ಆ್ಯಪ್ನಗರ

ವೇತನ ಸಿಗದೇ ಗೃಹರಕ್ಷಣೆಗೆ ಪರದಾಟ

ಸಾರ್ವಜನಿಕರಿಗೆ ರಕ್ಷ ಣೆ ನೀಡುವ ಕಾರ‍್ಯದಲ್ಲಿ ಪೊಲೀಸರಂತೆ ಹಗಲಿರುಳೂ ಶ್ರಮಿಸುವ ಗೃಹರಕ್ಷ ಕ ದಳದ ಸಿಬ್ಬಂದಿಗೆ ಸರಕಾರ ವೇತನ ನೀಡುವಲ್ಲಿ ವಿಫಲಗೊಂಡಿದ್ದು, ಕಳೆದ ಮೂರ್ನಾಲ್ಕು ತಿಂಗಳಿಂದ ಸಿಬ್ಬಂದಿ ದೈನಂದಿನ ಗೃಹಕೃತ್ಯದ ಖರ್ಚುವೆಚ್ಚಗಳಿಗೆ ಪರದಾಡುವಂತಾಗಿದೆ.

Vijaya Karnataka 10 Aug 2018, 5:00 am
ರಿಪ್ಪನ್‌ಪೇಟೆ: ಸಾರ್ವಜನಿಕರಿಗೆ ರಕ್ಷ ಣೆ ನೀಡುವ ಕಾರ‍್ಯದಲ್ಲಿ ಪೊಲೀಸರಂತೆ ಹಗಲಿರುಳೂ ಶ್ರಮಿಸುವ ಗೃಹರಕ್ಷ ಕ ದಳದ ಸಿಬ್ಬಂದಿಗೆ ಸರಕಾರ ವೇತನ ನೀಡುವಲ್ಲಿ ವಿಫಲಗೊಂಡಿದ್ದು, ಕಳೆದ ಮೂರ್ನಾಲ್ಕು ತಿಂಗಳಿಂದ ಸಿಬ್ಬಂದಿ ದೈನಂದಿನ ಗೃಹಕೃತ್ಯದ ಖರ್ಚುವೆಚ್ಚಗಳಿಗೆ ಪರದಾಡುವಂತಾಗಿದೆ.
Vijaya Karnataka Web without salary homeguards suffering
ವೇತನ ಸಿಗದೇ ಗೃಹರಕ್ಷಣೆಗೆ ಪರದಾಟ


ಪಟ್ಟಣದ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸುಮಾರು ಇಪ್ಪತ್ತೈದಕ್ಕೂ ಅಧಿಕ ಸಂಖ್ಯೆಯಲ್ಲಿ ಗೃಹರಕ್ಷ ಕ ದಳದವರು ಕಾರ‍್ಯನಿರ್ವಹಿಸುತ್ತಿದ್ದಾರೆ. ಪೊಲೀಸ್‌ ಇಲಾಖೆಯವರ ಜತೆ ಜಾತ್ರಾಮಹೋತ್ಸವ, ಗಣ್ಯರ ಭೇಟಿ, ಚುನಾವಣೆ, ಅಪಘಾತ, ಸಂಚಾರ ನಿಯಂತ್ರಣ ಮುಂತಾದ ನಿತ್ಯದ ಸಮಸ್ಯೆಗಳಿಗೆ ಶಾಂತಿ ಸುವ್ಯವಸ್ಥೆಗಾಗಿ ಇವರನ್ನು ನಿಯೋಜಿಸಲಾಗುತ್ತಿದೆ. ಆದರೆ, ಈ ಸಿಬ್ಬಂದಿಗೆ ನಾಲ್ಕು ತಿಂಗಳಿಂದ ವೇತನವಿಲ್ಲದೇ ದುಡಿಯುಬೇಕಾಗಿದ್ದು ಕುಟುಂಬ ನಿರ್ವಹಣೆ ದುಸ್ತರವಾಗಿದೆ. ಕೃಷಿ ಕೂಲಿ ಕೆಲಸಕ್ಕೆ ಹೋದರೆ ಕೈತುಂಬಾ ಹಣಬರುತ್ತದೆ. ಇಲ್ಲಿ ಬಂದು ಹಗಲಿರುಳು ಮಳೆ ಬಿಸಿಲು ಚಳಿ ಎನ್ನದೇ ಕರ್ತವ್ಯ ನಿರ್ವಹಿಸಿದರೂ ಸಂಬಳ ಸಿಗುತ್ತಿಲ್ಲ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಗೃಹರಕ್ಷ ಕದಳದ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. ಅಪಘಾತದಂತಹ ಸ್ಥಳಗಳಿಗೆ ನಮ್ಮನ್ನು ಕಳಿಸುತ್ತಾರೆ. ಅಲ್ಲಿಗೆ ಹೋಗಿ ಬಂದರೂ ಟಿಎ ಡಿಎ ನೀಡಲು ಹಿಂದೇಟು ಹಾಕುತ್ತಾರೆ. ನಮ್ಮ ಗೋಳು ಕೇಳುವವರು ಯಾರೂ ಇಲ್ಲದಾಗಿದೆ. ಹಾಗಾದರೆ ನಾವು ಕುಟುಂಬ ನಿರ್ವಹಣೆ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆ ಸಿಬ್ಬಂದಿಯದು.

ಕನಿಷ್ಠ ವೇತನದಲ್ಲಿ ಗರಿಷ್ಠಮಟ್ಟದ ಕಾರ‍್ಯ ನಿರ್ವಹಿಸುತ್ತಿರುವ ಗೃಹರಕ್ಷ ಕದಳದ ಸಿಬ್ಬಂದಿಯ ಕಡೆಗೆ ಎಸ್ಪಿ ಇನ್ನಾದರೂ ಗಮನಹರಿಸಿ ತಕ್ಷ ಣ ವೇತನ ನೀಡಲು ಮುಂದಾಗಬೇಕಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ