ಆ್ಯಪ್ನಗರ

ಹದಗೆಟ್ಟಿದೆ ಆಸ್ಪತ್ರೆ ವ್ಯವಸ್ಥೆ: ಆರೋಪ

ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ಇಲ್ಲಿನ ಉಪವಿಭಾಗೀಯ ಆಸ್ಪತ್ರೆ ವ್ಯವಸ್ಥೆ ಸಂಪೂರ್ಣ ಹದಗೆಡುತ್ತಿದ್ದು, ರೋಗಿಗಳ ಶೋಷಣೆ ಮಾಡುವ ಭ್ರಷ್ಟವೈದ್ಯರನ್ನು ಸಂಘಟನೆಗಳ ಮೂಲಕ ಸಂರಕ್ಷಿಸಲಾಗುತ್ತಿದೆ ಎಂದು ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಆರೋಪಿಸಿದರು.

Vijaya Karnataka 30 Jul 2019, 5:00 am
ಸಾಗರ : ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ಇಲ್ಲಿನ ಉಪವಿಭಾಗೀಯ ಆಸ್ಪತ್ರೆ ವ್ಯವಸ್ಥೆ ಸಂಪೂರ್ಣ ಹದಗೆಡುತ್ತಿದ್ದು, ರೋಗಿಗಳ ಶೋಷಣೆ ಮಾಡುವ ಭ್ರಷ್ಟವೈದ್ಯರನ್ನು ಸಂಘಟನೆಗಳ ಮೂಲಕ ಸಂರಕ್ಷಿಸಲಾಗುತ್ತಿದೆ ಎಂದು ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಆರೋಪಿಸಿದರು.
Vijaya Karnataka Web SMR-29SGR9


ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ನೌಕರರನ್ನು ಪ್ರತಿನಿಧಿಸುವ ಸಂಘಟನೆಗಳ ಮೂಲಕ ಭ್ರಷ್ಟಾಚಾರವನ್ನು ಪೋಷಣೆ ಮಾಡಲಾಗುತ್ತಿದೆ. ಅಧಿಕಾರಿಗಳ ಪರವಾಗಿ ಯಾವಾಗಲೂ ಕೆಲಸ ಮಾಡುವ ಮಾ.ಸ.ನಂಜುಂಡಸ್ವಾಮಿ ಆಸ್ಪತ್ರೆಯಲ್ಲಿನ ಸಮಸ್ಯೆಗಳ ಪರಿಹಾರದ ಕಾರ‍್ಯವನ್ನು ತಮ್ಮ ಸಂಘಟನೆ ಮೂಲಕ ಮಾಡಬೇಕು. ಆದರೆ ವಾಸ್ತವವಾಗಿ ಹಾಗೆ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಸರಕಾರಿ ಆಸ್ಪತ್ರೆಗೆ ಹೊಸ ವೈದ್ಯರು ಬರದಂತೆ ನೋಡಿಕೊಳ್ಳಲಾಗುತ್ತಿದೆ. ಹೊಸ ವೈದ್ಯರು ಕರ್ತವ್ಯಕ್ಕೆ ಬಂದರೆ ಅವರಿಗೆ ವಿವಿಧ ರೀತಿಯ ಕಿರುಕುಳ ನೀಡಿ ಓಡಿಸಲಾಗುತ್ತಿದೆ. ಇದರಿಂದ ಹೊಸ ವೈದ್ಯರು ಸರಕಾರಿ ಆಸ್ಪತ್ರೆಗೆ ಕರ್ತವ್ಯಕ್ಕೆ ಬರಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ 20 ವರ್ಷಗಳಿಂದ ನಂಜುಂಡಸ್ವಾಮಿ ಅವರು ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಧಿಕಾರಕ್ಕೆ ಬರುವ ಪಕ್ಷ ಮತ್ತು ಜನಪ್ರತಿನಿಧಿಗಳ ಜತೆ ರಾಜಕೀಯ ಮಾಡುತ್ತಿದ್ದಾರೆ. ನನ್ನ ಪ್ರಕರಣದಲ್ಲಿ ಸಹ ಮಾ.ಸ.ನಂಜುಂಡಸ್ವಾಮಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಆರೋಪಿಸಿದರು.

ಡಾ.ಪ್ರಕಾಶ್‌ ಬೋಸ್ಲೆ ಅವರ ಹಗರಣಗಳನ್ನು ಪ್ರಶ್ನಿಸಿದ ಕಾರಣ ನನ್ನ ವಿರುದ್ಧ ಹಾಗೂ ನ್ಯಾಯ ಕೇಳಲು ಬಂದ ಗುತ್ತಿಗೆದಾರ, ಗುತ್ತಿಗೆ ಕಾರ್ಮಿಕರ ವಿರುದ್ಧ ಸುಳ್ಳು ದೂರು ದಾಖಲು ಮಾಡಲಾಗಿದೆ. ತೆಗೆದು ಹಾಕಲಾದ 13 ಜನ ಗುತ್ತಿಗೆ ಕಾರ್ಮಿಕರನ್ನು ಪುನಾ ಕೆಲಸಕ್ಕೆ ಸೇರಿಸಿಕೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಯವರು ಅವಕಾಶ ಕಲ್ಪಿಸಿದ್ದು, ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು. ತಾಪಂ ಸದಸ್ಯ ಅಶೋಕ ಬರದವಳ್ಳಿ, ಯುವ ಕಾಂಗ್ರೆಸ್‌ ಅಧ್ಯಕ್ಷ ಸುಧಾಕರ ಕುಗ್ವೆ, ಗಣಪತಿ ಹೆನಗೆರೆ, ಗಿರೀಶ್‌ ಕೋವಿ, ರವಿ ಲಿಂಗನಮಕ್ಕಿ, ಎಸ್‌.ಲಿಂಗರಾಜ್‌, ನಾಗರಾಜ ಮಜ್ಜಿಗೆರೆ, ಷಣ್ಮುಖ ಸೂರನಗದ್ದೆ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ