ಆ್ಯಪ್ನಗರ

ಯುವಸಂಘಟನೆಗೆ ಸೂಕ್ತ ಮಾರ್ಗದರ್ಶನ ಅಗತ್ಯ: ಸಂಸದ

ಸದೃಢ ಭಾರತ ನಿರ್ಮಾಣದ ಉದ್ದೇಶದಿಂದ ಯುವ ಸಂಘಟನೆಯನ್ನು ಸೂಕ್ತ ಮಾರ್ಗದರ್ಶನದಿಂದ ಮುನ್ನಡೆಸಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

Vijaya Karnataka 24 Feb 2019, 5:00 am
ಸಾಗರ: ಸದೃಢ ಭಾರತ ನಿರ್ಮಾಣದ ಉದ್ದೇಶದಿಂದ ಯುವ ಸಂಘಟನೆಯನ್ನು ಸೂಕ್ತ ಮಾರ್ಗದರ್ಶನದಿಂದ ಮುನ್ನಡೆಸಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
Vijaya Karnataka Web SMR-23sgr6


ಇಲ್ಲಿನ ನೆಹರೂ ಮೈದಾನದಲ್ಲಿ ಎರಡು ದಿನಗಳ ಕಮಲ ಕಪ್‌ಅಡಿ ವಾಜಪೇಯಿ ಟ್ರೋಫಿ-2019 ಪ್ರೊ ಕಬಡ್ಡಿ ಪಂದ್ಯಾವಳಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಅವರು ಮಾತನಾಡಿದರು.

ಅಟಲ್‌ ಜಿಯವರು ರಾಜಕೀಯದಲ್ಲಿನ ಕ್ರೀಡಾ ಮನೋಭಾವದ ಅತ್ಯುತ್ತಮ ಮಾದರಿಯಾಗಿದ್ದಾರೆ. ಆದರೆ, ಕ್ರೀಡೆಯಲ್ಲಿ ರಾಜಕೀಯ ಮನೋಭಾವ ಇರಬಾರದು ಎಂಬುದು ಸಹ ಅವರ ಅಭಿಮತವಾಗಿತ್ತು. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಯುವಜನತೆಯನ್ನು ಕ್ರಿಯಾಶೀಲವಾಗಿಡುತ್ತದೆ ಎಂದರು.

ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಶಾಸಕ ಎಚ್‌.ಹಾಲಪ್ಪ, ಮುಂದಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಹೆಚ್ಚಿನ ಅನುದಾನ ತಂದು ಕ್ಷೇತ್ರದಲ್ಲಿ ಯುವಜನರ ಶ್ರೇಯೋಭಿವೃದ್ಧಿಗೆ ಅಗತ್ಯ ಯೋಜನೆ ಜಾರಿಗೆ ತರಲಾಗುತ್ತದೆ ಎಂದರು.

ತಾಲೂಕಿನಲ್ಲಿ ಕಬಡ್ಡಿ ಕ್ರೀಡೆಯನ್ನು, ಆಟಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಸುಮಾರು 6 ಲಕ್ಷ ರೂ. ಸ್ವಂತ ಹಣದಿಂದ ಪ್ರೋ ಕಬಡ್ಡಿ ನಡೆಸಲು ಮ್ಯಾಟ್‌ಗಳನ್ನು ತರಿಸಲಾಗಿದೆ. ಇದನ್ನು ಕಬಡ್ಡಿ ಪಂದ್ಯಾವಳಿಗೆ ಸೂಕ್ತ ನಿರ್ವಹಣೆ ಭರವಸೆ ಮೇಲೆ ಮುಂದಿನ ದಿನಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ ಎಂದರು.

ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಹೃಷಿಕೇಶ್‌ ಪೈ ಅಧ್ಯಕ್ಷ ತೆ ವಹಿಸಿದ್ದರು. ಬಿಜೆಪಿ ತಾಲೂಕು ಅಧ್ಯಕ್ಷ ಪ್ರಸನ್ನ ಕೆರೆಕೈ, ನಗರ ಅಧ್ಯಕ್ಷ ಆರ್‌.ಶ್ರೀನಿವಾಸ್‌, ಪ್ರಧಾನ ಕಾರ್ಯದರ್ಶಿ ಕೆ.ಆರ್‌.ಗಣೇಶಪ್ರಸಾದ್‌, ಜಿಲ್ಲಾ ಕಾರ್ಯದರ್ಶಿ ಚೇತನರಾಜ್‌ ಕಣ್ಣೂರು, ವಿ.ಮಹೇಶ್‌, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಅರುಣ ಕುಗ್ವೆ, ನಗರ ಆನಂದ ಜನ್ನೆಹಕ್ಲು, ಕೆ.ಜಿ.ಸಂತೋಷ್‌ , ಮಾಲತೇಶ್‌, ಅರವಿಂದ ರಾಯ್ಕರ್‌, ಸಂತೋಷ್‌ ಶೇಟ್‌, ಬಿ.ಟಿ.ರವೀಂದ್ರ ಮತ್ತಿತರರು ಹಾಜರಿದ್ದರು. ರಮೇಶ್‌ ಜನ್ನೆಹಕ್ಲು ಸ್ವಾಗತಿಸಿ, ಟಿ.ಡಿ.ಮೇಘರಾಜ್‌ ಪ್ರಾಸ್ತಾವಿಕ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ