ಆ್ಯಪ್ನಗರ

ಉತ್ತಮ ವ್ಯಕ್ತಿತ್ವಕ್ಕಾಗಿ ಯೋಗ

ಆಧುನಿಕ ಜಗತ್ತಿನಲ್ಲಿ ಯಾಂತ್ರಿಕ ಜೀವನ ನಡೆಸುತ್ತಿರುವ ಮನುಷ್ಯನ ಉತ್ತಮ ವ್ಯಕ್ತಿತ್ವ, ದೇಹಾರೋಗ್ಯಕ್ಕಾಗಿ ಯೋಗದ ಅವಶ್ಯವಿದೆ ಎಂದು ಜಡೆ ಮಹಾಂತ ಸ್ವಾಮೀಜಿ ಹೇಳಿದರು.

Vijaya Karnataka 23 Jun 2019, 5:00 am
ಶಿಕಾರಿಪುರ: ಆಧುನಿಕ ಜಗತ್ತಿನಲ್ಲಿ ಯಾಂತ್ರಿಕ ಜೀವನ ನಡೆಸುತ್ತಿರುವ ಮನುಷ್ಯನ ಉತ್ತಮ ವ್ಯಕ್ತಿತ್ವ, ದೇಹಾರೋಗ್ಯಕ್ಕಾಗಿ ಯೋಗದ ಅವಶ್ಯವಿದೆ ಎಂದು ಜಡೆ ಮಹಾಂತ ಸ್ವಾಮೀಜಿ ಹೇಳಿದರು.
Vijaya Karnataka Web SMR-21SKP2


ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ನಡೆದ ವಿಶ್ವಯೋಗ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಉತ್ತಮ ಪ್ರಜೆಗಳ ನಿರ್ಮಾಣದಲ್ಲಿ ಯೋಗದ ಮಹತ್ವ ಅಪಾರ. ಕೆಲಸದ ಒತ್ತಡ ಹಾಗೂ ಸಂದಿಗ್ಧ ಪರಿಸ್ಥಿತಿ ಸೂಕ್ತ ರೀತಿಯಲ್ಲಿ ನಿರ್ವಹಿಸಲು ಯೋಗ ಸಹಕಾರಿ ಎಂದರು.

ಸಂಸ್ಥೆಯ ಶೈಕ್ಷ ಣಿಕ ಸಲಹೆಗಾರ ಪ್ರೊ. ಎಸ್‌.ಎಸ್‌. ಗದಗ ಮಾತನಾಡಿ, ದೇಹ, ಮನಸ್ಸಿನ ಆರೋಗ್ಯ ವೃದ್ಧಿಸಿ ಏಕಾಗ್ರತೆ ಹೆಚ್ಚಿಸಲು ನಮಗೆ ದಿನನಿತ್ಯ ಯೋಗದ ಅಭ್ಯಾಸವು ಅವಶ್ಯಕ. ಯೋಗ ನಮ್ಮ ಜೀವನಕ್ಕೆ ಅಳವಡಿಸಿಕೊಂಡು ಅದರ ಉಪಯೋಗ ಪಡೆದುಕೊಳ್ಳೋಣ ಎಂದರು. ಸಂಸ್ಥೆ ಅಧ್ಯಕ್ಷ ಎಂ.ಬಿ. ಶಿವಕುಮಾರ್‌, ಮೈತ್ರಿ ಶಾಲೆ ಆಡಳಿತಾಧಿಕಾರಿ ಕೆ.ಆರ್‌.ದಯಾನಂದ ಪ್ರಾಸ್ತಾವಿಕ ಮಾತನಾಡಿದರು. ಕೆಆರ್‌ಸಿಎಸ್‌ ವಿದ್ಯಾರ್ಥಿಗಳು ಯೋಗನೃತ್ಯ ಪ್ರದರ್ಶಿಸಿದರು. ಪ್ರಾಂಶುಪಾಲ ಡಾ. ಕೆ.ಎಸ್‌. ದತ್ತಾತ್ರಿ, ಡಾ. ಎಂ ವೀರೇಂದ್ರ, ಡಾ. ವಿನಾಯಕ, ಕೆ.ಕುಬೇರಪ್ಪ, ವಿದ್ಯಾಶಂಕರ್‌, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ