ಆ್ಯಪ್ನಗರ

ಮೋದಿ ಆನೆ, ಸಿದ್ದು ಇರುವೆ: ಈಶ್ವರಪ್ಪ

ಪ್ರಧಾನಿ ನರೇಂದ್ರ ಮೋದಿ ಆನೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ಹೇಳಿದ್ದಾರೆ.

Vijaya Karnataka Web 3 Nov 2017, 6:05 pm
ತುಮಕೂರು: ಪ್ರಧಾನಿ ನರೇಂದ್ರ ಮೋದಿ ಆನೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಇರುವೆ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ಹೇಳಿದ್ದಾರೆ. ಬಿಜೆಪಿ ಪರಿವರ್ತನಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ನಿನ್ನೆ ಸಿಎಂ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಈ ರಾಜ್ಯದಲ್ಲಿ ಕಾನೂನು ಇದೇಯಾ ಎಂದು ಪ್ರಶ್ನಿಸಿದರು.
Vijaya Karnataka Web eshwarappa attack on cm siddaramaiah
ಮೋದಿ ಆನೆ, ಸಿದ್ದು ಇರುವೆ: ಈಶ್ವರಪ್ಪ


ಅಕ್ರಮ ಕಸಾಯಿ ಖಾನೆಗಳು ನಡೆಯುತಿದ್ದರೂ ನೋಡಿ ಸುಮ್ಮನಾಗಿದ್ದಾರೆ. ಮಹದೇವಪ್ಪ ಅವರ ಮಗ ಮರಳು ದಂಧೆ ನಡೆಸುತ್ತಿದ್ದರೂ ಸಿಎಂ ಸುಮ್ಮನಿದ್ದಾರೆ. ಅಧಿಕಾರಿಗಳು ಅಕ್ರಮ ಮರಳು ದಂಧೆಕೋರರಿಂದ ರಕ್ಷಣೆ ಕೋರಿದರೆ ಸಿಎಂ ಏನೂ ಮಾಡಿಲ್ಲ. ಗೌರಿ ಲಂಕೇಶ್ ಹತ್ಯೆ ಮಾಡಿದವರು ಯಾರೂ ಅಂತ ಗೊತ್ತಿದ್ದರೂ ಯಾಕೆ ಅರೆಸ್ಟ್ ಮಾಡಿಲ್ಲ. ಕೊಲೆಗಡುಕರಿಗೂ ಸಿಎಂ, ಹೋಂ ಮಿನಿಸ್ಟರ್‌ಗೂ ಸಂಬಂಧ ಇದೆಯಾ ಎಂದು ಪ್ರಶ್ನಿಸಿದರು.

ಜಾರ್ಜ್ ವಿರುದ್ದ ಎಫ್ ಐ ಆರ್ ಆದರೂ ರಾಜೀನಾಮೆ ಪಡೆದಿಲ್ಲ. ಪ್ರಧಾನಿಗೆ ಸಿದ್ದರಾಮಯ್ಯ ಅವರನ್ನು ಕಂಡರೆ ಭಯವಂತೆ. ಆನೆಗೂ ಇರುವೆಗೂ ಏನು ಸಂಬಂಧ, ಯಾವ ಸಿದ್ದರಾಮಯ್ಯ , ಮೋದಿ ಅವರ ಶಕ್ತಿ ಎಲ್ಲಿ ಎಂದು ಈಶ್ವರಪ್ಪ ಪ್ರಶ್ನಿಸಿದರು.

ಎರಡು ಸಾವಿರ ಪಾಕಿಸ್ತಾನದ ಸೈನಿಕರ ಹುಟ್ಟಡಗಿಸಿದ ಕೀರ್ತಿ ಪ್ರಧಾನಿಯವರದ್ದು ಆ ಮೂಲಕ ಭಾರತವನ್ನು ರಕ್ಷಣೆ ಮಾಡಿದ್ದಾರೆ. ಸಿದ್ದರಾಮಯ್ಯ ಲಿಂಗಾಯತ ಮತ್ತು ವೀರಶೈವರ ನಡುವೆ ಭಿನ್ನಾಭಿಪ್ರಾಯ ತಂದಿಕ್ಕಿದ್ದಾರೆ. ದೇಶ, ಧರ್ಮ, ದೇವರ ಬಗ್ಗೆ ಅವಹೇಳನ ಮಾಡುವ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಮುಂದಿನ ಮುಖ್ಯಮಂತ್ರಿ ಆಗುವುದಿಲ್ಲ ಎಂದರು.

ರ‍್ಯಾಲಿಯಿಂದ ಸಿಎಂ ಕುರ್ಚಿ ಅಲ್ಲಾಡಿದೆ: ಶೋಭಾ

ಪರಿವರ್ತನಾ ಯಾತ್ರೆ ಹೊರಡುತಿದ್ದಂತೆ ಸಿಎಂ ಕುರ್ಚಿ ಅಲ್ಲಾಡಿದೆ. ಜೆಡಿ ಎಸ್ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಬಿಬಿಎಂಪಿಯಲ್ಲಿ ಕಾಂಗ್ರೆಸ್ ಜೆಡಿಎಸ್ ಒಂದಾಗಿವೆ. ಅವರಿಂದ ಅಭಿವೃದ್ದಿ ಸಾಧ್ಯವಿಲ್ಲ. ಪರಿವರ್ತನಾ ಯಾತ್ರೆಗೆ ಅನುಮತಿ ನೀಡದೆ ಸತಾಯಿಸಿರುವ ಸಿಎಂ ಸಿದ್ದರಾಮಯ್ಯ ನವರಿಗೆ ಪ್ರಜಾತಂತ್ರದ ಮೇಲೆ ನಂಬಿಕೆ ಇದೆಯಾ, ಅದಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಿದ್ದಾರಾ ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.

ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ, ತುರುವೇಕೆರೆ ಕ್ಷೇತ್ರ ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇವೆ. ಹಾಗಾಗಿ ಬಿಜೆಪಿ ಅಭ್ಯರ್ಥಿ ಮಸಾಲಾ ಜಯರಾಮ್ ಅವರನ್ನು ಬೆಂಬಲಿಸಬೇಕು ಎಂದು ಶೋಭಾ ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ