ಆ್ಯಪ್ನಗರ

ಶಿವಕುಮಾರ ಶ್ರೀ ಸ್ಮರಣೆಯಲ್ಲಿ ದಾಸೋಹ ದಿನ ಆಚರಣೆ: ಬಿಎಸ್‌ವೈ

ಕೋಟ್ಯಂತರ ಭಕ್ತರಿಗೆ ದೇವರಾಗಿದ್ದ ಶಿವಕುಮಾರ ಶ್ರೀಗಳು ಅನ್ನ, ಅರಿವು, ಆಶ್ರಯ ತ್ರಿವಿಧ ದಾಸೋಹ ನೀಡಿದ್ದಾರೆ. ಜಾತಿ, ಧರ್ಮ ಭೇದವಿಲ್ಲದೆ ಶಿಕ್ಷಣ ನೀಡಿ ಅವರ ಬಾಳಿನ ಬೆಳಕಾಗಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಮರಿಸಿದರು.

Vijaya Karnataka Web 21 Jan 2021, 1:37 pm
ತುಮಕೂರು: ನಡೆದಾಡುವ ದೇವರ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸಲು ಸರಕಾರ ಆದೇಶ ಹೊರಡಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದರು.
Vijaya Karnataka Web ಸಿದ್ದಗಂಗಾ ಮಠದಲ್ಲಿ ಬಿಎಸ್‌ವೈ
ಸಿದ್ದಗಂಗಾ ಮಠದಲ್ಲಿ ಬಿಎಸ್‌ವೈ


ತುಮಕೂರಿನ ಸಿದ್ದಗಂಗಾಮಠದಲ್ಲಿ ಗುರುವಾರ ಶಿವಕುಮಾರ ಶ್ರೀಗಳ ದ್ವಿತೀಯ ಪುಣ್ಯ ಸಂಸ್ಮರಣೋತ್ಸವ ಸಮಾರಂಭ ಉದ್ಘಾಟಿಸಿ ಯಡಿಯೂರಪ್ಪ ಮಾತನಾಡಿದರು.

ಅನ್ನದಾಸೋಹದ ಜತೆಗೆ ಅಕ್ಷರ ಕಲಿಸಿದ ಸಿದ್ದಗಂಗಾಶ್ರೀಗಳು ಪ್ರಾತಃಸ್ಮರಣೀಯ ಎಂದು ಬಣ್ಣಿಸಿದರು.

ಶಿವಕುಮಾರ ಶ್ರೀಗಳ ಬದುಕು, ಸಾಧನೆ ಸಾರುವ ಉದ್ದೇಶದಿಂದ ಪೂಜ್ಯರ ಹುಟ್ಟೂರಿನಲ್ಲಿ 111 ಅಡಿ ಪುತ್ಥಳಿ ನಿರ್ಮಾಣವಾಗಬೇಕು. ವೀರಾಪುರ ಗ್ರಾಮ
ತೀರ್ಥಕ್ಷೇತ್ರವಾಗಬೇಕು. ಗ್ರಾಮದ ಅಭಿವೃದ್ಧಿಗೆ 25 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ಕೋಟ್ಯಂತರ ಭಕ್ತರಿಗೆ ದೇವರಾಗಿದ್ದ ಶಿವಕುಮಾರ ಶ್ರೀಗಳು ಅನ್ನ, ಅರಿವು, ಆಶ್ರಯ ತ್ರಿವಿಧ ದಾಸೋಹ ನೀಡಿದ್ದಾರೆ. ಜಾತಿ,ಧರ್ಮ ಭೇದವಿಲ್ಲದೆ ಶಿಕ್ಷಣ ನೀಡಿ ಅವರ ಬಾಳಿನ ಬೆಳಕಾಗಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಮರಿಸಿದರು.

ಬಿ.ಎಸ್. ಯಡಿಯೂರಪ್ಪ ಸಿದ್ದಗಂಗಾ ಮಠಕ್ಕೆ ಭೇಟಿ ನೋಡಿ ಶ್ರೀಗಳ ಗದ್ದುಗೆಗೆ‌ ಪೂಜೆ ಸಲ್ಲಿಸಿ ದರ್ಶನ ಪಡೆದರು. ನಿಗದಿತ ಸಮಯಕ್ಕಿಂತ ಅರ್ಧಗಂಟೆ ಮುಂಚೆ ಶ್ರೀಮಠಕ್ಕೆ ಬಿಎಸ್ ವೈ ಆಗಮಿಸುತ್ತಿದ್ದಂತೆ ಕಾರ್ಯಕ್ರಮ ಆರಂಭವಾಯಿತು.

ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಸಾನ್ನಿಧ್ಯವಹಿಸಿದ್ದರು. ದೇಗುಲಮಠದ ಶ್ರೀಗಳು, ವಚನಾನಂದ ಶ್ರೀಗಳು ಉಪಸ್ಥಿತರಿದ್ದರು.

ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ, ಡಿಸಿಎಂ ಡಾ.ಸಿ.ಎನ್ . ಅಶ್ವತ್ಥನಾರಾಯಣ್, ವೀರಶೈವ ಅಭಿವೃದ್ಧಿ ನಿಗಮದ ಬಿ.ಎಸ್.ಪರಮಶಿವಯ್ಯ, ಸಂಸದ ಜಿ.ಎಸ್. ಬಸವರಾಜು, ಶಾಸಕ ಜ್ಯೋತಿ ಗಣೇಶ್ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ