ಆ್ಯಪ್ನಗರ

ದಾನ-ಧರ್ಮದಲ್ಲಿ ಸ್ವಾರ್ಥ ಬುದ್ದಿ ಬೇಡ

ಮನುಷ್ಯ ಸಂಘ ಜೀವಿಯಾಗಿ ಬದುಕುತ್ತಿದ್ದು ದಾನ-ಧರ್ಮ ಮಾಡಲು ಯಾವುದೇ ಸ್ವಾರ್ಥ ಬುದ್ಧಿ ತೋರಬಾರದು. ಪೋಷಕರು ಮಕ್ಕಳ ಎದುರಿಗೆ ಅವಾಚ್ಯ ಶಬ್ದಗಳನ್ನು ಬಳಸದೆ ಸಂಸ್ಕಾರದ ಮಾತಗಳನ್ನು ಆಡಬೇಕು ಎಂದು ರಾಮೇನಹಳ್ಳಿಯ ಶಿವ ಪಂಚಾಕ್ಷ ರಿ ಸ್ವಾಮಿ ಆಶೀರ್ವಚನ ನೀಡಿದರು.

Vijaya Karnataka 3 Jul 2018, 5:00 am
ತಿಪಟೂರು: ಮನುಷ್ಯ ಸಂಘ ಜೀವಿಯಾಗಿ ಬದುಕುತ್ತಿದ್ದು ದಾನ-ಧರ್ಮ ಮಾಡಲು ಯಾವುದೇ ಸ್ವಾರ್ಥ ಬುದ್ಧಿ ತೋರಬಾರದು. ಪೋಷಕರು ಮಕ್ಕಳ ಎದುರಿಗೆ ಅವಾಚ್ಯ ಶಬ್ದಗಳನ್ನು ಬಳಸದೆ ಸಂಸ್ಕಾರದ ಮಾತಗಳನ್ನು ಆಡಬೇಕು ಎಂದು ರಾಮೇನಹಳ್ಳಿಯ ಶಿವ ಪಂಚಾಕ್ಷ ರಿ ಸ್ವಾಮಿ ಆಶೀರ್ವಚನ ನೀಡಿದರು.
Vijaya Karnataka Web dont be selfish in dharma
ದಾನ-ಧರ್ಮದಲ್ಲಿ ಸ್ವಾರ್ಥ ಬುದ್ದಿ ಬೇಡ


ನೊಣವಿನಕೆರೆ ಸೋಮೇಕಟ್ಟೆ ಕಾಡಸಿದ್ದೇಶ್ವರ ಮಠದಲ್ಲಿ ನೂತನ ಶಿಲಾಮಠ ಲೋಕರ್ಪಣೆ ಪ್ರಯುಕ್ತ ಐದು ದಿನಗಳ ಧರ್ಮ ಸಭೆಯ ಮೊದಲ ದಿನದ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ತಮ್ಮಡಿಹಳ್ಳಿ ಮಠದ ಅಭಿನವ ಮಲ್ಲಿಕಾರ್ಜನದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಜಿಲ್ಲೆಗೆ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ವಿಶೇಷ ಸ್ಥಾನವಿದ್ದು ಸಿದ್ಧಗಂಗಾ ಶ್ರೀ, ತೋಂಟದ ಸಿದ್ಧಲಿಂಗ ಶ್ರೀಗಳ ಸಾಲಿಗೆ ಕಾಡಸಿದ್ದೇಶ್ವರ ಮಠವು ಸೇರುತ್ತದೆ. ಇಲ್ಲಿನ ಶ್ರೀಗಳು ಮಾತೃ ಹೃದಯಿಗಳಾಗಿದ್ದು ಭಕ್ತರ ಕಷ್ಟಗಳಿಗೆ ಸದಾ ಸ್ಪಂದಿಸುವ ಗುಣ ಹೊಂದಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಶೃಂಗೇರಿ ಶಾಸಕ ರಾಜುಗೌಡ, ನಮ್ಮ ದೇಶ ಹಲವಾರು ಸಂಸ್ಕೃತಿಗಳನ್ನು ಹೊಂದಿದ್ದು ವಿವಿಧತೆಯಲ್ಲಿ ಏಕತೆ ಸಾರುವ ದೇಶವಾಗಿದೆ. ನಮ್ಮಲ್ಲಿ ಧಾರ್ಮಿಕ ಶಕ್ತಿಯ ಭಾವನೆ ಹೆಚ್ಚಾಗಿರುವುದೇ ಅದಕ್ಕೆ ಕಾರಣ ಎಂದರು.

ದಿವ್ಯ ಸಾನ್ನಿಧ್ಯ ಮತ್ತು ನೇತೃತ್ವ ವಹಿಸಿದ್ದ ನೊಣವಿನಕೆರೆ ಸೋಮೇಕಟ್ಟೆ ಕಾಡಸಿದ್ದೇಶ್ವರಮಠದ ಪೀಠಾಧ್ಯಕ್ಷ ಶ್ರೀ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿ, ದಾನ ಮಾಡಲು ಸಹ ನಿಧಾನ-ಸಮಾಧಾನ ಅತಿ ಮುಖ್ಯವಾಗಿ ಬೇಕು ಎಂದರು.

ಮಾಜಿ ಶಾಸಕ ಬಿ.ನಂಜಾಮರಿ ಅಧ್ಯಕ್ಷತೆ ವಹಿಸಿದ್ದರು. ಕಾರ‍್ಯಕ್ರಮದಲ್ಲಿ ದೊಡ್ಡಮೇಟಿಕುರ್ಕೆಯ ಬೂದಿಹಾಳ್‌ ಮಠದ ಶಶಿಶೇಖರ ಮಹಾಸ್ವಾಮೀಜಿ, ಗೋಡೆಕೆರೆ ವåಹಾಸ್ವಾಮಿ, ಶಿವರುದ್ರ ಮಹಾಸ್ವಾಮಿ ಚೆನ್ನಪಟ್ಟಣ, ಕಾರದ ವೀರಬಸವ ಸ್ವಾಮೀಜಿ, ವಿಶ್ವಕಲ್ಯಾಣ ಟ್ರಸ್ಟ್‌ನ ಸದಸ್ಯ ಯುವರಾಜ್‌ ಮತ್ತು ಇನ್ನಿತರ ಸ್ವಾಮೀಜಿಯವರು ಭಾಗವಹಿಸಿದ್ದರು.

ಐದು ದಿನಗಳ ಕಾರ‍್ಯಕ್ರಮ ಗಂಗಾ ಪೂಜೆಯೊಂದಿಗೆ ಆರಂಭಗೊಂಡು ಶ್ರೀ ಮಠದ ಪೀಠಾಧ್ಯಕ್ಷ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿ ಕಳಸ ಹೊತ್ತು ಸಾಗಿದರು. ನೊಣವಿನಕೆರೆ ಕೋಡಿ ಬಸವೇಶ್ವರ ದೇವಾಸ್ಥಾನದಿಂದ ಪೂರ್ಣ ಕುಂಭದೂಂದಿಗೆ ಹೊರಟ ಮೆರವಣಿಗೆ ಊರಿನ ಪ್ರಮುಖ ರಾಜಬೀದಿಗಳಲ್ಲಿ ಆನೆ, ಕುದುರೆ, ಕೇಸರಿ ಬಾವುಟಗಳು, ಲಿಂಗವೀರರ ಕುಣಿತ, ಗ್ರಾಮದೇವತೆ, ಕರೀಕೆರೆ ಬ್ರಹ್ಮಲಿಂಗೇಶ್ವರ ಸ್ವಾಮಿ ಮೆರವಣಿಗೆಯೊಂದಿಗೆ, ಹೂವಿನ ಅಲಂಕಾರದ ಜತೆಯಲ್ಲಿ, ಹಲವು ಬಿರುದಾವಳಿಯ ಮೂಲಕ, ನಂದಿಯ ನಡೆಯ ಜತೆಗೆ ಮಂಗಳ ವಾದ್ಯಗಳೊಂದಿಗೆ ಮಠ ಪ್ರವೇಶಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ