ಆ್ಯಪ್ನಗರ

ಹೇಮಾವತಿ ಕಾಲುವೆಗೆ ಕಾರು ಬಿದ್ದು ಸ್ಥಳದಲ್ಲೇ ಮಗು ಸಾವು

hemavathi, tumkur, car accident, canal, baby, ಹೇಮಾವತಿ

Vijaya Karnataka Web 21 Oct 2017, 7:29 pm
ತುಮಕೂರು: ಹೇಮಾವತಿ ಕಾಲುವಿಗೆ ಕಾರು ಬಿದ್ದ ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟ ದುರಂತಕಾರಿ ಘಟನೆ ವರದಿಯಾಗಿದೆ.
Vijaya Karnataka Web baby killed as car plunges into hemavathi canal
ಹೇಮಾವತಿ ಕಾಲುವೆಗೆ ಕಾರು ಬಿದ್ದು ಸ್ಥಳದಲ್ಲೇ ಮಗು ಸಾವು


ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಾಳೆನಹಳ್ಳಿ ಬಳಿ ಘಟನೆ ನಡೆದಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಹಾಗೆಯೇ ಇತರೆ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಂಭೀರ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಹಾಗೆಯೇ ಇತರೆ ಮೂವರಿಗೆ ಗುಬ್ಬಿ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಿಯಂತ್ರಣ ತಪ್ಪಿದ ಸ್ವಿಫ್ಟ್ ಕಾರು ರಸ್ತೆ ಬದಿಯಿರುವ ಹೇಮಾವತಿ ಕಾಲುವೆಗೆ ಬಿದ್ದ ಪರಿಣಾಮ ಅಪಘಾತ ಸಂಭವಿಸಿತ್ತು.
ಚಾಲಕ ನಿದ್ದೆಗೆ ಜಾರಿರುವ ಶಂಕೆ ವ್ಯಕ್ತಪಡಿಸಲಾಗಿದೆ.

ಒಂದು ವರ್ಷದ ಗಂಡು ಮಗು ಸ್ಥಳದಲ್ಲಿ ಸಾವನ್ನಪಿದೆ. ಕಾರಿನಲ್ಲಿದ್ದವರು ಮೈಸೂರು ಮೂಲದವರು ಎಂಬುದು ತಿಳಿದು ಬಂದಿದೆ.

ಗುಬ್ಬಿ ತಾಲೂಕಿನ ಕೆಜಿ ದೇವಾಲಯಕ್ಕೆಂದು ಬರುತ್ತಿದ್ದಾಗ ಘಟನೆ ನಡೆದಿತ್ತು. ಸಿಎಸ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರಂತ ಸಂಭವಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ