ಆ್ಯಪ್ನಗರ

ಹೆಣ್ಣು ಮಗು ನದಿಗೆ ಎಸೆದ ತಾಯಿಗೆ ಜೀವಾವಧಿ ಶಿಕ್ಷೆ

ಎರಡು ತಿಂಗಳ ಹೆಣ್ಣು ಮಗುವನ್ನು ಸುವರ್ಣಮುಖಿ ನದಿಗೆ ಎಸೆದ ಮಹಾತಾಯಿಗೆ ಇಲ್ಲಿನ 4 ನೇ ಜಿಲ್ಲಾ ಮತ್ತು ಅಧಿಕ ಸತ್ರ ನ್ಯಾಯಾಲಯದ ನ್ಯಾಯಾದೀಶೆ ಲಾವಣ್ಯಲತಾ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ವಿಕ ಸುದ್ದಿಲೋಕ 22 Jul 2017, 5:44 pm
ಮಧುಗಿರಿ : ಎರಡು ತಿಂಗಳ ಹೆಣ್ಣು ಮಗುವನ್ನು ಸುವರ್ಣಮುಖಿ ನದಿಗೆ ಎಸೆದ ಮಹಾತಾಯಿಗೆ ಇಲ್ಲಿನ 4 ನೇ ಜಿಲ್ಲಾ ಮತ್ತು ಅಧಿಕ ಸತ್ರ ನ್ಯಾಯಾಲಯದ ನ್ಯಾಯಾದೀಶೆ ಲಾವಣ್ಯಲತಾ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
Vijaya Karnataka Web  mother gets life sentence for killing her girl childs
ಹೆಣ್ಣು ಮಗು ನದಿಗೆ ಎಸೆದ ತಾಯಿಗೆ ಜೀವಾವಧಿ ಶಿಕ್ಷೆ


ಸೀಮಾಂದ್ರದ ರೊಳ್ಳೆ ಮಂಡಲದ ತಿರುಮಲದೇವರಹಳ್ಳಿಯ ಕವಿತಾ(28) ಶಿಕ್ಷೆಗೊಳಗಾದ ಮಹಿಳೆ. ಈಕೆ 2016 ರ ಆಗಸ್ಟ್ 24 ರಂದು 2 ತಿಂಗಳ ಹೆಣ್ಣು ಮಗುವನ್ನು ಹುಷಾರಿಲ್ಲದ ಕಾರಣದಿಂದ ಕೊರಟಗೆರೆಯ ರೇಣುಕಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಳು. ಮೊದಲನೆಯ ಮಗು ಹೆಣ್ಣು, ಇದೂ ಸಹ ಹೆಣ್ಣು ಮಗು ಎಂದು ಜಿಗುಪ್ಸೆಗೊಂಡು 2 ತಿಂಗಳ ಹಸುಗೂಸು ಎಂಬುದನ್ನೂ ನೋಡದೇ ಸುವರ್ಣಮುಖಿ ನದಿಗೆ ಎಸೆದಿದ್ದಳು.

ಬಳಿಕ, ನನ್ನನ್ನು ಮತ್ತು ಮಗುವನ್ನು ಆಟೋದವರು ಅಪಹರಿಸಲು ಯತ್ನಿಸಿದ್ದರು ಆದರೆ ನಾನು ತಪ್ಪಿಸಿಕೊಂಡು ಬಂದಿರುವುದಾಗಿ ಕಥೆ ಕಟ್ಟಿ ಮನೆಯವರಿಗೆ ಹೇಳಿದ್ದಳು. ಇದರ ಬಗ್ಗೆ ಈಕೆಯ ಪತಿ ಮಂಜುನಾಥ್ ಕೊರಟಗೆರೆ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೋಲೀಸ್ ವಿಚಾರಣೆಯಲ್ಲಿ ನಾನೇ ಮಗುವನ್ನು ನದಿಗೆ ಎಸೆದಿದ್ದಾಗಿ ತಾಯಿ ಕವಿತಾ ಒಪ್ಪಿಕೊಂಡಿದ್ದಳು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಮೇಲ್ಕಂಡಂತೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ