Please enable javascript.ಪಠ್ಯತೇರ ಚಟುವಟಿಕೆ: ಬೆಳವಣಿಗೆಗೆ ಸಹಕಾರಿ - ಪಠ್ಯತೇರ ಚಟುವಟಿಕೆ: ಬೆಳವಣಿಗೆಗೆ ಸಹಕಾರಿ - Vijay Karnataka

ಪಠ್ಯತೇರ ಚಟುವಟಿಕೆ: ಬೆಳವಣಿಗೆಗೆ ಸಹಕಾರಿ

ವಿಕ ಸುದ್ದಿಲೋಕ 13 Jan 2015, 4:00 am
Subscribe

ಪಠ್ಯೇತರ ಚಟುವಟಿಕೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ ಎಂದು ಕಾಳಿದಾಸ ವಿದ್ಯಾವರ್ಧಕ ಸಂಘದ ಜಿಲ್ಲಾ ಜಂಟಿ ಕಾರ್ಯದರ್ಶಿ ಟಿ.ಡಿ.ನಾಗಭೂಷಣ್ ತಿಳಿಸಿದರು.

ಪಠ್ಯತೇರ ಚಟುವಟಿಕೆ: ಬೆಳವಣಿಗೆಗೆ ಸಹಕಾರಿ
ಕೊರಟಗೆರೆ: ಪಠ್ಯೇತರ ಚಟುವಟಿಕೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ ಎಂದು ಕಾಳಿದಾಸ ವಿದ್ಯಾವರ್ಧಕ ಸಂಘದ ಜಿಲ್ಲಾ ಜಂಟಿ ಕಾರ್ಯದರ್ಶಿ ಟಿ.ಡಿ.ನಾಗಭೂಷಣ್ ತಿಳಿಸಿದರು.

ಅವರು ಪಟ್ಟಣದ ಕಾಳಿದಾಸ ಪ್ರೌಢಶಾಲೆಯಲ್ಲಿ ವೃತ್ತಿ ಶಿಕ್ಷಣ ವಿಭಾಗದಿಂದ ಮಕ್ಕಳೇ ತಯಾರಿಸಿದ್ದ ಕರಕುಶಲ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಮಕ್ಕಳು ಶಾಲೆಯಲ್ಲಿ ಹೊಸ ವಿಷಯಗಳನ್ನು ಕಲಿಯಲು ಅಪಾರ ಅವಕಾಶಗಳಿವೆ. ಶಾಲೆಯಲ್ಲಿ ಮಕ್ಕಳ ಬಗ್ಗೆ ಆಡಳಿತ ಮಂಡಳಿ ಮತ್ತು ಶಿಕ್ಷಕರು ಎಷ್ಟು ಜವಾಬ್ದಾರಿ ತೋರಿಸುತ್ತಾರೋ ಅಷ್ಟೇ ಜವಾಬ್ದಾರಿಯನ್ನು ಪೋಷಕರೂ ತೋರಿಸಬೇಕು ಎಂದರು.

ಹಿರಿಯ ಶಿಕ್ಷಕ ಬಿ.ಹನುಮಂತರೆಡ್ಡಿ ಮಾತನಾಡಿ, ಕರಕುಶಲ ಮತ್ತು ಗುಡಿಗಾರಿಕೆ ವಿದ್ಯೆಯಿಂದ ಮಕ್ಕಳಲ್ಲಿನ ಪ್ರತಿಭೆಯನ್ನು ಹೊರತರಲು ಸಾಧ್ಯ. ಕರಕುಶಲ ವಿದ್ಯೆಯಿಂದ ಅನೇಕ ಮಂದಿ ಜೀವನ ನಡೆಸುವುದನ್ನು ಕಾಣುತ್ತೇವೆ. ಮಕ್ಕಳು ಶಾಲೆಗಳಲ್ಲಿ ಪಠ್ಯದೊಂದಿಗೆ ವತ್ತಿ ಶಿಕ್ಷಣ ಕಲಿತರೆ ಮುಂದಿನ ದಿನಗಳಲ್ಲಿ ಉಪಯೋಗವಾಗುವುದು ಎಂದರು.

ಮುಖ್ಯ ಶಿಕ್ಷಕಿ ಶಶಿಕಲಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ವತ್ತಿ ಶಿಕ್ಷಣ ಶಿಕ್ಷಕಿ ಟಿ.ಸಿ.ಮಂಗಳಮ್ಮ, ಸಹ ಶಿಕ್ಷಕ ಯೋಗಣ್ಣ, ಶ್ರೀನಿವಾಸ್, ಮರಿಯಪ್ಪ ಉಪಸ್ಥಿತರಿದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ