Please enable javascript.ವರ್ಷವಾದರೂ ವೈದ್ಯರನ್ನು ಕಾಣದ ಹಾಲ್ಕುರಿಕೆ ಆಸ್ಪತ್ರೆ - ವರ್ಷವಾದರೂ ವೈದ್ಯರನ್ನು ಕಾಣದ ಹಾಲ್ಕುರಿಕೆ ಆಸ್ಪತ್ರೆ - Vijay Karnataka

ವರ್ಷವಾದರೂ ವೈದ್ಯರನ್ನು ಕಾಣದ ಹಾಲ್ಕುರಿಕೆ ಆಸ್ಪತ್ರೆ

ವಿಕ ಸುದ್ದಿಲೋಕ 14 Oct 2014, 4:00 am
Subscribe

ಗ್ರಾಮೀಣ ಭಾಗದ ಜನರ ಆರೋಗ್ಯ ಸುಧಾರಣೆಗೆ ಸರಕಾರವು ಕೋಟ್ಯಂತರ ರೂ.ಗಳನ್ನು ವಿನಿಯೋ ಗಿಸಿ ನಾನಾ ಯೋಜನೆಗಳನ್ನು ಜಾರಿಗೆ ತರುತ್ತದೆ. ಇಂತಹ ಒಂದು ಯೋಜನೆಯಡಿ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ತಿಪಟೂರು ತಾಲೂಕಿನ ಹಾಲ್ಕುರಿಕೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಗೊಂಡಿತು.

ವರ್ಷವಾದರೂ ವೈದ್ಯರನ್ನು ಕಾಣದ ಹಾಲ್ಕುರಿಕೆ ಆಸ್ಪತ್ರೆ
ತಿಪಟೂರು: ಗ್ರಾಮೀಣ ಭಾಗದ ಜನರ ಆರೋಗ್ಯ ಸುಧಾರಣೆಗೆ ಸರಕಾರವು ಕೋಟ್ಯಂತರ ರೂ.ಗಳನ್ನು ವಿನಿಯೋ ಗಿಸಿ ನಾನಾ ಯೋಜನೆಗಳನ್ನು ಜಾರಿಗೆ ತರುತ್ತದೆ. ಇಂತಹ ಒಂದು ಯೋಜನೆಯಡಿ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ತಿಪಟೂರು ತಾಲೂಕಿನ ಹಾಲ್ಕುರಿಕೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಗೊಂಡಿತು.

ಸುಸಜ್ಜಿತ ಕಟ್ಟಡ ನಿರ್ಮಿಸಿ ಸಕಲ ಸೌಕರ್ಯಗಳಿದ್ದರೂ ಆಸ್ಪತ್ರೆಯಲ್ಲಿ ವೆದ್ಯರ ಕೊರತೆಯಿಂದ ಹಾಲ್ಕುರಿಕೆ ಸೇರಿದಂತೆ ಸುತ್ತಮುತ್ತಲಿನ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಾಗಿದೆ.

ತಿಪಟೂರು ತಾಲೂಕಿನ ಹಾಲ್ಕುರಿಕೆ ಗ್ರಾಮವು ಸುತ್ತುಮತ್ತ ಲಿನ 30-40 ಹಳ್ಳಿಗಳಿಗೆ ಕೇಂದ್ರಸ್ಥಾನವಾಗಿದೆ. ಈ ಹಳ್ಳಿಗಳಲ್ಲಿನ ಜನರಿಗೆ ಇರುವ ಏಕೆಕ ಆಸ್ಪತ್ರೆ ಇದು. ಸುಮಾರು ಒಂದೂವರೆ ವರ್ಷಗಳಿಂದಲೂ ಹಾಲ್ಕುರಿಕೆ ಆಸ್ಪತ್ರೆಯಲ್ಲಿ ವೆದ್ಯರ ಕೊರತೆ ಕಾಡುತ್ತಿದೆ. ಈ ಹಿಂದೆ ಚಿಕ್ಕ ಕಟ್ಟಡಲ್ಲಿ ನಡೆಯುತ್ತಿದ್ದ ಆಸ್ಪತ್ರೆಯ ಕಟ್ಟಡವನ್ನು ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ 6 ಬೆಡ್‌ಗಳ ಸುಸಜ್ಜಿತ ರೀತಿಯಲ್ಲಿ ಆಸ್ಪತ್ರೆಯ ಕಟ್ಟಡವನ್ನು ನಿರ್ಮಿಸ ಲಾಗಿತ್ತು. ಆದರೆ ವೆದ್ಯರಿಲ್ಲದೇ ಆಸ್ಪತ್ರೆ ಸಾರ್ವಜನಿಕರ ಪಾಲಿಗೆ ಇದ್ದರೂ ಇಲ್ಲದಂತಾಗಿದೆ.

ಈ ಆಸ್ಪತ್ರೆಯಲ್ಲಿ ಒಬ್ಬರು ನರ್ಸ್ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ರೋಗಿಗಳ ಸಣ್ಣ, ಪುಟ್ಟ ಕಾಯಿಲೆ ಗಳಿಗೆ ಕೇವಲ ಮಾತ್ರಗಳು ನೀಡುವುದಕ್ಕೆಷ್ಟೇ ಸೀಮಿತವಾಗಿದೆ. ಏಳೆಂಟು ತಿಂಗಳುಗಳ ಹಿಂದೆ ಉದ್ಘಾಟನೆಗೊಂಡ ಆಸ್ಪತ್ರೆಯಲ್ಲಿನ ಮಹಿಳಾ ಶೌಚಾಲಯ ಕೊಠಡಿಗಳು, ಒಳರೋಗಿಗಳ

ವಾರ್ಡ್‌ಗಳು, ಹೆರಿಗೆ ಕೊಠಡಿಗಳು ಅಂದಿನಿಂದ ಇಂದಿನವರೆಗೆ ಬಾಗಿಲು ತೆರೆಯದಿರುವುದು ಆಸ್ಪತ್ರೆಯಲ್ಲಿನ ಸೇವೆಗೆ ಸ್ಪಷ್ಟ ನಿದರ್ಶನವಾಗಿದೆ.

ಆಸ್ಪತ್ರೆಯ ಯಾವ ಬೆಡ್ ಮೇಲೆ ಒಬ್ಬ ರೋಗಿಯು ಮಲಗಿರುವ ಉದಾಹರಣೆಗಳಿಲ್ಲ. ಚಿಕಿತ್ಸೆ ಕೊಠಡಿಯೊಂದನ್ನು ಹೊರತುಪಡಿಸಿದರೆ ಇನ್ನುಳಿದ ಕೊಠಡಿಗಳ ಬೀಗವನ್ನು ತೆಗೆದಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಅಸ್ವಚ್ಛತೆಯ ಆವರಣ: ಹಾಲ್ಕುರಿಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಮದ್ಯದ ಬಾಟಲ್ ಹಾಗೂ ಇಸ್ಪೀಟ್ ಕಾರ್ಡ್‌ಗಳೆಲ್ಲ ಕಣ್ಣಿಗೆ ರಾಚುವಂತೆ ಬಿದ್ದಿವೆ. ಆವರಣದಲ್ಲಿನ ಹಳೇ ಶೌಚಾಲಯಗಳಲ್ಲಿ ಮದ್ಯದ ಪಾಕೆಟ್‌ಗಳೇ ತುಂಬಿವೆ. ಆಸ್ಪತ್ರೆಯ ಮುಂಭಾಗವೂ ಮದ್ಯದ ಪಾಕೆಟ್‌ಗಳಿಂದ ಹೊರತಾಗಿಲ್ಲ. ಆಸ್ಪತ್ರೆಯ ಸುತ್ತಮುತ್ತ ಜಂಗಲ್ ಬೆಳೆದಿದ್ದು ಇಡೀ ಆವರಣವೇ ಅನೈರ್ಮಲ್ಯದ ತಾಣವಾಗಿದೆ. ಕಸದ ತೊಟ್ಟಿಗಳು ತುಂಬಿ ತುಳುಕುತ್ತಿದ್ದರೂ ತೆರವಿಗೆ ಮುಂದಾಗಿಲ್ಲ. ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕಾದ ಆರೋಗ್ಯ ಕೇಂದ್ರ ಸ್ಥಿತಿ ಹೀಗಾದರೆ, ಆರೋಗ್ಯ ಕೇಂದ್ರ ವ್ಯಾಪ್ತಿಯ ಹಳ್ಳಿಗಳ ಪರಿಸ್ಥಿತಿಯ ಬಗ್ಗೆ ಯೋಚಿಸುವಂತಾಗಿದೆ.

ಹಾಳುಬಿದ್ದ ವಸತಿಗೃಹಗಳು: ಆಸ್ಪತ್ರೆಯ ಆವರಣ ದಲ್ಲಿರುವ ಸಿಬ್ಬಂದಿಯ ಮೂರು ವಸತಿಗಳು ವಾಸ ವಿಲ್ಲದೇ ಹಾಳುಬಿದ್ದಿವೆ. ಆ ಕಟ್ಟಡಗಳ ಬಳಿಯೂ ಮದ್ಯದ ಬಾಟಲ್‌ಗಳದ್ದೇ ಕಾರುಬಾರು. ವಸತಿ ಗೃಹಗಳ ಸುತ್ತಮುತ್ತಲೂ ಗಿಡ-ಗಂಟಿಗಳು ಹೆಮ್ಮರ ವಾಗಿ ಬೆಳೆದಿದ್ದು, ಕ್ರಿಮಿ ಕೀಟಗಳ ಸಂತಾನೋ ತ್ಪತ್ತಿಯ ಕೇಂದ್ರವಾಗಿದೆ. ರೋಗಿಗಳು ಚಿಕಿತ್ಸೆಗಾಗಿ ಇಲ್ಲಿನ ಆಸ್ಪತ್ರೆಗೆ ಬಂದರೆ ಆವರಣದಲ್ಲಿ ಅನೈರ್ಮಲ್ಯದ ವಾತಾವರಣದಿಂದ ಸಾಂಕ್ರಮಿಕ ರೋಗವನ್ನು ಅಂಟಿಸಿಕೊಳ್ಳುವ ಆತಂಕ ಮೂಡುವಂತಾಗಿದೆ.

ಹಾಲ್ಕುರಿಕೆ ಪ್ರಾಥಮಿಕ ಆರೋಗ್ಯಕ್ಕೆ ವೆದ್ಯರನ್ನು ನೇಮಿಸುವಂತೆ ಗ್ರಾಮಸ್ಥರು ಹಲವು ಬಾರಿ ಸಂಬಂಧಪಟ್ಟ ಇಲಾಖೆಯವರೆಗೆ ಮನವಿ ಮಾಡಿದ್ದರೂ, ಈವರೆಗೆ ಯಾರೊಬ್ಬರ ವೆದ್ಯರನ್ನು ನೇಮಿಸಿಲ್ಲ. ಈಗಲಾದರೂ ಜಿಲ್ಲಾ ಆರೋಗ್ಯಾಧಿಕಾರಿಗಳು ಎಚ್ಚತ್ತು ವೆದ್ಯರನ್ನು ನಿಯೋಜಿಸಿ, ಆರೋಗ್ಯ ಕೇಂದ್ರದ ರೋಗಿಗಳಿಗೆ ಉಪಯೋಗ ವಾಗುವಂತೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

**
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ