ಆ್ಯಪ್ನಗರ

ಶಿವಮೊಗ್ಗ: ಮಲೆನಾಡಿನ ದಟ್ಟಾರಣ್ಯದ ಹಾದಿಯಲ್ಲಿ ಕಾಡುಕೋಣ ಸಖತ್‌ ದರ್ಶನ

ಮಲೆನಾಡು ಅಂದ್ರೆನೇ ಒಂದು ಅಂದ ಚಂದ.. ಮಳೆಗಾಲದಲ್ಲಂತೂ ಹಸಿರು ಸ್ವರ್ಗವೇ ಸರಿ.. ದಟ್ಟಾರಣ್ಯದಲ್ಲಿ ಹಲವು ವನ್ಯಜೀವಿಗಳಿದ್ದು, ಆಗಾಗ ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಸರ್‌ಪ್ರೈಸ್‌ ವಿಸೀಟ್‌ ನೀಡ್ತಾವೆ. ಅದರಂತೆ ಕಾಡುಕೋಣವೊಂದು ಪ್ರವಾಸಿಗರ ಕಾರ್‌ಗೆ ಸಡನ್‌ ಆಗಿ ದರ್ಶನ ನೀಡಿ, ಪ್ರವಾಸಿಗರ ಎದೆಯಲ್ಲಿ ನಡುಕ ಹುಟ್ಟಿಸಿತ್ತು.

Vijaya Karnataka Web 10 Jul 2020, 6:51 pm
ಶಿವಮೊಗ್ಗ: ಮಳೆಗಾಲದಲ್ಲಿ ಮಲೆನಾಡಿನ ದಟ್ಟಾರಣ್ಯದಲ್ಲಿ ಸಾಗುವುದೇ ಒಂದು ಆಹ್ಲಾದಕರ ಅನುಭವ. ಈ ಅನುಭವದ ಜೊತೆಗೆ ನೀವು ಹೋಗುತ್ತಿರುವ ಹಸಿರು ಕಾನನದ ರಸ್ತೆಯಲ್ಲಿ ಕಾಡುಕೋಣ ಕಂಡರೆ ಏನಾಗಬೇಡ. ಎಂಥವರಿಗಾದರೂ ರೋಮಾಂಚನದ ಜೊತೆಗೆ ಎದೆ ನಡುಗುವುದು ಸಹಜ.
Vijaya Karnataka Web wild bison crossing road in shivamogga
ಶಿವಮೊಗ್ಗ: ಮಲೆನಾಡಿನ ದಟ್ಟಾರಣ್ಯದ ಹಾದಿಯಲ್ಲಿ ಕಾಡುಕೋಣ ಸಖತ್‌ ದರ್ಶನ


ಹೌದು, ಹೊಸನಗರ ತಾಲೂಕು ಸಾವೇಹಕ್ಲು ರಸ್ತೆಯಲ್ಲಿ ಮಾಸ್ತಿಕಟ್ಟೆಯ ಬಳಿ ಕಾಡುಕೋಣ ದಾರಿಹೋಕರಿಗೆ ದರ್ಶನ ನೀಡಿದೆ. ಸ್ಥಳೀಯರು ಕಾರಿನಲ್ಲಿ ಹೋಗುವಾಗ ಕಾಡುಕೋಣ ಕಂಡುಬಂದಿದ್ದು, ದೃಶ್ಯವನ್ನು ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಕಾಡುಕೋಣಗಳು ತೀರ ಅಪಾಯಕಾರಿ ಅಥವಾ ದಾಳಿ ಸ್ವಭಾವದವಲ್ಲ. ಮರಿ ಇದ್ದಾಗ ಅಥವಾ ತಮಗೆ ಅಪಾಯ ಎದುರಾದಾಗ ಮಾತ್ರ ದಾಳಿ ಮಾಡುವ ಸಾಧ್ಯತೆ ಇದೆ. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಅರಣ್ಯದಲ್ಲಿ ಅನೇಕ ವನ್ಯಜೀವಿ ಪ್ರಭೇದಗಳಿದ್ದು, ಆಗಾಗ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಸರ್‌ಪ್ರೈಸ್‌ ವಿಸಿಟ್‌ ಕೊಡುತ್ತಲೆ ಇರುತ್ತವೆ.

ವರುಣನ ಆರ್ಭಟ: ಮೈದುಂಬಿದ ಮಲೆನಾಡಿನ ನದಿಗಳು

ಕೈಗೆ ಸಿಕ್ಕ ಕಡವೆ
ಇನ್ನು, ಜಿಂಕೆ ಸೇರಿ ಇತರ ವನ್ಯಜೀವಿಗಳು ಮಾನವನ ನೆರಳು ಕಂಡರೆ ಮೈಲು ದೂರ ಓಡುತ್ತವೆ. ಆದರೆ, ಜೋಗದ ಬಳಿ ಇತ್ತೀಚೆಗೆ ಪ್ರವಾಸಿಗರೊಬ್ಬರಿಗೆ ರಸ್ತೆ ಮಗ್ಗಲಿಗೆ ಬಂದ ಹೆಣ್ಣು ಕಡವೆ ಕೈಗೆ ಸಿಕ್ಕು ಅಚ್ಚರಿ ಮೂಡಿಸಿದೆ. ಕಡವೆಯನ್ನು ಮುಟ್ಟಿ ಪ್ರವಾಸಿಗರು ಖುಷಿ ಪಟ್ಟಿದ್ದಾರೆ.

ಮಲೆನಾಡಲ್ಲಿ ಭೂ ಕುಸಿತ ಆತಂಕ ತಿಂಗಳಲ್ಲಿ ಸರಕಾರಕ್ಕೆ ವರದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ