ಆ್ಯಪ್ನಗರ

ಹೇಮಾವತಿಯಿಂದ ಜಿಲ್ಲೆಗೆ 25 ಟಿಎಂಸಿ

ಜಿಲ್ಲೆಗೆ ಹೇಮಾವತಿ ನಾಲೆಯಿಂದ 25 ಟಿ.ಎಂ.ಸಿ ನೀರು ಹಂಚಿಕೆಯಾಗಿದೆ. ಇದರಲ್ಲಿ ಸದ್ಯಕ್ಕ20 ಟಿ.ಎಂ.ಸಿ ನೀರು ಹರಿಸಲಾಗಿದೆ. ಹಾಸನ ಜಿಲ್ಲೆಗೆ 16 ಟಿ.ಎಂ.ಸಿ ನೀರು ಹಂಚಿಕೆಯಾಗಿದ್ದರೂ 30 ಟಿ.ಎಂ.ಸಿ ನೀರು ಹರಿಸಿರುವುದರಿಂದ ತುಮಕೂರು ಜಿಲ್ಲೆಗೆ ಅನ್ಯಾಯವಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಬರ ಬರುವ ಮೊದಲೇ ಸರಕಾರ ಎಚ್ಚೆತ್ತುಕೊಂಡು ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

Vijaya Karnataka 18 Dec 2018, 5:00 am
ಚಿಕ್ಕನಾಯಕನಹಳ್ಳಿ: ಜಿಲ್ಲೆಗೆ ಹೇಮಾವತಿ ನಾಲೆಯಿಂದ 25 ಟಿ.ಎಂ.ಸಿ ನೀರು ಹಂಚಿಕೆಯಾಗಿದೆ. ಇದರಲ್ಲಿ ಸದ್ಯಕ್ಕ20 ಟಿ.ಎಂ.ಸಿ ನೀರು ಹರಿಸಲಾಗಿದೆ. ಹಾಸನ ಜಿಲ್ಲೆಗೆ 16 ಟಿ.ಎಂ.ಸಿ ನೀರು ಹಂಚಿಕೆಯಾಗಿದ್ದರೂ 30 ಟಿ.ಎಂ.ಸಿ ನೀರು ಹರಿಸಿರುವುದರಿಂದ ತುಮಕೂರು ಜಿಲ್ಲೆಗೆ ಅನ್ಯಾಯವಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಬರ ಬರುವ ಮೊದಲೇ ಸರಕಾರ ಎಚ್ಚೆತ್ತುಕೊಂಡು ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
Vijaya Karnataka Web 25 tmc to hemavathi district
ಹೇಮಾವತಿಯಿಂದ ಜಿಲ್ಲೆಗೆ 25 ಟಿಎಂಸಿ


ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರಕಾರದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 100 ತಾಲೂಕಿನಲ್ಲಿ ಭೀಕರ ಬರಗಾಲ, ಉಳಿದ 90 ತಾಲೂಕುಗಳಲ್ಲಿ ಅತಿವೃಷ್ಠಿಯಾಗಿದೆ ಎಂದು ಗುರುತಿಸಿದ್ದು, ಈಗಾಗಲೇ ಗೋರೂರು ಡ್ಯಾಂನ ನೀರಿನ ಸಾಮರ್ಥ್ಯ‌ 37 ಟಿ.ಎಂ.ಸಿ ಇದೆ. ಆದರೆ ಇದುವರೆಗೂ ಒಟ್ಟು 49 ಟಿ.ಎಂ.ಸಿ ನೀರು ಬಳಕೆಯಾಗಿದ್ದು, 50 ಟಿ.ಎಂ.ಸಿ ನೀರು ಹರಿದು ಹೋಗಿದೆ ಎಂದರು.

ಹೇಮಾವತಿ ನಾಲೆಯ ವಿಸ್ತರಣೆಗೆ 620 ಕೋಟಿ ರೂ. ಖರ್ಚು ಮಾಡಿ ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ತುಮಕೂರು ನಾಲೆಯ 25 ಟಿ.ಎಂ.ಸಿ ನೀರು ಜಿಲ್ಲೆಗೆ ಹಂಚಿಕೆ ಆಗಿದ್ದು, ಇದರಲ್ಲಿ 20 ಟಿ.ಎಂ.ಸಿ ನೀರು ಬಿಡಲಾಗಿದೆ. ಉಳಿದ 5 ಟಿ.ಎಂ.ಸಿ ನೀರು ಹರಿಸಿ ಜಿಲ್ಲೆಯ ಕುಡಿಯುವ ನೀರಿನ ಬಗ್ಗೆ ಸರಕಾರ ಗಮನ ಹರಿಸುವಂತೆ ಒತ್ತಾಯಿಸಿದರು.

ಆದರೆ, ಹಾಸನಕ್ಕೆ 19 ಟಿ.ಎಂ.ಸಿ ನೀರು ಹಂಚಿಕೆಯಾಗಿದ್ದರೂ 30 ಟಿ.ಎಂ.ಸಿ ನೀರನ್ನು ಬಳಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ 256 ಕೆರೆಗಳಿಗೆ ನೀರು ತುಂಬಬೇಕಾಗಿತ್ತು. ಆದರೆ ಇದುವರೆಗೆ 140 ಕೆರೆಗಳು ಮಾತ್ರ ತುಂಬಿವೆ. ಇದರಿಂದ ಜಿಲ್ಲೆಯಲ್ಲಿ ಅಂತರ್ಜಲ ಕುಸಿದಿದ್ದು ಕೂಡಲೇ ಜಿಲ್ಲೆಗೆ ಹಂಚಿಕೆಯಾಗಿದ್ದ ಉಳಿದ 5ಟಿ.ಎಂ.ಸಿ ನೀರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ ಟಿ.ಬಿ. ಜಯಚಂದ್ರ, ಈ ಬಾರಿ ಬೇಸಿಗೆಯಲ್ಲಿ ಭೀಕರ ಕುಡಿಯುವ ನೀರಿನ ಬರ ಎದುರಿಸಬೇಕಾಗುತ್ತದೆ. ಆದ್ದರಿಂದ ಸರಕಾರ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ಮಾಜಿ ಶಾಸಕ ಬಿ.ಲಕ್ಕಪ್ಪ, ತಾ.ಉಪಾಧ್ಯಕ್ಷ ಸಿ.ಡಿ.ಚಂದ್ರಶೇಕರ್‌, ತಾಪಂ ಸದಸ್ಯೆ ಕಲಾವತಿ, ವಕ್ತಾರ ಕೆ.ಜಿ.ಕೃಷ್ಣೇಗೌಡ, ಹೆಚ್‌.ಬಿ.ಸತ್ಯನಾರಾಯಣಗೌಡ, ಬ್ರಹ್ಮಾನಂದ, ರುದ್ರೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ