ಆ್ಯಪ್ನಗರ

Heavy rain in dist

ನಗರ ಸೇರಿದಂತೆ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಸೋಮವಾರ ಸಂಜೆ ಗುಡುಗು, ಮಿಂಚು ಸಹಿತ ಧಾರಾಕಾರ ಗಾಳಿ- ಮಳೆಯಾಗಿದ್ದರೆ, ಇನ್ನೂ ಹಲವು ತಾಲೂಕುಗಳಲ್ಲಿ ಸಾಧಾರಣ ಮಳೆಯಾಯಿತು.

Vijaya Karnataka 22 May 2018, 3:21 pm
ತುಮಕೂರು: ನಗರ ಸೇರಿದಂತೆ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಸೋಮವಾರ ಸಂಜೆ ಗುಡುಗು, ಮಿಂಚು ಸಹಿತ ಧಾರಾಕಾರ ಗಾಳಿ- ಮಳೆಯಾಗಿದ್ದರೆ, ಇನ್ನೂ ಹಲವು ತಾಲೂಕುಗಳಲ್ಲಿ ಸಾಧಾರಣ ಮಳೆಯಾಯಿತು.
Vijaya Karnataka Web
Heavy rain in dist


ಜಿಲ್ಲೆಯ ನಗರ ಸೇರಿದಂತೆ ಗುಬ್ಬಿ, ಮಧುಗಿರಿ, ಕುಣಿಗಲ್‌, ಕೊರಟಗೆರೆ, ತುರುವೇಕೆರೆ ತಾಲೂಕುಗಳಲ್ಲಿ ಭರ್ಜರಿಯ ಸಮೃದ್ಧಿ ಮಳೆಯಾಗಿದೆ. ಉಳಿದಂತೆ ಚಿಕ್ಕನಾಯಕನಹಳ್ಳಿ, ತಿಪಟೂರು, ಸಿರಾ ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ.

ಸೋಮವಾರ ಸಂಜೆ ನಗರದಲ್ಲಿ ಸತತ ಒಂದು ಗಂಟೆಗೂ ಅಧಿಕ ಸಮಯ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಹಲವೆಡೆ ಸಂಚಾರದ ಅವಾಂತರ ಸೃಷ್ಟಿಯಾಯಿತು. ನಗರದ ಎಂಜಿ ರಸ್ತೆಯಲ್ಲಿ ಸತತ ಅರ್ಧ ಗಂಟೆಗೂ ಹೆಚ್ಚು ಸಮಯ ಸಂಚಾರ ಅಸ್ತವ್ಯಸ್ಥವಾಗಿತ್ತು. ವಿಧಿ ಇಲ್ಲದೆ ಮೊಳಕಾಲುದ್ದ ನೀರಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನು ನಗರದ ಕೆ.ಎಸ್‌. ಆರ್‌.ಟಿ.ಸಿ. ಬಸ್‌ ನಿಲ್ದಾಣದಲ್ಲೂ ಇದೇ ಪರಿಸ್ಥಿತಿ ಕಂಡುಬಂತು.

ಸತತವಾಗಿ ಸುರಿದ ಮಳೆ ತದನಂತರ ಜಟಿ ಮಳೆ ಪ್ರಾರಂಭವಾಗಿ ರಾತ್ರಿಯೆಲ್ಲಾ ಬಂತು. ಸಾರ್ವಜನಿಕರು ಕಚೇರಿ ಕೆಲಸ ಮುಗಿದ ಬಳಿಕ ಮಳೆಯಲ್ಲಿ ನೆನೆದುಕೊಂಡೇ ಮನೆ ಸೇರುತ್ತಿದ್ದ ದೃಶ್ಯವೂ ನಗರದ ಅಲ್ಲಲ್ಲಿ ಕಂಡು ಬಂತು.

ಧರೆಗುರಳಿದ ಮರಗಳು; ಸತತ ಧಾರಾಕಾರವಾಗಿ ಸುರಿದ ಮಳೆ-ಗಾಳಿಯ ಪರಿಣಾಮ ಹಲವು ತಾಲೂಕುಗಳಲ್ಲಿ ಮರಗಳು ಧರೆಗುರುಳಿದರೆ, ಕೆಲವೆಡೆ ಮನೆಗಳಿಗೂ ಹಾನಿಯಾಗಿದೆ. ಗುಬ್ಬಿ ತಾಲೂಕಿನ ಮತ್ಸನಹಟ್ಟಿ, ಅಮಾಲಪುರ ಗ್ರಾಮದಲ್ಲಿ ಸುಮಾರು 40ಕ್ಕೂ ಅಧಿಕ ಅಡಕೆ ಮರಗಳು ಧರೆಗುರುಳಿವೆ. ಉಳಿದಂತೆ ನಾನಾ ಜಾತಿಯ ಮರಗಳು ಜಿಲ್ಲೆಯ ಕೆಲವೆಡೆ ಧರೆಗುರುಳಿವೆ.

ವಿದ್ಯುತ್‌ ವ್ಯತ್ಯಯ; ಸತತವಾಗಿ ಸುರಿದ ಗಾಳಿ ಮಳೆಗೆ ನಗರವೂ ಸೇರಿದಂತೆ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ವಿದ್ಯುತ್‌ ವ್ಯತ್ಯಯ ಕಂಡುಬಂತು. ಜಿಲ್ಲೆಯ ಅನೇಕ ಕಡೆ ವಿದ್ಯುತ್‌ ಕಂಬಗಳು ಧರೆಗುರುಳಿದ ಪರಿಣಾಮ ವಿದ್ಯುತ್‌ ಇಲ್ಲದೆ ಜನತೆ ಪರದಾಡುವಂತಾಯಿತು. ನಗರದಲ್ಲಿಯೂ ಮಳೆ ಪ್ರಾರಂಭವಾದಾಗ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. ಇದರಿಂದ ಕಚೇರಿ ಕೆಲಸಗಳಿಗೆ ಅಡಚಣೆ ಉಂಟಾಯಿತು.

ತುಂಬಿದ ಕರೆಕಟ್ಟೆಗಳು; ಜಿಲ್ಲೆಯಾದ್ಯಂತ ಸುರಿದ ಭರ್ಜರಿ ಮಳೆಗೆ ಬತ್ತಿ ಹೋಗಿದ್ದ ಕೆರೆ ಕಟ್ಟೆಗಳೆಲ್ಲ ತುಂಬಿ ಹರಿಯುತ್ತಿವೆ. ನಗರದಲ್ಲಿಯೂ ನೀರಿಲ್ಲದೆ ಸೊರಗುವ ಹಂತ ತಲುಪಿದ್ದ ನಗರದ ಕುಡಿಯುವ ನೀರಿನ ಬುಗುಡನಹಳ್ಳಿ ಕೆರೆಗೂ ಮಳೆ ನೀರು ಹರಿದಿದ್ದು, ನೀರಿನ ಪ್ರಮಾಣ ಹೆಚ್ಚಾಗಿದೆ.

ಪಾವಗಡದಲ್ಲಿ ಬಾರದ ಮಳೆ; ಜಿಲ್ಲೆಯ ಗಡಿಭಾಗ, ಬರದ ತಾಲೂಕು ಎಂದೇ ಬಿಂಬಿತವಾಗಿರುವ ಪಾವಗಡ ತಾಲೂಕಿನಲ್ಲಿ ಮೋಡಕವಿದ ವಾತಾವರಣವಾಗಿದ್ದು ಬಿಟ್ಟರೆ ಧಾರಾಕಾರ ಮಳೆಯಾಗಿಲ್ಲ. ಜಿಲ್ಲೆಯಾದ್ಯಂತ ಕಳೆದ ನಾಲ್ಕೈದು ದಿನಗಳಿಂದ ಮಳೆಯಾಗಿದ್ದರೆ ಪಾವಗಡದಲ್ಲಿ ಮಾತ್ರ ಭೂಮಿ ತಂಪೆರೆಯುವಂತಹ ಮಳೆಯಾಗಿಲ್ಲ. ಹೀಗಾಗಿ ಅಲ್ಲಿನ ಜನತೆ ಇನ್ನೂ ಬಿಸಿಲಿನ ಬೇಗೆಯಲ್ಲೆ ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ