ತುಮಕೂರು: ಮಾನವನ ಕೈ, ಕಾಲು ಮತ್ತು ಮೂತಿಯನ್ನು ಹೋಲುವ ವಿಚಿತ್ರ ಮೇಕೆ ಮರಿಯೊಂದು ಕೊಡಿಗೇನಹಳ್ಳಿ ಹೊಬಳಿಯ ಚಿಕ್ಕಮಾಲೂರು ಗ್ರಾಪಂ ವ್ಯಾಪ್ತಿಯ ಕಾಳೇನಹಳ್ಳಿ ಗ್ರಾಮದಲ್ಲಿ ಜನಸಿದ್ದು, ಕೆಲವೇ ಹೊತ್ತಿನಲ್ಲಿ ಸಾವನ್ನಪ್ಪಿದೆ.
ಈ ಅಸಹಜ ಮೇಕೆ ಹುಟ್ಟಿದ ಒಂದೆರಡು ನಿಮಿಷದಲ್ಲೇ ಅಸುನೀಗಿದ್ದು, ವಿದ್ಯಮಾನ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ. ಮನುಷ್ಯನಂತೆ ಕೈ ಕಾಲು ಹಾಗೂ ಮೂತಿಯನ್ನು ಹೊಂದಿದ್ದ ಮೇಕೆ ಮರಿಯನ್ನು ಗ್ರಾಮಸ್ಥರು ಮನುಷ್ಯನಿಗೆ ಹೋಲಿಸಿದ್ದಾರೆ.
ಈ ಸಂಬಂಧ ಮನುಷ್ಯ ಸತ್ತಾಗ ಆಚರಿಸುವ ವಿಧಿವಿಧಾನಗಳನ್ನು ಅನುಸರಿಸಿ, ಮೇಕೆ ಮರಿಯ ಅಂತ್ಯಕ್ರಿಯೆ ಮಾಡಲಾಗಿದೆ.
ಜಾನಕಿ ರಾಮಯ್ಯ ಎಂಬವರಿಗೆ ಸೇರಿದ ಮೇಕೆ, 1 ಗಂಡು ಹಾಗೂ ಮತ್ತೊಂದು ಅಸಹಜ ಮೇಕೆ ಮರಿಗೆ ಜನ್ಮ ನೀಡಿತ್ತು. ಜಾನಕಿ ರಾಮಯ್ಯ ಅವರು ಆಡು ಸಾಕಾಣಿಕೆ ಕಸುಬಿನಲ್ಲಿ ತೊಡಗಿದ್ದು, 20 ಮೇಕೆಗಳನ್ನು ಹೊಂದಿದ್ದಾರೆ.