ಆ್ಯಪ್ನಗರ

ಕಣ್ಣಿಗೆ ಕಾರದಪುಡಿ ಎರಚಿ, ಚಾಕು ಇರಿದು 10 ಲಕ್ಷ ರೂ. ದೋಚಿದ ಕಿಡಿಗೇಡಿಗಳು

ಅಡುಗೆ ಆಯಿಲ್‌ ಸರಬರಾಜು ಕಂಪನಿಯ ಕಾರ್ಯನಿರ್ವಾಹಕನ ಕಣ್ಣಿಗೆ ಕಾರದಪುಡಿ ಎರಚಿ ಚಾಕುವಿನಿಂದ ಬಲಗೈಗೆ ಇರಿದು 10 ಲಕ್ಷ ರೂ. ದರೋಡೆ ಮಾಡಿ ಕಿಡಿಗೇಡಿಗಳು ಪರಾರಿಯಾಗಿರುವ ಘಟನೆ ತಾಲೂಕಿನ ಕೊತ್ತಗೆರೆ ಬಳಿ ಬುಧವಾರ ಸಂಜೆ ನಡೆದಿದೆ.

Vijaya Karnataka 15 Nov 2018, 5:00 am
ಕುಣಿಗಲ್‌: ಅಡುಗೆ ಆಯಿಲ್‌ ಸರಬರಾಜು ಕಂಪನಿಯ ಕಾರ್ಯನಿರ್ವಾಹಕನ ಕಣ್ಣಿಗೆ ಕಾರದಪುಡಿ ಎರಚಿ ಚಾಕುವಿನಿಂದ ಬಲಗೈಗೆ ಇರಿದು 10 ಲಕ್ಷ ರೂ. ದರೋಡೆ ಮಾಡಿ ಕಿಡಿಗೇಡಿಗಳು ಪರಾರಿಯಾಗಿರುವ ಘಟನೆ ತಾಲೂಕಿನ ಕೊತ್ತಗೆರೆ ಬಳಿ ಬುಧವಾರ ಸಂಜೆ ನಡೆದಿದೆ.
Vijaya Karnataka Web crime news of kunigal
ಕಣ್ಣಿಗೆ ಕಾರದಪುಡಿ ಎರಚಿ, ಚಾಕು ಇರಿದು 10 ಲಕ್ಷ ರೂ. ದೋಚಿದ ಕಿಡಿಗೇಡಿಗಳು


ತುಮಕೂರಿನ ಎನ್‌.ಅರ್‌ ಅಯಿಲ್‌ ಮಿಲ್‌ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್‌ ಎಂಬುವರೇ ಕಿಡಿಗೇಡಿಗಳ ದಾಳಿಗೆ ಒಳಗಾಗಿ 10 ಲಕ್ಷ ರೂ. ಕಳೆದುಕೊಂಡವರು. ಕುಣಿಗಲ್‌ ಪಟ್ಟಣದ ಅಂಗಡಿಗಳಿಗೆ ಸರಬರಾಜು ಮಾಡಿದ್ದ ಅಡುಗೆ ಅಯಿಲ್‌ ಬಿಲ್‌ನ ಹಣ ಸಂಗ್ರಹ ಮಾಡಿಕೊಂಡು ಕುಣಿಗಲ್‌ನಿಂದ ಖಾಸಗಿ ಬಸ್‌ನಲ್ಲಿ ಬುಧವಾರ ಸಂಜೆ ತುಮಕೂರಿಗೆ ತೆರಳುವಾಗ ಮೊದಲೇ ಈ ಬಗ್ಗೆ ಮಾಹಿತಿ ತಿಳಿದುಕೊಂಡು ಎಂಟು ಮಂದಿಯ ದರೋಡೆಕೋರರ ತಂಡ ಹೊಂಚು ಹಾಕಿ ಕುಳಿತಿತ್ತು. ಕೊತ್ತಗೆರೆ ಬಳಿ ಬಸ್‌ನಲ್ಲಿ ಸಂಸಾರದ ವಿಚಾರವಾಗಿ ಜಗಳ ತಗೆದು ಬಸ್‌ನಿಂದ ಪ್ರಕಾಶ್‌ ಅವರನ್ನು ಇಳಿಸಿಕೊಂಡು ಸರ್ವಿಸ್‌ ರಸ್ತೆಗೆ ಕರೆದು ಕೊಂಡು ಹೋಗಿ ಕಣ್ಣಿಗೆÜ ಕಾರದಪುಡಿ ಎರಚಿ ಚಾಕುವಿನಿಂದ ಚುಚ್ಚಿ ಅವರ ಬಳಿ ಇದ್ದ 10 ಲಕ್ಷ ರೂ. ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ಕುಣಿಗಲ್‌ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ