ಆ್ಯಪ್ನಗರ

ನ್ಯಾಯಾಲಯದ ಆವರಣದಲ್ಲೇ ಲಂಚ ಸ್ವೀಕಾರ: ಪಬ್ಲಿಕ್ ಪ್ರಾಸಿಕ್ಯೂಟರ್ ಬಂಧನ

ತುಮಕೂರು ಜಿಲ್ಲೆಯ ತಿಪಟೂರು ಮುನಿಸಿಫ್ ನ್ಯಾಯಾಲಯದ ಪೂರ್ಣಿಮಾ ಜಿ. ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದು, ಕೆಇ‌ಬಿ‌ ಇಂಜಿನಿಯರ್ ಗುರುಬಸವಸ್ವಾಮಿ ಎಂಬವರಿಂದ ಲಂಚ ಸ್ವೀಕರಿಸುವ ವೇಳೆ ಎಸಿಬಿ ದಾಳಿ ನಡೆದಿದೆ.

Vijaya Karnataka Web 30 Apr 2019, 5:49 pm
ತುಮಕೂರು: ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯದ ಆವರಣದಲ್ಲೇ ಲಂಚ ಪಡೆಯುತ್ತಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ರೆಡ್‌ಹ್ಯಾಂಡ್‌ ಆಗಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಿಕ್ಕಿಬಿದ್ದಿದ್ದಾರೆ.
Vijaya Karnataka Web PRNM.


ತುಮಕೂರು ಜಿಲ್ಲೆಯ ತಿಪಟೂರು ಮುನಿಸಿಫ್ ನ್ಯಾಯಾಲಯದ ಪೂರ್ಣಿಮಾ ಜಿ. ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದು, ಕೆಇ‌ಬಿ‌ ಇಂಜಿನಿಯರ್ ಗುರುಬಸವಸ್ವಾಮಿ ಎಂಬವರಿಂದ ಲಂಚ ಸ್ವೀಕರಿಸುವ ವೇಳೆ ಎಸಿಬಿ ದಾಳಿ ನಡೆದಿದೆ.

2015ರಲ್ಲಿ ವಿದ್ಯುತ್ ಕಂಬವೊಂದು ವೃದ್ದೆ ಮೇಲೆ ಬಿದ್ದು ಕಾಲು ತುಂಡಾಗಿದ್ದ ಪ್ರಕರಣದಲ್ಲಿ ವಕಾಲತ್ತು ವಹಿಸಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಪೂರ್ಣಿಮಾ, ನ್ಯಾಯಾಲಯದಲ್ಲಿ ಪ್ರಕರಣ ಖುಲಾಸೆಗೊಂಡ ಬಳಿಕ ಮೇಲ್ಮನವಿ ಸಲ್ಲಿಸದಿರಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಕೆಇಬಿ ಇಂಜಿನಿಯರ್ ಬಳಿ 40,000 ರೂ. ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪೂರ್ಣಿಮಾ, 20 ಸಾವಿರ ರೂ. ನೇರವಾಗಿ ಅಕೌಂಟ್ ಮೂಲಕ ಪಡೆದಿದ್ದರು. ನಂತರ 20 ಸಾವಿರ ಹಣ ನಗದು ಪಡೆಯುವ ಸಂದರ್ಭ ಎಸಿಬಿ ದಾಳಿ ನಡೆದಿದೆ.

ಪೂರ್ಣಿಮಾ ಅವರನ್ನು ಎಪಿಪಿ ಕಚೇರಿಯಲ್ಲೇ ರಾತ್ರಿ 10.30 ರವೆರೆಗೆ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ