ಆ್ಯಪ್ನಗರ

ತುರುವೇಕೆರೆ: ಕೊಟ್ಟಿಗೆಗೆ ನುಗ್ಗಿ ಚಿರತೆ ದಾಳಿ, 4 ಮೇಕೆಗಳು ಬಲಿ

ಮೇಕೆ ಕೂಡಿ ಹಾಕಿದ್ದ ಕೊಟ್ಟಿಗೆ ಬಳಿ ಬೆಳಗ್ಗೆ ಕೆಂಪಯ್ಯ ಹೋದಾಗ ಮೇಕೆಗಳು ಸತ್ತು ಬಿದ್ದಿರುವುದನ್ನು ಗಮನಿಸಿದ್ದಾನೆ. ಬದುಕಿಗೆ ಆಸರೆಯಾಗಿದ್ದ ಮೇಕೆಗಳು ಚಿರತೆ ದಾಳಿಗೆ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿದ್ದಾನೆ. ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ.

Vijaya Karnataka Web 23 Nov 2020, 10:02 pm
ತುರುವೇಕೆರೆ: ತಾಲೂಕಿನ ದಂಡಿನಶಿವರ ಹೋಬಳಿ ವ್ಯಾಪ್ತಿಯಲ್ಲಿ ದೊಂಬರನಹಳ್ಳಿ ಕೊಟ್ಟಿಗೆಯಲ್ಲಿದ್ದ 4 ಮೇಕೆಗಳು ಚಿರತೆ ದಾಳಿಗೆ ಬಲಿಯಾಗಿವೆ. ಗ್ರಾಮದ ಕೆಂಪಯ್ಯ ಅವರು ಕೊಟ್ಟಿಗೆಯಲ್ಲಿ ಮೇಕೆಗಳನ್ನು ಕೂಡಿದ್ದರು.
Vijaya Karnataka Web ಚಿರತೆ (ಸಂಗ್ರಹ ಚಿತ್ರ)
ಚಿರತೆ (ಸಂಗ್ರಹ ಚಿತ್ರ)


ಭಾನುವಾರ ತಡ ರಾತ್ರಿ ಕೊಟ್ಟಿಗೆಗೆ ನುಗ್ಗಿದ ಚಿರತೆ, 4 ಮೇಕೆಗಳ ಮೇಲೆ ದಾಳಿ ಮಾಡಿದೆ. ದಾಳಿಯ ತೀವ್ರತೆಗೆ ಕೊಟ್ಟಿಗೆಯಲ್ಲಿ 4 ಮೇಕೆಗಳು ಕೊನೆಯುಸಿರೆಳೆದಿವೆ. ಮೇಕೆ ಕೂಡಿ ಹಾಕಿದ್ದ ಕೊಟ್ಟಿಗೆ ಬಳಿ ಬೆಳಗ್ಗೆ ಕೆಂಪಯ್ಯ ಹೋದಾಗ ಮೇಕೆಗಳು ಸತ್ತು ಬಿದ್ದಿರುವುದನ್ನು ಗಮನಿಸಿದ್ದಾನೆ. ಬದುಕಿಗೆ ಆಸರೆಯಾಗಿದ್ದ ಮೇಕೆಗಳು ಚಿರತೆ ದಾಳಿಗೆ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿದ್ದಾನೆ. ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ.

ಘಟನೆಯ ಸ್ಥಳಕ್ಕೆ ಅರಣ್ಯಇಲಾಖಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಶುವೈದ್ಯಾಧಿಕಾರಿ ಡಾ. ನೀಲಕಂಠಸ್ವಾಮಿ ಮೇಕೆಗಳ ಮರಣೋತ್ತರ ಪರೀಕ್ಷೆ ನಡೆಸಿದರು.

ಕೆಂಪಯ್ಯನಿಗೆ ಸರಕಾರದಿಂದ ಸೂಕ್ತ ನೆರವು ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ