ಆ್ಯಪ್ನಗರ

ಭದ್ರಾವತಿಯಲ್ಲಿ ಶ್ರೀ ಟೀಕಾಚಾರ್ಯರ ಆರಾಧನೆ

ಹಳೇನಗರದ ಶ್ರೀರಾಘವೇಂದ್ರಸ್ವಾಮಿ, ಶ್ರೀವಾದಿರಾಜ ಸ್ವಾಮಿಗಳ ಮಠದಲ್ಲಿ ಟೀಕಾಚಾರ್ಯರ ಆರಾಧನೆಯನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

Vijaya Karnataka 25 Jul 2019, 5:00 am
ಭದ್ರಾವತಿ: ಹಳೇನಗರದ ಶ್ರೀರಾಘವೇಂದ್ರಸ್ವಾಮಿ, ಶ್ರೀವಾದಿರಾಜ ಸ್ವಾಮಿಗಳ ಮಠದಲ್ಲಿ ಟೀಕಾಚಾರ್ಯರ ಆರಾಧನೆಯನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
Vijaya Karnataka Web SMR-24BDVT2


ಆರಾಧನೆ ನಿಮ್ಮಿತ್ತ ಪ್ರಾಣದೇವರು ಹಾಗು ಯತಿವರ್ಯರ ವೃಂದಾವನಕ್ಕೆ ವಾಯುಸ್ತುತಿ ಪುನಶ್ಚರಣೆಯ ಮೂಲಕ ಅಭಿಷೇಕ ಮಾಡಿ ವಿಶೇಷ ಅಲಂಕಾರ ಮಾಡಲಾಯಿತು. ಪುಷ್ಪಾಲಂಕೃತ ರಥದಲ್ಲಿ ಮುಖ್ಯಪ್ರಾಣ ದೇವರ ಸಹಿತವಾದ ಯತಿಗಳ ರಜತ ಬೃಂದಾವನವನ್ನು ಇರಿಸಿ ಮಠದಿಂದ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದವರೆಗೆ ನಡೆದ ರಥೋತ್ಸವದಲ್ಲಿ ಭಕ್ತಾದಿಗಳು ಭಜನೆಮಾಡುತ್ತಾ ರಥವನ್ನು ಎಳೆದರು.

ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಬ್ರಾಹ್ಮಣರ ಬೀದಿಯ ಮೂಲಕ ರಥೋತ್ಸವವು ಸಂಪನ್ನಗೊಂಡಿತು. ನಂತರ ಪಂಡಿತ ಕುಷ್ಟಗಿ ವಾಸುದೇವಮೂರ್ತಿಅವರಿಂದ ಶ್ರೀಜಯತೀರ್ಥರ ಕುರಿತು ಉಪನ್ಯಾಸ ನಡೆಯಿತು. ಆರಾಧನೆಗೆ ಬಂದ ಭಕ್ತಾದಿಗಳಿಗೆ ಮಠದಲ್ಲಿ ಅನ್ನಸಂತರ್ಪಣೆ, ಪ್ರಸಾದ ವಿನಿಯೋಗ ಮಾಡಲಾಯಿತು.

ಈ ಸಂದರ್ಭ ಮಠದ ಮುಖ್ಯಸ್ಥರಾದ ಮುರಳೀಧರ ತಂತ್ರಿ, ಸತ್ಯನಾರಾಯಣಾಚಾರ್‌, ಪಂಡಿತ ಗೋಪಾಲಕೃಷ್ಣಾಚಾರ್‌, ಜಿ.ರಮಾಕಾಂತ, ಸಣ್ಣಗಂಟಿ ನಾರಾಯಣಾಚಾರ್‌, ಗಂಟೆನಾರಾಯಣಾಚಾರ್‌, ಸುಬ್ರಹ್ಮಣ್ಯ, ಶ್ರೀಪತಿ ಸೇರಿದಂತೆ ಕರಾವಳಿ ವಿಪ್ರಬಳಗ, ಹರಿಪ್ರಿಯ ಮಹಿಳಾ ಸಂಘ, ಹರಿದಾಸ ಮಹಿಳಾ ಸಂಘಗಳು, ವಿವಿಧ ಸಂಘದ ಸದಸ್ಯರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ