ಆ್ಯಪ್ನಗರ

ಎಂಟು ಜನರಿಗೆ ದೃಷ್ಟಿ ದಾನ

ಇಲ್ಲಿನ ಪಕೀರನಪಾಳ್ಯದ ನಿವಾಸಿ ಟಿ.ಎಲ್‌.ರಮೇಶ್‌ ಅವರ ಪುತ್ರಿ ಗಾಯತ್ರಿ (28) ಹಾಗೂ ಮಧುಗಿರಿ ತಾಲೂಕು ಪುರವರದ ನಿವಾಸಿ ಕೃಷ್ಣಪ್ಪ (59) ಮತ್ತು ತುಮಕೂರು ತಾಲೂಕಿನ ಗೂಳೂರು ಹೋಬಳಿ ಎಂ.ಕೆ.ಕಾವಲ್‌ನ ಗೋವಿಂದರಾಜು (40), ತುಮಕೂರು ಸರಕಾರಿ ಆಸ್ಪತ್ರೆಯ ಕ್ವಾರ್ಟಸ್‌ನಲ್ಲಿ ನಿವಾಸಿ ಸಿದ್ಧಲಿಂಗಯ್ಯ (56) ನಿಧನರಾಗಿದ್ದು, ಅವರ ಕಣ್ಣುಗಳನ್ನು ಅವರ ಕುಟುಂಬದವರು ದಾನ ಮಾಡಿದ್ದಾರೆ.

Vijaya Karnataka 23 Feb 2019, 5:00 am
ತುಮಕೂರು: ಇಲ್ಲಿನ ಪಕೀರನಪಾಳ್ಯದ ನಿವಾಸಿ ಟಿ.ಎಲ್‌.ರಮೇಶ್‌ ಅವರ ಪುತ್ರಿ ಗಾಯತ್ರಿ (28) ಹಾಗೂ ಮಧುಗಿರಿ ತಾಲೂಕು ಪುರವರದ ನಿವಾಸಿ ಕೃಷ್ಣಪ್ಪ (59) ಮತ್ತು ತುಮಕೂರು ತಾಲೂಕಿನ ಗೂಳೂರು ಹೋಬಳಿ ಎಂ.ಕೆ.ಕಾವಲ್‌ನ ಗೋವಿಂದರಾಜು (40), ತುಮಕೂರು ಸರಕಾರಿ ಆಸ್ಪತ್ರೆಯ ಕ್ವಾರ್ಟಸ್‌ನಲ್ಲಿ ನಿವಾಸಿ ಸಿದ್ಧಲಿಂಗಯ್ಯ (56) ನಿಧನರಾಗಿದ್ದು, ಅವರ ಕಣ್ಣುಗಳನ್ನು ಅವರ ಕುಟುಂಬದವರು ದಾನ ಮಾಡಿದ್ದಾರೆ.
Vijaya Karnataka Web 8 eyes donated by 4 donors in tumkur
ಎಂಟು ಜನರಿಗೆ ದೃಷ್ಟಿ ದಾನ


ತುಮಕೂರು ಸರಕಾರಿ ಆಸ್ಪತ್ರೆಯ ನೇತ್ರ ತಜ್ಞ ಡಾ.ದಿನೇಶ್‌ಕುಮಾರ್‌, ಡಾ.ಮಂಜುನಾಥ್‌, ಸಿದ್ದರಾಮಯ್ಯ ಹಾಗೂ ಸಿಬ್ಬಂದಿ ರವಿಕುಮಾರ್‌ ಅವರ ನೇತೃತ್ವದಲ್ಲಿ ಮೃತರಿಂದ ಕಣ್ಣುಗಳನ್ನು ತೆಗೆದರು. ಈ ನೇತ್ರಗಳನ್ನು ಎನ್‌ಎಸ್‌ಐ ಫೌಂಡೇಶನ್‌ ಮುಖ್ಯಸ್ಥ ಡಾ.ಎನ್‌.ಎನ್‌.ಶ್ರೀಧರ್‌, ನಾಗದೀಶ್‌.ಎನ್‌.ಎಸ್‌. ಅವರ ಸಹಕಾರದಿಂದ ಬೆಂಗಳೂರಿನ ಲಯನ್ಸ್‌ ಇಂಟರ್‌ನ್ಯಾಷನಲ್‌ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಆ ಮೂಲಕ 8 ದೃಷ್ಟಿಹೀನರಿಗೆ ದೃಷ್ಟಿ ಕೊಟ್ಟಿದ್ದಾರೆ.

ಮೃತ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ ದುಃಖ ಸಹಿಸುವಂತಹ ಶಕ್ತಿಯನ್ನು ದೇವರು ಕರುಣಿಸಲೆಂದು ಟ್ರಸ್ಟ್‌ನ ಸದಸ್ಯರು ಪ್ರಾರ್ಥಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ