ಆ್ಯಪ್ನಗರ

Girls sent our during night at pg

ಪಿಜಿ ಖಾಲಿ ಮಾಡುವಾಗ ಮುಂಗಡ ಹಣ ವಾಪಾಸ್ಸು ಕೇಳಿದ್ದಕ್ಕೆ ಹಣ ನೀಡದೇ ವಿದ್ಯಾರ್ಥಿನಿಯರನ್ನು ರಾತ್ರೋ ರಾತ್ರಿ ಪಿಜಿಯಿಂದ ಹೊರ ಹಾಕಿರುವ ಘಟನೆ ನಗರದಲ್ಲಿ ನಡೆದಿದೆ.

Vijaya Karnataka 17 May 2018, 3:14 pm
ತುಮಕೂರು : ಪಿಜಿ ಖಾಲಿ ಮಾಡುವಾಗ ಮುಂಗಡ ಹಣ ವಾಪಾಸ್ಸು ಕೇಳಿದ್ದಕ್ಕೆ ಹಣ ನೀಡದೇ ವಿದ್ಯಾರ್ಥಿನಿಯರನ್ನು ರಾತ್ರೋ ರಾತ್ರಿ ಪಿಜಿಯಿಂದ ಹೊರ ಹಾಕಿರುವ ಘಟನೆ ನಗರದಲ್ಲಿ ನಡೆದಿದೆ.
Vijaya Karnataka Web
Girls sent our during night at pg


ನಗರದ ಎಸ್‌ಐಟಿ ಬಡಾವಣೆಯಲ್ಲಿನ ಪಿಜಿಯೊಂದರಲ್ಲಿ ಉಳಿದುಕೊಂಡಿದ್ದ ವಿದ್ಯಾರ್ಥಿನಿಯರು ಕಾರಣಾಂತರಗಳಿಂದ ಪಿಜಿ ಖಾಲಿ ಮಾಡಲು ನಿರ್ಧರಿಸಿದ್ದರು. ಆದರೆ ಕಳೆದ ಹಲವು ದಿನಗಳಿಂದ ಮುಂಗಡ ಹಣ ವಾಪಾಸ್ಸು ನೀಡದೇ ಪಿಜಿಯವರು ಸತಾಯಿಸುತ್ತಿದ್ದರು ಎನ್ನಲಾಗಿದೆ. ಬುಧವಾರ ಸಂಜೆ ಮುಂಗಡ ಹಣ ವಾಪಾಸ್ಸು ನೀಡುವಂತೆ ವಿದ್ಯಾರ್ಥಿನಿಯರು ಬಲವಂತ ಪಡಿಸಿದಾಗ ಪಿಜಿಯಿಂದಲೇ ಹೊರ ಹಾಕಲಾಗಿದೆ. ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿನಿಯರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದಾರೆ.

ಘಟನೆ ಮಾಹಿತಿ ಪಡೆದು ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಪಿಜಿ ನಿರ್ವಹಣೆ ಮಾಡುತ್ತಿದ್ದವರನ್ನು ಪ್ರಶ್ನಿಸಿ, ರಾತ್ರೋ ರಾತ್ರಿ ವಿದ್ಯಾರ್ಥಿನಿಯರನ್ನು ಹೊರ ಹಾಕಿರುವ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಸ್ಥಳೀಯರ ಎದುರು ವಿದ್ಯಾರ್ಥಿನಿಯರನ್ನು ಹೊರ ಹಾಕಿರುವ ಆರೋಪವನ್ನು ಪಿಜಿ ಮಾಲೀಕಳೆನ್ನಲಾದ ನವ್ಯಾನಿರಾಕರಿಸಿದ್ದು, ಉದ್ಧಟತನದಿಂದ ವರ್ತಿಸಿದ್ದಾರೆ. ಸ್ಥಳಕ್ಕೆ ಹೊಸ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿದ್ದು, ಮಾಹಿತಿ ಪಡೆದಿದ್ದಾರೆ.

16ಟಿಯುಎಂ6: ಮುಂಗಡ ಹಣ ವಾಪಾಸ್ಸು ಕೇಳಿದ್ದಕ್ಕೆ ವಿದ್ಯಾರ್ಥಿನಿಯರನ್ನು ರಾತ್ರೋ ರಾತ್ರಿ ಹೊರ ಹಾಕಿದ ಎಸ್‌ಐಟಿ ಬಡಾವಣೆಯ ಪಿಜಿ ಎದುರು ಸಾರ್ವಜನಿಕರು ಜಮಾಗೊಂಡಿರುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ