ಆ್ಯಪ್ನಗರ

ಬಡ್ಡಿ ಹಣಕ್ಕಾಗಿ ಶಿಕ್ಷ ಕ ಕಿರುಕುಳ; ರೈತ ಆತ್ಮಹತ್ಯೆಗೆ ಶರಣು

ಕೊಳವೆ ಬಾವಿ ಕೊರೆಸಿ ಬೆಳೆ ಬಿತ್ತನೆ ಮಾಡುವ ಉದ್ದೇಶದಿಂದ ರೈತ, ಶಿಕ್ಷ ಕನ ಬಳಿ 5 ಲಕ್ಷ ಹಣವನ್ನು ಮೀಟರ್‌ ಬಡ್ಡಿಗೆ ಸಾಲ ಪಡೆದಿದ್ದ. ಆದರೆ, ಅಸಲಿಗೆ ಬಡ್ಡಿ ಕಟ್ಟುವಂತೆ ಪ್ರತಿ ತಿಂಗಳು ಶಿಕ್ಷ ಕ ನೀಡುತ್ತಿದ್ದ ಕಿರುಕುಳ ತಾಳಲಾರದೇ ಮನನೊಂದ ರೈತ ಶಿಕ್ಷ ಕನ ವಿರುದ್ಧ ಡೇತ್‌ ನೋಟ್‌ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.

Vijaya Karnataka 26 Dec 2018, 5:00 am
ಕೊರಟಗೆರೆ: ಕೊಳವೆ ಬಾವಿ ಕೊರೆಸಿ ಬೆಳೆ ಬಿತ್ತನೆ ಮಾಡುವ ಉದ್ದೇಶದಿಂದ ರೈತ, ಶಿಕ್ಷ ಕನ ಬಳಿ 5 ಲಕ್ಷ ಹಣವನ್ನು ಮೀಟರ್‌ ಬಡ್ಡಿಗೆ ಸಾಲ ಪಡೆದಿದ್ದ. ಆದರೆ, ಅಸಲಿಗೆ ಬಡ್ಡಿ ಕಟ್ಟುವಂತೆ ಪ್ರತಿ ತಿಂಗಳು ಶಿಕ್ಷ ಕ ನೀಡುತ್ತಿದ್ದ ಕಿರುಕುಳ ತಾಳಲಾರದೇ ಮನನೊಂದ ರೈತ ಶಿಕ್ಷ ಕನ ವಿರುದ್ಧ ಡೇತ್‌ ನೋಟ್‌ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.
Vijaya Karnataka Web farmer dead
ಬಡ್ಡಿ ಹಣಕ್ಕಾಗಿ ಶಿಕ್ಷ ಕ ಕಿರುಕುಳ; ರೈತ ಆತ್ಮಹತ್ಯೆಗೆ ಶರಣು


ತಾಲೂಕಿನ ಕೋಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಅಳಾಲಸಂದ್ರ ಮಜರೆ ಕರೆಕಲ್ಲು ಗ್ರಾಮದ ಮಹಿಮರಾಮಪ್ಪ ಎಂಬುವರ ಮಗ ಶಿವಣ್ಣ (58) ತನ್ನ ಜಮೀನಿನಲ್ಲಿ ಇರುವ ಹುಣಸೆ ಮರಕ್ಕೆ ಮುಂಜಾನೆ ನೇಣು ಬಿಗಿದುಕೊಂಡು ಸಾವಿನ ಕಾರಣದ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ರೈತ.

ಮೃತ ರೈತ ಶಿವಣ್ಣ ಸಾಯುವ ಮುನ್ನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಡಿಸಿಎಂ ಡಾ.ಜಿ.ಪರಮೇಶ್ವರ್‌, ತುಮಕೂರು ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಸೇರಿದಂತೆ ಕೋಳಾಲ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ಗೆ ಮೂರು ಪುಟದ ಪತ್ರ ಬರೆದು ಅಂಚೆ ಮೂಲಕ ಕಳುಹಿಸಿ, ಬಡ್ಡಿ ಕಟ್ಟುವಂತೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಿಳಿಸಿ ನೇಣು ಹಾಕಿಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ.

ಜಿ.ನಾಗೇನಹಳ್ಳಿ ಗ್ರಾಮದ ನಾಗರತ್ನಮ್ಮನ ಮಗ ಶಿಕ್ಷ ಕ ಸಿದ್ದಯ್ಯ ಎಂಬುವನಿಂದ ಕಳೆದ ಎರಡು ವರ್ಷದ ಹಿಂದೆ 5 ಲಕ್ಷ ಹಣ ಸಾಲ ಪಡೆದು ತನ್ನ ಜಮೀನಿನಲ್ಲಿ 6 ಕೊಳವೆ ಬಾವಿ ಕೊರೆಸಿದ್ದಾನೆ. ಕೊಳವೆ ಬಾವಿಯಲ್ಲಿ ನೀರು ಸಿಗದೇ ಬಿತ್ತನೆ ಮಾಡಿದ ಬೆಳೆಯೂ ನಾಶವಾಗಿದೆ. ಸಾಲ ನೀಡಿದ ವ್ಯಕ್ತಿಯು ಪ್ರತಿ ದಿನ ಬಡ್ಡಿ ನೀಡುವಂತೆ ಮನೆಗೆ ಬಂದು ಕಿರುಕುಳ ನೀಡುತ್ತಿದ್ದ. ಮೀಟರ್‌ ಬಡ್ಡಿಯ ಹಣ ಕಟ್ಟಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾಗಿದ್ದೇನೆ ಎಂದು ಪತ್ರದಲ್ಲಿ ರೈತ ಬರೆದಿದ್ದಾನೆ.

ರೈತ ಶಿವಣ್ಣ ಖಾಸಗಿ ವ್ಯಕ್ತಿಗಳ ಹತ್ತಿರ ಸೇರಿ ಸ್ಥಳೀಯ ವಿವಿಧ ಬ್ಯಾಂಕಿನಲ್ಲಿ 3 ಲಕ್ಷ ಕ್ಕೂ ಅಧಿಕ ಸಾಲ ಪಡೆದಿದ್ದಾರೆ. ಖಾಸಗಿ ವ್ಯಕ್ತಿಯ ಹತ್ತಿರ ಪಡೆದ ಸಾಲಕ್ಕೆ ಪ್ರತಿ ತಿಂಗಳು ಬಡ್ಡಿ ಕಟ್ಟುವಂತೆ ಹಣ ನೀಡಿದ ವ್ಯಕ್ತಿ ಕಿರುಕುಳ ನೀಡುತ್ತಿದ್ದ ಎಂದು ರೈತ ಕುಟುಂಬ ವರ್ಗ ಆರೋಪ ಮಾಡಿದ್ದಾರೆ. ರಾಜ್ಯ ಸರಕಾರ ರೈತನು ಪಡೆದಿರುವ ಖಾಸಗಿ ಸಾಲ ವಸೂಲಿಗೆ ಯಾರೂ ಕಿರುಕುಳ ನೀಡಬಾರದು ಎಂದು ಸೂಚನೆ ನೀಡಿದ್ದರೂ ಸಹ ಇಂತಹ ಘಟನೆ ನಡೆದಿದೆ.

ಕೋಳಾಲ ಪಿಎಸ್ಸೈ ಸಂತೋಷ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ರೈತನು ಸಾವಿಗೆ ಕಾರಣರಾದ ವ್ಯಕ್ತಿಯ ಹೆಸರು ಬರೆದಿರುವ ಡೆತ್‌ ನೋಟ್‌ ಪೊಲೀಸರಿಗೆ ದೊರೆತಿದೆ. ಕೊರಟಗೆರೆ ತಾಲೂಕಿನ ಕೋಳಾಲ ಠಾಣೆಯಲ್ಲಿ ಶಿಕ್ಷ ಕ ಸಿದ್ಧಯ್ಯನ ವಿರುದ್ಧ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ