ಆ್ಯಪ್ನಗರ

ಕಾನೂನು ಬದ್ಧ ಕಾರ್ಮಿಕ ಸಂಘಗಳಿಗೆ ಮಾನ್ಯತೆ

ದೇಶದ ಕಾನೂನಿನನ್ವಯ ಕಾರ್ಮಿಕರು ತಮ್ಮ ಹಿತರಕ್ಷಣೆಗಾಗಿ ಹಾಗೂ ಹಕ್ಕುಗಳ ಉಳಿವಿಗಾಗಿ ರಚಿಸಿಕೊಳ್ಳುವಂತಹ ಕಾರ್ಮಿಕ ಸಂಘಗಳನ್ನು ಆಡಳಿತ ಮಂಡಳಿಗಳು ಮಾನ್ಯತೆ ನೀಡಿ ದೇಶದ ಕಾನೂನನ್ನು ಗೌರವಿಸಬೇಕೆಂದು ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್‌ಮುಜೀಬ್‌ಅಭಿಪ್ರಾಯಪಟ್ಟರು.

Vijaya Karnataka 25 Jun 2018, 5:00 am
ತುಮಕೂರು: ದೇಶದ ಕಾನೂನಿನನ್ವಯ ಕಾರ್ಮಿಕರು ತಮ್ಮ ಹಿತರಕ್ಷಣೆಗಾಗಿ ಹಾಗೂ ಹಕ್ಕುಗಳ ಉಳಿವಿಗಾಗಿ ರಚಿಸಿಕೊಳ್ಳುವಂತಹ ಕಾರ್ಮಿಕ ಸಂಘಗಳನ್ನು ಆಡಳಿತ ಮಂಡಳಿಗಳು ಮಾನ್ಯತೆ ನೀಡಿ ದೇಶದ ಕಾನೂನನ್ನು ಗೌರವಿಸಬೇಕೆಂದು ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್‌ಮುಜೀಬ್‌ಅಭಿಪ್ರಾಯಪಟ್ಟರು.
Vijaya Karnataka Web approved by law oriented labor unions
ಕಾನೂನು ಬದ್ಧ ಕಾರ್ಮಿಕ ಸಂಘಗಳಿಗೆ ಮಾನ್ಯತೆ


ನಗರದ ಗಾಂಧಿನಗರದಲ್ಲಿ ಇತ್ತೀಚಿಗೆ ನಡೆದ ಜನಚಳುವಳಿ ಕೇಂದ್ರದಲ್ಲಿ ಟೀಮೆಕ್‌ ಇಂಡಿಯಾ ಪ್ರೈ.ಲಿ., ಎಂಪ್ಲಾಯಿಸ್‌ ಯೂನಿಯನ್‌ನ ಸರ್ವಸದಸ್ಯರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಸಮಾಜದ ಚಲನೆಗೆ ತಮ್ಮ ಶ್ರಮ ಶಕ್ತಿಯನ್ನು ಧಾರೆಯೆರೆಯುವ ದುಡಿಯುವ ಜನರು ಕಟ್ಟಿಕೊಳ್ಳುವ ಕಾರ್ಮಿಕ ಸಂಘಗಳನ್ನು ಬಂಡವಾಳಗಾರರು ಮುರಿಯುವ, ಪೊಲೀಸರ ಮೂಲಕ ಹತ್ತಿಕ್ಕುವ ಕ್ರಮಗಳು ನ್ಯಾಯೋಚಿತವಲ್ಲ. ಮಾಲೀಕರು ಸಹ ತಮ್ಮ ಹಿತರಕ್ಷಣೆಗಾಗಿ ಸಂಘ ಕಟ್ಟಿಕೊಂಡು ಸರಕಾರದೊಂದಿಗೆ ಹೋರಾಟ ನಡೆಸುವಾಗ ತಮ್ಮಲ್ಲಿನ ಕಾರ್ಮಿಕರು ಸಂಘ ಕಟ್ಟುವಾಗ ಯಾಕೆ ಸಹಿಸುವುದಿಲ್ಲ ಎಂದು ಪ್ರಶ್ನಿಸಿದರು.

ಹಲವು ಹೋರಾಟಗಳ ನಂತರ ಕಾರ್ಮಿಕರ ಹಿತ ರಕ್ಷಣೆಗಾಗಿ ರೂಪಿಸಲಾದ ಕೈಗಾರಿಕಾ ವಿವಾದ ಕಾಯ್ದೆಯನ್ನು ಮಾಲೀಕರ ಪರ ತಿದ್ದುಪಡಿ ಮಾಡಿ ಕೈಗಾರಿಕಾ ಸಂಬಂಧ ಸಂಹಿತೆಯನ್ನಾಗಿ ಬದಲಿಸುತ್ತಿರುವುದನ್ನು ಕಾರ್ಮಿಕ ವರ್ಗ ತೀವ್ರವಾಗಿ ವಿರೋಧಿಸಬೇಕೆಂದು ಕರೆ ನೀಡಿದರು.

ಸಿಐಟಿಯುನ ತುಮಕೂರು ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಮಾತನಾಡಿ, ಕಂಪನಿಗಳ ಲಾಭಕ್ಕೆ ದುಡಿಯುವ ಕಾರ್ಮಿಕರು ಗೌರವಯುತ ಬದುಕು ನಡೆಸಲು ಹಾಗೂ ನ್ಯಾಯೋಚಿತವಾದ ವೇತನ ಪಡೆಯಲು ಕಾರ್ಮಿಕ ಸಂಘ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಮುಂದಿನ ಮೂರು ವರ್ಷಗಳ ಅವಧಿಗೆ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಸೈಯದ್‌ ಮುಜೀಬ್‌, ಅಧ್ಯಕ್ಷರಾಗಿ ದೀಪಕ್‌, ಉಪಾಧ್ಯಕ್ಷರಾಗಿ, ನರಸಿಂಹಮೂರ್ತಿ, ಶ್ರೀಧರ್‌, ಪ್ರಧಾನ ಕಾರ್ಯದರ್ಶಿಯಾಗಿ ದೀಪಕ್‌ ಡಿ. ಪೂಜಾರಿ, ಕಾರ್ಯದರ್ಶಿಗಳಾಗಿ ಮಧು. ಆರ್‌.ಎಸ್‌., ಮುರುಳೀಧರ್‌, ಪ್ರದೀಪ್‌ ಕುಮಾರ್‌, ಖಜಾಂಚಿಗಳಾಗಿ ಕಾಂತರಾಜು ಬಿ.ಎಸ್‌., ಮಂಜುನಾಥ್‌, ಕಾನೂನು ಸಲಹೆಗಾರರಾಗಿ ಮೀನಾಕ್ಷಿ ಸುಂದರಂ ಆಯ್ಕೆಯಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ