ಆ್ಯಪ್ನಗರ

ಭ್ರಷ್ಟಾಚಾರ: ಗ್ರಾಪಂ ಪಿಡಿಒ ವಿರುದ್ಧ ವಾಗ್ದಾಳಿ

ವಸತಿ ಯೋಜನೆ ಹಾಗೂ ವಾರದ ಸಂತೆ ಶುಲ್ಕ ಸೇರಿದಂತೆ ಇತರೆ ಯೋಜನೆಗಳಲ್ಲಿ ನಡೆದ ಭ್ರಷ್ಟಾಚಾರ ಬಗ್ಗೆ ದಾಖಲೆ ಸಮೇತ ಸದಸ್ಯೆ ಮಾರಕ್ಕ ಆರೋಪಿಸಿ ಗ್ರಾಪಂ ಪಿಡಿಒ ವಿರುದ್ಧ ತೀವ್ರ ವಾಗ್ದಳಿ ನಡೆಸಿದ ಪ್ರಸಂಗ ತಾಲೂಕಿನ ವದನಕಲ್ಲು ಗ್ರಾಪಂನಲ್ಲಿ ಇತ್ತೀಚೆಗೆ ನಡೆಯಿತು.

ವಿಕ ಸುದ್ದಿಲೋಕ 10 Apr 2016, 3:43 pm
ಪಾವಗಡ:ವಸತಿ ಯೋಜನೆ ಹಾಗೂ ವಾರದ ಸಂತೆ ಶುಲ್ಕ ಸೇರಿದಂತೆ ಇತರೆ ಯೋಜನೆಗಳಲ್ಲಿ ನಡೆದ ಭ್ರಷ್ಟಾಚಾರ ಬಗ್ಗೆ ದಾಖಲೆ ಸಮೇತ ಸದಸ್ಯೆ ಮಾರಕ್ಕ ಆರೋಪಿಸಿ ಗ್ರಾಪಂ ಪಿಡಿಒ ವಿರುದ್ಧ ತೀವ್ರ ವಾಗ್ದಳಿ ನಡೆಸಿದ ಪ್ರಸಂಗ ತಾಲೂಕಿನ ವದನಕಲ್ಲು ಗ್ರಾಪಂನಲ್ಲಿ ಇತ್ತೀಚೆಗೆ ನಡೆಯಿತು.
Vijaya Karnataka Web
ಭ್ರಷ್ಟಾಚಾರ: ಗ್ರಾಪಂ ಪಿಡಿಒ ವಿರುದ್ಧ ವಾಗ್ದಾಳಿ


ಗ್ರಾಪಂ ಅಧ್ಯಕ್ಷೆ ಕಂಚಮ್ಮ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಗ್ರಾಪಂ ವ್ಯಾಪ್ತಿಯ ಪ್ರಗತಿ ವಿಚಾರ ಕುರಿತು ಸಭೆಯಲ್ಲಿ ವಿಷಯ ಮಂಡಿಸುತ್ತಿದ್ದಂತೆ ಯೋಜನೆಗಳ ದುರುಪಯೋಗದ ವಿರುದ್ಧ ದಾಖಲೆ ಸಮೇತ ಸಭೆಯಲ್ಲಿ ಗದ್ದಲ ನಡೆಸಿದ ಸದಸ್ಯೆ ಮಾರಕ್ಕ ನಾಗೇಂದ್ರ ಸದಸ್ಯರ ಗಮನ ಹಾಗೂ ಗ್ರಾಮಸಭೆ ನಡೆಸದೆ ನಿಯಮ ಉಲ್ಲಂಘಿಸಿ ನಾನಾ ವಸತಿ ಯೋಜ ನೆಯಲ್ಲಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಕೈಗೊಂಡ ಕಾರಣ ಬಡವರಿಗೆ ವಂಚನೆಯಾಗಿದೆ ಎಂದು ಪಿಡಿಒ ರವಿಕುಮಾರ್ ತರಾಟೆಗೆ ತೆಗೆದು ಕೊಂಡರು.

2015,16ನೇ ಸಾಲಿಗೆ ಐಎವೈ ಹಾಗೂ ಬವಸ ವಸತಿ ವಸತಿ ಸೇರಿದಂತೆ ಒಟ್ಟು 31ಮನೆಗಳು ಗ್ರಾಪಂಗೆ ಮಂಜೂರಾಗಿದ್ದು ಫಲಾನುಭವಿಗಳ ಆಯ್ಕೆ ಮಾಡುವಲ್ಲಿ ಗೊಂದಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ಗ್ರಾಮ ಸಭೆ ರದ್ದುಗೊಳಿಸಿ ವಸತಿ ಯೋಜನೆಯ ನೋಡಲ್ ಅಧಿಕಾರಿ ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಟ್ಟಪ್ಪ ಅವರನ್ನು ಸಭೆಯಿಂದ ವಾಪಸ್ಸು ಕಳುಹಿಸಲಾಗಿದೆ. ಆದರೂ ಸಹ ಸದಸ್ಯರ ಕಣ್ಣು ತಪ್ಪಿಸಿ ಸಭೆ ನಡೆದ ಬಗ್ಗೆ ಸುಳ್ಳು ದಾಖಲೆ ತಯಾರಿಸಿ ಇದೇ ಯೋಜನೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಬಹುತೇಕ ಮನೆ ಉಳ್ಳವರಿಗೆ ಮನೆ ಕಲ್ಪಿಸಿರುವುದು ಸಮಂಜಸವೇ ಎಂದು ಕಿಡಿ ಕಾರಿದರು.

ಇದೇ ಸಾಲಿನ 2ನೇ ಹಂತಕ್ಕೆ ಐಎವೈ ಹಾಗೂ ಬಸವ ವಸತಿ ಯೋಜನೆಯಲ್ಲಿ 49 ಮನೆಗಳ ಮರು ಮಂಜೂರಾಗಿದೆ. ಸ್ಥಳೀಯ ಪ್ರಭಾವಿ ವ್ಯಕ್ತಿಗಳ ತಾಳಕ್ಕೆ ಕುಣಿದ ಅಂದಿನ ಗ್ರಾಪಂ ಕಾರ್ಯದರ್ಶಿ ಮುದ್ದಪ್ಪ 3ರಿಂದ 5ಸಾವಿರ ಲಂಚಕ್ಕೆ ಶಾಮೀಲಾಗಿ ಕಡುಬಡವರಿಗೆ ವಂಚಿಸಿ ಶ್ರೀಮಂತರಿಗೆ ವಸತಿ ಸೌಲಭ್ಯ ಕಲ್ಪಿಸಿದ್ದಾರೆ. ಈ ಬಗ್ಗೆ ವಸತಿ ಪಟ್ಟಿಯನ್ನು ಪರಿಶೀಲಿಸಿ ನೋಡಿ ಎಂದು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.

ಸಾರ್ವಜನಿಕ ತೊಂದರೆ ಹಿನ್ನೆಲೆಯಲ್ಲಿ ಗ್ರಾಪಂ ವ್ಯಾಪ್ತಿಯ ಲಿಂಗದಹಳ್ಳಿ ರಸ್ತೆ ಪಕ್ಕದಲ್ಲಿ ನಡೆಯುವ ವಾರದ ಸಂತೆ ಗ್ರಾಮದ ಹೊರವಲಯದ ಗ್ರಾಮ ಠಾಣಾ ಜಾಗಕ್ಕೆ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿಗಳ ಆದೇಶ ಜಾರಿ ಮಾಡಿದ್ದು, ಈ ಬಗ್ಗೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಸಂತೆ ಸ್ಥಳಾಂತರಕ್ಕೆ ಆಸಕ್ತಿ ವಹಿಸಿದ ಹಾಲಿ ಗ್ರಾಪಂ ಪಿಡಿಒ ರವಿ ಕುಮಾರ್ ಕಳೆದ 4ವರ್ಷಗಳಿಂದ ವಸೂಲಿಯಾದ ಸಂತೆ ಶುಲ್ಕ ಸರಕಾರದ ಖಾತೆಗೆ ಜಮಾ ಮಾಡಿಲ್ಲ. ಈ ಬಗ್ಗೆ ದಾಖಲೆ ವಿವರ ನೀಡಲು ಮೀನಾ ಮೇಷ ಹಾಕುತ್ತಿದ್ದಾರೆ. ಸಂತೆ ಶುಲ್ಕ ವಸೂಲಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ಆಗಬೇಕಿದೆ ಎಂದು ಒತ್ತಾಯಿಸಿದರು.

ಕಳೆದ ಸಾಲಿನ 13,14ನೇ ಹಣಕಾಸಿನ ಹಣದಲ್ಲಿ ಅವ್ಯವಹಾರ ಸೇರಿದಂತೆ ಗ್ರಾಪಂ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸುಮಾರು 22ಲಕ್ಷ ರುಗಳ ವಂಚನೆ ನಡೆದಿರುವುದಾಗಿ ಆರೋಪಿಸಿ ವಸತಿ ಯೋಜನೆ, ಕುಡಿಯುವ ನೀರು ಹಾಗೂ ಗ್ರಾಪಂನ ನಾನಾ ಯೋಜನೆಯ ಅಕ್ರಮಗಳ ಪ್ರಕರಣ ಕುರಿತು ಗ್ರಾಪಂ ಅಧಿಕಾರಿಗಳ ವಿರುದ್ಧ ಗ್ರಾಮೀಣ ಹಾಗೂ ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಪಂ ಸಿಇಒ ಮಮತಾ ಅವರಿಗೆ ಕ್ರಮಕ್ಕೆ ದಾಖಲೆ ಸಮೇತ ದೂರು ಸಲ್ಲಿಸಿರುವುದಾಗಿ ಅವರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ