ಆ್ಯಪ್ನಗರ

ಎಸಿಬಿಗೆ 21 ದೂರು ಅರ್ಜಿ; ಕ್ರಮಕ್ಕೆ ಸೂಚನೆ

ಸಾರ್ವಜನಿಕರ ಸಮಸ್ಯೆ ಆಲಿಸಲು ಗುರುವಾರ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಹತ್ತು - ಹಲವು ಸಮಸ್ಯೆಗಳನ್ನು ಹೊತ್ತ 21 ಅರ್ಜಿಗಳು ಸಲ್ಲಿಕೆಯಾದವು.

Vijaya Karnataka 22 Sep 2018, 5:00 am
ತುರುವೇಕರೆ : ಸಾರ್ವಜನಿಕರ ಸಮಸ್ಯೆ ಆಲಿಸಲು ಗುರುವಾರ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಹತ್ತು - ಹಲವು ಸಮಸ್ಯೆಗಳನ್ನು ಹೊತ್ತ 21 ಅರ್ಜಿಗಳು ಸಲ್ಲಿಕೆಯಾದವು.
Vijaya Karnataka Web 21 complaints filed in acb notice for actions
ಎಸಿಬಿಗೆ 21 ದೂರು ಅರ್ಜಿ; ಕ್ರಮಕ್ಕೆ ಸೂಚನೆ


ಎಸಿಬಿ ಅಧಿಕಾರಿಗಳು ಬೆಳಗ್ಗೆ 11 ಗಂಟೆಗೆ ಆಗಮಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಈ ವೇಳೆ ಸಾರ್ವಜನಿಕ ಸಮಸ್ಯೆ ಕುರಿತಂತೆ ಚರ್ಚೆ ಆರಂಭಿಸಿದಾಗ ಅಧಿಕಾರಿಗಳು, ಸ್ಥಳೀಯ ಇಲಾಖೆ ಅಧಿಕಾರಿಗಳ ವಿರುದ್ಧ ದೂರುದಾರರ ಎದುರೇ ತಾಕೀತು ಮಾಡಿದ್ದು, ವಿಶೇಷವಾಗಿತ್ತು. ಕಂದಾಯ ಇಲಾಖೆಯ ಖಾತೆ, ಪಹಣಿ, ತೋಟಕ್ಕೆ ಹೋಗುವ ದಾರಿ ಮುಚ್ಚಿಕೊಂಡಿರುವುದು, ಇಲಾಖೆಯ ಭ್ರಷ್ಟಾಚಾರ, ಪ್ರತಿ ಕೆಲಸಕ್ಕೂ ಅಧಿಕಾರಿಗಳು ಲಂಚಕ್ಕಾಗಿ ಆಗ್ರಹಿಸುವ ಬಗ್ಗೆ ರೈತ ಸಂಘದ ಶ್ರೀನಿವಾಸಗೌಡ ನೇರ - ನೇರ ಚರ್ಚಿಸಿದರು.

ಈ ಪೈಕಿ ವಿಶೇಷ ಎಂಬಂತೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವಿದ್ದರೂ ಅವ್ಯಾಹತವಾಗಿ ಎಲ್ಲಾ ರಸ್ತೆ ಬದಿಯ ಕಾಫಿ, ಟೀ ಅಂಗಡಿಗಳಲ್ಲಿ ನಿರಂತರ ಧೂಮಪಾನಿಗಳ ಹಾವಳಿ ಬಗ್ಗೆ ಕರುಣಾಕರ್‌ ಎಂಬುವರು ದೂರು ನೀಡಿ ಗಮನ ಸೆಳೆದರು. ಆರೋಗ್ಯ ಇಲಾಖೆ, ಪಪಂ, ರಕ್ಷ ಣಾ ಸಿಬ್ಬಂದಿಯಾಗಲಿ ಸಾರ್ವಜನಿಕವಾಗಿ ಪಿಡುಗಾಗಿ ಕಾಡುತ್ತಿರುವ ಈ ಧೂಮಪಾನಿಗಳನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಇದು ಇನ್ನುಳಿದ ಜನಸಾಮಾನ್ಯರಿಗೆ ಕಿರಿ- ಕಿರಿ ಉಂಟಾಗಿದೆ ಎಂದು ದೂರಿದರು.

ಕಂದಾಯ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಕೆಲವೊಂದನ್ನು ಸ್ಥಳೀಯವಾಗಿ ಬಗೆಹರಿಸಲು ಅವಕಾಶವಿದ್ದು, ಅವುಗಳನ್ನು ಕೂಡಲೇ ವಿಲೆ ಮಾಡುವಂತೆ ಸೂಚಿಸಿ ಉಳಿದ ಅರ್ಜಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳವಂತೆ ಸಲಹೆ ನೀಡಿದರು.

ಬಾಣಸಂದ್ರ ಗ್ರಾಮಪಂಚಾಯಿತಿಯಲ್ಲಿ ಸುವರ್ಣ ಗ್ರಾಮ ಯೋಜನೆಯಲ್ಲಿ ಮಂಜೂರಾದ ಉಪಕರಣದಲ್ಲಿ ವಿಲೇವಾರಿ ಆಗದೇ ಸಂಗ್ರಹ ಮಾಡಲಾಗಿದೆ. ಖರ್ಚಿನಲ್ಲಿ ಮಾತ್ರ ತೋರಿಸಲಾಗಿದೆ ಎಂದು ರಮೇಶ್‌ ಎಂಬುವರು ದೂರು ಸಲ್ಲಿಸಿದರು. ಕೂಡಲೇ ಕ್ರಮ ಕೈಗೋಳ್ಳುವಂತೆ ತಾಪಂ ಇ.ಒ. ಗಂಗಾಧರ್‌ ಅವರಿಗೆ ಸೂಚಿಸಲಾಯಿತು.

ಪಟ್ಟಣ ಪಂಚಾಯಿತಿಯ ದೇವೇಗೌಡ ಬಡಾವಣೆಯಲ್ಲಿ 25 ವರ್ಷಗಳಿಂದ ವಾಸವಿದ್ದೇನೆ. ನನ್ನನ್ನು ಒಕ್ಕೆಲೆಬ್ಬಿಸುವ ಪ್ರಯತ್ನ ನಡೆದಿದೆ ಎಂದು ರಂಗಯ್ಯ ದೂರು ಸಲ್ಲಿಸಿದರು. ಮುಖ್ಯಾಧಿಕಾರಿ ಮಂಜುಳಾದೇವಿ, ಪಂಚಾಯಿಯಲ್ಲಿ ನಡೆದ ನಡಾವಳಿಯಂತೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಆದರೂ ಸಹ ಮಾನವೀಯ ದೃಷ್ಟಿಯಿಂದ ಅರ್ಜಿದಾರರಿಗೆ ವ್ಯವಸ್ಥೆ ಕಲ್ಪಿಸುವಂತೆ ಸಲಹೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ