ಆ್ಯಪ್ನಗರ

ತುಮಕೂರು: ಎಸಿಬಿ ಬಲೆಗೆ ಬಿದ್ದ ಖಾಸಗಿ ದಲ್ಲಾಳಿಗಳು

ಲಂಚ ಪಡೆದ ಖಾಸಗಿ ದಲ್ಲಾಳಿಗಳ ಮೇಲೆ ಎಸಿಬಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಜಮೀನಿನ ನಮೂನೆಯ 1-5 ದಾಖಲಾತಿ ಮಾಡಿಕೊಡಲು ತಹಸೀಲ್ದಾರ್‌ ಹೆಸರಿನಲ್ಲಿ 1.25 ಲಕ್ಷ ಬೇಡಿಕೆ ಇಟ್ಟು, ಮುಂಗಡವಾಗಿ 5 ಸಾವಿರ ಹಣ ಪಡೆದಿದ್ದರು. ಈ ಹಿನ್ನಲೆ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ ಬಲೆ ಬೀಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

Vijaya Karnataka Web 2 Jul 2020, 11:54 am
ತುಮಕೂರು ಗ್ರಾಮಾಂತರ: ಜಮೀನಿನ ನಮೂನೆ 1-5 ಸಲುವಾಗಿ ಲಂಚ ಪಡೆದ ಖಾಸಗಿ ದಲ್ಲಾಳಿಗಳ ಮೇಲೆ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ ಬಲೆ ಬೀಸಿ ವಶಕ್ಕೆ ಪಡೆದುಕೊಂಡಿರುವ ಘಟನೆ ಬುಧವಾರ ನಡೆದಿದೆ.
Vijaya Karnataka Web ಸಾಂದರ್ಭಿಕ ಚಿತ್ರ


ಗ್ರಾಮಾಂತರದ ಕೋರ ಹೋಬಳಿಯ ಕರೀಕೆರೆ ಗ್ರಾಮದ ರಂಗನಾಥ್‌ ಎಂಬುವರ ಜಮೀನಿನ ನಮೂನೆಯ 1-5 ದಾಖಲಾತಿ ಮಾಡಿಕೊಡಲು ತಹಸೀಲ್ದಾರ್‌ ಹೆಸರಿನಲ್ಲಿ 1.25 ಲಕ್ಷ ಬೇಡಿಕೆ ಇಟ್ಟು, ಮುಂಗಡವಾಗಿ 5 ಸಾವಿರ ಹಣ ಪಡೆದಿದ್ದರು. ಈ ಖಾಸಗಿ ದಲ್ಲಾಳಿಗಳ ಮೇಲೆ ಜಿಲ್ಲಾ ಭ್ರಷ್ಟಾಚಾರ ನಿಗ್ರಹದಳ ಪೊಲೀಸರಿಗೆ ರಂಗನಾಥ್‌ ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಘಟನೆ: ಶಿವಕುಮಾರ್‌ ಎಂಬುವರು ನಾನು ತಹಸೀಲ್ದಾರ್‌ ಮೋಹನ್‌ ಕುಮಾರ್‌. ನಿಮ್ಮ ಜಮೀನಿನ ನಮೂನೆಯ ದಾಖಲಾತಿ ಮಾಡಿಕೊಡುವೆ. ಹಣ ಮತ್ತು ಫೈಲ್‌ ಅನ್ನು ರುದ್ರಸ್ವಾಮಿ ಎಂಬುವರ ಬಳಿ ತಲುಪಿಸಿ ಎಂಬುದಾಗಿ ದೂರವಾಣಿ ಮೂಲಕ ತಿಳಿಸಿ, ಮುಂಗಡ 5 ಸಾವಿರ ಪಡೆದು, ನಂತರ ಉಳಿದ ಹಣಕ್ಕೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ದೂರು ಸ್ವೀಕರಿಸಿದ ಎಸಿಬಿ ಡಿವೈಎಸ್‌ಪಿ ಉಮಾಶಂಕರ್‌ ತಂಡ, ಬುಧವಾರ ತುಮಕೂರಿನ ಉಪ್ಪಾರಹಳ್ಳಿಯ ಫ್ಲೈಓವರ್‌ ಕೆಳಗೆ ಆರೋಪಿ ರುದ್ರಸ್ವಾಮಿಯನ್ನು ಸೆರೆ ಹಿಡಿದು ತಮ್ಮ ವಶಕ್ಕೆ ಪಡೆದುಕೊಂಡಿದ್ದು, ಮುಖ್ಯ ಆರೋಪಿ ಶಿವಕುಮಾರ್‌ರವರ ಮೇಲು ಕ್ರಮ ಜರುಗಿಸಿದ್ದಾರೆ.

ಈ ಪ್ರಕರಣ ಬೇಧಿಸುವಲ್ಲಿ ಇನ್ಸ್‌ ಪೆಕ್ಟರ್‌ ಪ್ರವೀಣ್‌ ಕುಮಾರ್‌, ಸಿಬ್ಬಂದಿಗಳಾದ ಇಮ್ರಾನ್‌ ಬೇಗ್‌, ಡಿ.ನರಸಿಂಹರಾಜು, ಕೆ.ಪಿ.ಶಿವಣ್ಣ, ಚಂದ್ರಶೇಖರ್‌, ನರಸಿಂಹರಾಜು, ಗಿರೀಶ್‌ ಕುಮಾರ್‌, ಮಹೇಶ್‌ ಕುಮಾರ್‌, ರಮೇಶ್‌ ಯಶಸ್ವಿಯಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ