ಆ್ಯಪ್ನಗರ

ತುಮಕೂರಿನಲ್ಲಿ ಮತ್ತೆ 171 ಕೊರೊನಾ ಪ್ರಕರಣ: ಸೋಂಕಿತರ ಸಂಖ್ಯೆ 2,850ಕ್ಕೆ ಏರಿಕೆ

ಜಿಲ್ಲೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಂಗಳವಾರ ಕೊರೊನಾ ಪ್ರಕರಣಗಳ ಸಂಖ್ಯೆ 171ಕ್ಕೆರಿದೆ. ಜಿಲ್ಲೆಯಲ್ಲಿ 6 ಮಂದಿ ಒಂದೇ ದಿನ ಸೋಂಕಿನಿಂದ ಮೃತಪಟ್ಟಿದ್ದಾರೆ.

Vijaya Karnataka Web 11 Aug 2020, 9:25 pm
ತುಮಕೂರು: ಜಿಲ್ಲೆಯಲ್ಲಿ ಮೊದಲ ಬಾರಿಗೆ ಹೆಚ್ಚು 171 ಹೊಸ ಕೊರೊನಾ ಪ್ರಕರಣಗಳು ದೃಢವಾಗಿದ್ದು, ಸೋಂಕಿನ ಸಂಖ್ಯೆ 2,850ಕ್ಕೆ ಏರಿಕೆಯಾಗಿದೆ.
Vijaya Karnataka Web ಕೊರೊನಾ ವೈರಸ್


ತುಮಕೂರಿನಲ್ಲಿ 55, ಸಿರಾ 27, ಕುಣಿಗಲ್‌ 19, ತಿಪಟೂರು 16, ಗುಬ್ಬಿ 14, ಕೊರಟಗೆರೆ 10, ಪಾವಗಡ 9, ಚಿ.ನಾ.ಹಳ್ಳಿ ಹಾಗೂ ಮಧುಗಿರಿ ತಲಾ 8, ತುರುವೇಕೆರೆಯಲ್ಲಿ 5 ಪ್ರಕರಣಗಳು ಪತ್ತೆಯಾಗಿವೆ.

ಕೊರೊನಾದಿಂದ ಮಂಗಳವಾರ 96 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಈವರೆಗೆ 1789 ಮಂದಿ ಬಿಡುಗಡೆ ಹೊಂದಿದ್ದಾರೆ. 975 ಸಕ್ರಿಯ ಪ್ರಕರಣಗಳಿದ್ದು, ಐಸಿಯುವಿನಲ್ಲಿ 18 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

6 ಸಾವು ಜಿಲ್ಲೆಯಲ್ಲಿ ಹೆಚ್ಚು 6 ಮಂದಿ ಕೊರೊನಾದಿಂದ ಮೃತಪಟ್ಟಿದ್ದು ಸಾವಿನ ಸಂಖ್ಯೆ 86ಕ್ಕೆ ಏರಿಕೆಯಾಗಿದೆ. ತುಮಕೂರು ನಗರದ ಪಿಎಚ್‌ ಕಾಲೋನಿಯ 53, ಸದಾಶಿವನಗರದ 78, ತುಮಕೂರು ತಾಲೂಕಿನ ಹೆಬ್ಬೂರಿನ 52 ವರ್ಷದ ಪುರುಷರು ಹಾಗೂ ತುಮಕೂರು ನಗರದ ಮುತ್ಸಾಂದ್ರದ 58, ಪಿಎಚ್‌ ಕಾಲೋನಿಯ 52, ತುರುವೇಕೆರೆಯ ಖಾಜಾನಾ ಲೇಔಟ್‌ನ 65 ವರ್ಷದ ಮಹಿಳೆಯರು ಮೃತಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ