದೆ ಮದುವೆ ಆಗಿದ್ದರು. ಬೊಮ್ಮನಹಳ್ಳಿಯಲ್ಲಿ ಮನೆ ಕಟ್ಟಿಕೊಂಡು ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

Vijaya Karnataka 13 Mar 2019, 12:52 pm
ಐಮಂಗಲ: ಹೆಂಡತಿಯೇ ತನ್ನ ಗಂಡನನ್ನು ಕೊಲೆ ಮಾಡಿ ದೇಹವನ್ನು ಅರೆ ಬರೆಯಾಗಿ ಕಲ್ಲು ಮಣ್ಣಿನಿಂದ ಮುಚ್ಚಿ ಹಾಕಿರುವ ಘಟನೆ ಹೋಬಳಿಯ ಸಲಬೊಮ್ಮನಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
Vijaya Karnataka Web crime_1


ಕೊಲೆಯಾದ ವ್ಯಕ್ತಿ ಚಿತ್ರದುರ್ಗ ತಾಲೂಕಿನ ಸಜ್ಜನಕೆರೆ ಗ್ರಾಮದ ದಾಸಪ್ಪ (35). ಸಲಬೊಮ್ಮನಹಳ್ಳಿ ಗ್ರಾಮದ ನೇತ್ರಾವತಿ ಎಂಬವರನ್ನ 10 ವರ್ಷದ ಹಿಂದೆ ಮದುವೆ ಆಗಿದ್ದರು. ಬೊಮ್ಮನಹಳ್ಳಿಯಲ್ಲಿ ಮನೆ ಕಟ್ಟಿಕೊಂಡು ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇಬ್ಬರು ಗಂಡು ಮಕ್ಕಳಿದ್ದು ಗಂಡ ಹೆಂಡತಿ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಸಂಬಂಧಿಗಳು ಇಬ್ಬರಿಗೂ ಬುದ್ಧಿವಾದ ಹೇಳುತ್ತಲೇ ಇದ್ದರು. ಆದರೆ ಭಾನುವಾರ ರಾತ್ರಿ ಗಂಡ ಹೆಂಡಿರ ನಡುವೆ ಕಲಹ ವಿಕೋಪಕ್ಕೇರಿ ನೇತ್ರಾವತಿ ಕಬ್ಬಿಣದ ಊದುಗೊಳವೆಯಿಂದ ತನ್ನ ಗಂಡನಿಗೆ ಬಲವಾಗಿ ಹೊಡೆದಿದ್ದಾರೆ. ಆ ಹೊಡೆತಕ್ಕೆ ಸ್ಥಳದಲ್ಲಿಯೇ ಸತ್ತ ಆತನ ಶವವನ್ನ ಪಾಳು ಗೋಡೆಯ ಕೆಳಗೆ ಹಾಕಿದ್ದಾರೆ. ಗೋಡೆ ಕುಸಿದು ಮೃತಪಟ್ಟ ಎಂದು ಬಿಂಬಿಸಿ, ತನ್ನ ಗಂಡ ಕಳೆದ ಎರಡು ದಿನಗಳಿಂದ ಮನೆಗೆ ಬಂದಿಲ್ಲವೆಂದು ಗಂಡನ ಊರಾದ ಸಜ್ಜನ ಕೆರೆಯಲ್ಲಿ ಇನ್ನಿತರೆಡೆ ಹುಡುಕಾಟ ನಡೆಸಿದ್ದರು. ಮನೆಯಲ್ಲಿ ಬಿದ್ದ ರಕ್ತದ ಕಲೆಗಳನ್ನು ಸಗಣಿಯಿಂದ ಸಾರಣೆ ಮಾಡಿ ಗುರುತು ಸಿಗದಂತೆ ಮಾಡಿದ್ದರು.

ಗ್ರಾಮಸ್ಥರು ಐಮಂಗಲ ಠಾಣೆಗೆ ಮಾಹಿತಿ ನೀಡಿದ್ದು ಇದರನ್ವಯ ಐಮಂಗಲ ಪೊಲೀಸ್‌ ಠಾಣೆಯ ಪಿಎಸ್‌ಐ ಎಚ್‌.ಲಿಂಗರಾಜು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ