ಆ್ಯಪ್ನಗರ

​ಲೋನ್‌ ಕೊಡಿಸುವುದಾಗಿ ಹೇಳಿ ಮೋಸ: ವಂಚಕಿಗೆ ಬಿತ್ತು ಗೂಸಾ

ಅಮಾಯಕ ಜನರಿಗೆ ಪಂಗನಾಮ ಹಾಕಿದ ಚಾಲಾಕಿ ವಂಚಕಿಗೆ ಸಾರ್ವಜನಿಕರು ಗೂಸಾ ನೀಡಿದ ಘಟನೆ ತುಮಕೂರಿನಲ್ಲಿ ನಡೆದಿದೆ.

Vijaya Karnataka Web 6 Feb 2018, 12:16 pm
ತುಮಕೂರು: ಲೋನ್ ಕೊಡಿಸುವುದಾಗಿ ಹೇಳಿ ಅಮಾಯಕ ಜನರಿಗೆ ಪಂಗನಾಮ ಹಾಕಿದ ಚಾಲಾಕಿ ವಂಚಕಿಗೆ ಸಾರ್ವಜನಿಕರು ಗೂಸಾ ನೀಡಿದ ಘಟನೆ ತುಮಕೂರಿನಲ್ಲಿ ನಡೆದಿದೆ.
Vijaya Karnataka Web cheating women beaten by public
​ಲೋನ್‌ ಕೊಡಿಸುವುದಾಗಿ ಹೇಳಿ ಮೋಸ: ವಂಚಕಿಗೆ ಬಿತ್ತು ಗೂಸಾ


ಇಲ್ಲಿನ ಶಿರಾ ಗೇಟ್‌ನ ನಿವಾಸಿ ಪುಷ್ಪಾ ಎಂಬಾಕೆ ಜನರಿಗೆ ಮೋಸ ಮಾಡಿದ ವಂಚಕಿ. ಸರಕಾರದ ವತಿಯಿಂದ ಎಸ್‌ಬಿಐನಲ್ಲಿ ಲಕ್ಷಗಟ್ಟಲೆ ಲೋನ್ ಕೊಡಿಸುತ್ತೇನೆಂದು ಅಮಾಯಕ ಜನರಿಂದ ಹಣ ವಸೂಲಿ ಮಾಡಿ ಮೋಸ ಮಾಡಿದ್ದಾಳೆ. ಕೂಲಿ ಮಾಡಿಕೊಂಡು ಜೀವನ ಮಾಡುತ್ತಿರುವ ದಲಿತ ಮಹಿಳೆಯರೇ ಈಕೆಯ ಟಾರ್ಗೆಟ್ ಆಗಿದ್ದಾರೆ.

ವಂಚನೆಗೊಳಗಾದ ಜನರು ರೊಚ್ಚಿಗೆದ್ದು ಪುಷ್ಪಾಳ ಮನೆಗೆ ಹೋಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಹಣ ವಾಪಸ್ ನೀಡುವಂತೆ ಕೇಳಿದ್ದಾರೆ. ಆದರೆ, ವಂಚಕಿ ಹಣ ನೀಡಲು ನಿರಾಕರಿಸಿದ್ದಾಳೆ. ರೊಚ್ಚಿಗೆದ್ದ ಜನರು ಪುಷ್ಪಾ ಹಾಗೂ ಆಕೆಯ ತಾಯಿಯನ್ನು ನಗರ ಠಾಣೆವರೆಗೂ ಸುಮಾರು ಐದು ಕಿ.ಮೀ.ನಷ್ಟು ದೂರ ಮೆರವಣಿಗೆ ಮಾಡಿಕೊಂಡು ಬಂದಿದ್ದಾರೆ. ಮೆರವಣಿಗೆ ಉದ್ದಕ್ಕೂ ಧರ್ಮದೇಟು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ