ಆ್ಯಪ್ನಗರ

ಸಿದ್ಧಗಂಗಾ ಶ್ರೀ ಭಾರತರತ್ನ ನೀಡಲು ಜೈನ ಮುನಿಶ್ರೀಗಳ ಆಗ್ರಹ

ಬಡವಿದ್ಯಾರ್ಥಿಗಳಿಗೆ ಆಸರೆ ನೀಡಿ ಉಚಿತವಾಗಿ ಊಟದೊಂದಿಗೆ ಶಿಕ್ಷ ಣ ನೀಡಿ ವಿಶ್ವಮಟ್ಟಕ್ಕೆ ಸಾಧನೆ ಮಾಡಿರುವ ಸಿದ್ಧಗಂಗಾ ಮಠದ ಹಿರಿಯ ಶ್ರೀ ಡಾ. ಶಿವಕುಮಾರಸ್ವಾಮೀಜಿಯವರಿಗೆ ಭಾರತರತ್ನ ಪ್ರಶಸ್ತಿ ನೀಡುವಂತೆ ಜೈನ ಗುರು ಮುನಿಶ್ರೀ ಪ್ರಜ್ಞಾಸಾಗರ ಮಹಾರಾಜ್‌ ಭಾರತ ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ.

Vijaya Karnataka 20 Jun 2018, 10:23 pm
ತುಮಕೂರು ಗ್ರಾಮಾಂತರ: ಬಡವಿದ್ಯಾರ್ಥಿಗಳಿಗೆ ಆಸರೆ ನೀಡಿ ಉಚಿತವಾಗಿ ಊಟದೊಂದಿಗೆ ಶಿಕ್ಷ ಣ ನೀಡಿ ವಿಶ್ವಮಟ್ಟಕ್ಕೆ ಸಾಧನೆ ಮಾಡಿರುವ ಸಿದ್ಧಗಂಗಾ ಮಠದ ಹಿರಿಯ ಶ್ರೀ ಡಾ. ಶಿವಕುಮಾರಸ್ವಾಮೀಜಿಯವರಿಗೆ ಭಾರತರತ್ನ ಪ್ರಶಸ್ತಿ ನೀಡುವಂತೆ ಜೈನ ಗುರು ಮುನಿಶ್ರೀ ಪ್ರಜ್ಞಾಸಾಗರ ಮಹಾರಾಜ್‌ ಭಾರತ ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ.
Vijaya Karnataka Web bharath ratha to siddagangashree jaina munishree
ಸಿದ್ಧಗಂಗಾ ಶ್ರೀ ಭಾರತರತ್ನ ನೀಡಲು ಜೈನ ಮುನಿಶ್ರೀಗಳ ಆಗ್ರಹ


ಶೃತಸ್ಕಂದ ಆರಾಧನೆ ಪ್ರಯುಕ್ತ ಸಿದ್ಧಗಂಗಾ ಮಠದಲ್ಲಿ ಸಿದ್ಧಗಂಗಾ ಶ್ರೀಗಳನ್ನು ಭೇಟಿ ಮಾಡಿ, ಅವರಿಗೆ ಬೆಳ್ಳಿಯ ಶ್ರೀಫಲ ಮತ್ತು ಶಾಸ್ತ್ರ ಗ್ರಂಥ ನೀಡಿದ ಬಳಿಕ ಮಾತನಾಡಿದ ಅವರು, ಬಡ ಮಕ್ಕಳಿಗೆ ಉಚಿತವಾಗಿ ವಸತಿಯೊಂದಿಗೆ ಶಿಕ್ಷ ಣ ನೀಡಿ, ವಿಶ್ವವಿಖ್ಯಾತವಾಗಿರುವ ಸಿದ್ಧಗಂಗಾ ಶ್ರೀಗಳ ಸಾಧನೆಯನ್ನು ಭಾರತ ಸರಕಾರ ಪರಿಗಣಿಸಿ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದರು.

ಸಿದ್ಧಗಂಗ ಶ್ರೀಗಳಂತಹ ಸಾಧು ಸಂತರಿಂದ ಅಖಂಡ ಭಾರತ ನಿರ್ಮಾಣ ಸಾಧ್ಯ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುತ್ತಿದ್ದು, ಎಲ್ಲಾ ಧರ್ಮಗಳನ್ನು ಗೌರವಿಸುವಂತಹ ಕಾರ್ಯವನ್ನು ಶ್ರೀ ಮಠದಲ್ಲಿ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಆರ್ಯಶ್ರೀ ವಿನಿವ್ರತ ಶ್ರೀಮಾತಾಜಿ, ಜಿಲ್ಲಾ ಜೈನ ಸಮಾಜದ ಅಧ್ಯಕ್ಷ ಡಿ.ಎಸ್‌.ಕುಮಾರ್‌, ಉದ್ಯಮಿ ಜಿ.ಪಿ.ಉಮೇಶ್‌ಕುಮಾರ್‌, ಟಿ.ಎ.ಅನಂತರಾಜು, ಕೆ.ಪಿ.ವೀರೇಂದ್ರ, ಮಂಜುಳಾಸುವೀರ್‌, ತುಮಕೂರು ವಿವಿ ಸಿಂಡಿಕೇಟ್‌ ಸದಸ್ಯ ಬಿ.ಜೆ.ಮಹಾವೀರ್‌, ಪಚ್ಚೇಶ್‌ ಜೈನ್‌, ಪೇಪರ್‌ ಪ್ರಸಾದ್‌ ಜೈನ್‌, ಬಳ್ಳಾರಿ ಬಾಹುಬಲಿ, ಆರ್‌.ಎನ್‌.ಪದ್ಮನಾಭಯ್ಯ, ಎಂ.ಎಸ್‌. ರಮೇಶ್‌, ಬಿ.ಜೆ. ಸುರೇಶ್‌, ಶಶಿರಮೇಶ್‌ ಸುರೇಂದ್ರಕುಮಾರ್‌ ಭಟ್ಟ, ವರ್ಧಮಾನ್‌ ಮುಂತಾದವರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ