ಆ್ಯಪ್ನಗರ

ಸಾಧನೆ ತೋರಿ ಬದುಕು ರೂಪಿಸಿದ ಯೋಗ

ಗುರಿ ಮತ್ತು ಛಲವಿರಬೇಕು, ಇಲ್ಲವೇ ನೋಡಿ ಕಲಿಯುವ ಆಸಕ್ತಿದಾಯಕ ಮನಸ್ಸಿರಬೇಕು. ಆಗ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ. ಇದಕ್ಕೆ ಶಿವಮೊಗ್ಗದ ಅಂತಾರಾಷ್ಟ್ರೀಯ ಯೋಗ ತಜ್ಞ ಎಸ್‌.ಗೋಪಾಲಕೃಷ್ಣ ಅವರೇ ನಿದರ್ಶನ.

Vijaya Karnataka 21 Jun 2019, 5:00 am
ಶಿವಮೊಗ: ಗುರಿ ಮತ್ತು ಛಲವಿರಬೇಕು, ಇಲ್ಲವೇ ನೋಡಿ ಕಲಿಯುವ ಆಸಕ್ತಿದಾಯಕ ಮನಸ್ಸಿರಬೇಕು. ಆಗ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ. ಇದಕ್ಕೆ ಶಿವಮೊಗ್ಗದ ಅಂತಾರಾಷ್ಟ್ರೀಯ ಯೋಗ ತಜ್ಞ ಎಸ್‌.ಗೋಪಾಲಕೃಷ್ಣ ಅವರೇ ನಿದರ್ಶನ.
Vijaya Karnataka Web SMG-2006-2-15-20 SMG RAGHAVENDRA


ಶಾಲಾ ದಿನಗಳಲ್ಲೇ ವೇದಿಕೆಯಲ್ಲಿ ಬೇರೆಯವರು ಯೋಗ ಪ್ರದರ್ಶನ ಮಾಡುತ್ತಿರುವುದನ್ನು ಗಮನಿಸಿ ಯೋಗದತ್ತ ಆಕರ್ಷಿತದರಾದ ಗೋಪಾಕೃಷ್ಣ, ಈ ಕ್ಷೇತ್ರದಲ್ಲೇ ಸಾಧನೆಯ ಹಾದಿ ಹಿಡಿದರು, ಬದುಕು ರೂಪಿಸಿಕೊಂಡರು. ಯೋಗ ಗುರು ನಾರಾಯಣಗೌಡ ಹಾಗೂ ಲಲಿತಾ ಅವರಿಂದ ಯೋಗ ತರಬೇತಿ ಪಡೆದುಕೊಂಡರು. ಕ್ರಮೇಣ ಅವರೇ ಶಿವಮೊಗ್ಗದಲ್ಲಿ ಶ್ರೀ ರಾಘವೇಂದ್ರ ಯೋಗ ಕೇಂದ್ರವನ್ನು ಆರಂಭಿಸುವ ಮೂಲಕ ಸಾವಿರಾರು ಯೋಗ ಪಟುಗಳನ್ನು ತಮ್ಮ ಗರಡಿಯಲ್ಲಿ ಪಳಗಿಸಿದ್ದಾರೆ.

ಗೋಪಾಲಕೃಷ್ಣ ಅವರು ದಿ.ಶಾಮಣ್ಣ ಹಾಗೂ ನಾಗರತ್ನಮ್ಮ ಅವರ ಪುತ್ರ. ಕಾಲೇಜು ದಿನಗಳಲ್ಲಿ ಯೂನಿವರ್ಸಿಟಿ ಚಾಂಪಿಯನ್‌, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ಪ್ರದರ್ಶನ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗೆಲ್ಲುವ ಮೂಲಕ ದೇಶದ ಹಿರಿಮೆ ಎತ್ತಿ ಹಿಡಿದ್ದಾರೆ. ಶಿವಮೊಗ್ಗ ಮಕ್ಕಳ ವಿದ್ಯಾಸಂಸ್ಥೆಯಲ್ಲಿ ಕೇಂದ್ರವನ್ನು ನಡೆಸುತ್ತಿದ್ದು, ನಿತ್ಯವೂ ಸಂಜೆ ಮತ್ತು ಬೆಳಗ್ಗೆ 6ರಿಂದ ಸಂಜೆ 7 ಗಂಟೆವರೆಗೆ ಯೋಗ ಅಭ್ಯಾಸವನ್ನು ಹೇಳಿಕೊಡಲಾಗುತ್ತಿದೆ.

2003ರಲ್ಲಿ ಅಂತಾರಾಷ್ಟ್ರೀಯ ಯೋಗ ಚಾಂಪಿಯನ್‌ ಶಿಪ್‌ನಲ್ಲಿ ಭಾಗವಹಿಸಿ ಬೆಳ್ಳಿ ಪದಕ ಗೆದ್ದಿದ್ದು, ಅವರ ಜೀವನದ ಅಮೂಲ್ಯ ಕ್ಷಣಗಳಲ್ಲೊಂದು. ಸುಮಾರು 26 ವರ್ಷಗಳಿಂದ ಯೋಗ ಶಿಕ್ಷಣವನ್ನು ಧಾರೆ ಎರೆಯುವ ಮೂಲಕ ಮಲೆನಾಡಿನ ಜನರಲ್ಲಿ ಆರೋಗ್ಯ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಯೋಗ ತರಗತಿ ಜತೆಗೆ ವಿನೋಬನಗರದ ಕಲ್ಲಳ್ಳಿಯಲ್ಲಿ ಯೋಗ ಥೆರಫಿ ಮಾಡುತ್ತಿದ್ದಾರೆ. ರಾಜ್ಯಮಟ್ಟದಲ್ಲಿ 11, ರಾಷ್ಟ್ರಮಟ್ಟದಲ್ಲಿ 8 ಚಿನ್ನ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇವರ ಯೋಗ ಸಾಧನೆಗೆ ಕರ್ನಾಟಕ ರಾಜ್ಯ ಯೋಗ ಸಂಸ್ಥೆ 'ಯೋಗ ಸಾಮ್ರಾಟ್‌' ಬಿರುದು ಹಾಗೂ 2007ರಲ್ಲಿ ಜಿಲ್ಲಾಡಳಿತ ಗಣ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ