ಆ್ಯಪ್ನಗರ

ಹೇಮಾವತಿ ನಾಲೆಗೆ‌ ಡೈನಾಮೈಟ್ ಇಡುವೆ: ಶಾಸಕ ಶಿವಲಿಂಗೇಗೌಡ

ಅರಸೀಕರೆ ಸೇರಿ ತುಮಕೂರಿನ ಕೆಲ ಭಾಗಗಳಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಹೇಮಾವತಿ ನಾಲೆಯಲ್ಲಿ ನೀರು ಹರಿಸುವಂತೆ ರೈತರು ಒತ್ತಾಯಿಸಿದ್ದಾರೆ. ಹೇಮಾವತಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಸಮರ್ಪಕವಾಗಿ ನೀರು ಹರಿಸಿದ್ದಕ್ಕೆ ಶಾಸಕ ಶಿವಲಿಂಗೇಗೌಡ ಆಕ್ರೋಶಗೊಂಡು, ನಾಲೆಗೆ ಡೈನಾಮೈಟ್‌ ಇಡುವುದಾಗಿ ಧಮಕಿ ಹಾಕಿದ್ದಾರೆ

Vijaya Karnataka Web 12 Oct 2018, 4:16 pm
ತುಮಕೂರು: ಹೇಮಾವತಿ ನಾಲೆಗೆ‌ ಡೈನಾಮೈಟ್ ಇಡುತ್ತೇನೆ, ತಾಕತ್ತಿದ್ದರೆ ತಡೆಯಿರಿ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಕೂಗಾಡಿದ್ದಾರೆ.
Vijaya Karnataka Web hemavati


ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಹೇಮಾವತಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಶಿವಲಿಂಗೇಗೌಡ, ಹೇಮಾವತಿ ನಾಲೆಗೆ ಸಮರ್ಪಕವಾಗಿ ನೀರು ಹರಿಸದೇ ಇರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ನಾಲೆಗೆ ಡೈನಾಮೈಟ್‌ ಇಟ್ಟೇ ಇಡುತ್ತೇನೆ ಎಂದು ರೇಗಾಡಿದ್ದಾರೆ.

ಅರಸೀಕೆರೆ ತಾಲೂಕಿನಲ್ಲಿ ಒಂದಿಂಚು ಮಳೆಯಾಗಿಲ್ಲ. ತಾಲೂಕಿನಲ್ಲಿರುವ ಕೆರೆಗಳು ತುಂಬುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ, ನಾಲೆಗೆ ಡೈನಾಮೈಟ್‌ ಇಡುವುದು ನಿಶ್ಚಿತ. ಅದು ಏನಾಗುತ್ತದೋ ನೋಡುತ್ತೇನೆ. ನನ್ನ ವಿರುದ್ಧ ಕೇಸ್‌ ಹಾಕಿದರೂ ಬಿಡಲ್ಲ. ನೀವೇನಾದರೂ ಮಾಡಿಕೊಳ್ಳಿ ಎಂದು ಸವಾಲು ಹಾಕಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ