ಆ್ಯಪ್ನಗರ

ಕೃಷಿ ಸಾಲ ಸೌಲಭ್ಯಕ್ಕೂ ಹೆಚ್ಚು ಬಡ್ಡಿ ವಿಧಿಸಿದ್ದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ವಿರುದ್ಧ ರೈತರ ಆಕ್ರೋಶ

ದಾಳಿಂಬೆ ಬೆಳೆ ಸಾಲವಾಗಿ ಕಳೆದ ಹತ್ತು ವರ್ಷಗಳ ಹಿಂದೆ 4.50 ಲಕ್ಷ ಸಾಲ ಪಡೆಯಲಾಗಿತ್ತು, ಬೆಳೆ ರೋಗಕ್ಕೆ ತುತ್ತಾಗಿ ಬೆಳೆ ನಾಶವಾದಾಗ ಇದೇ ಶಾಖಾ ವ್ಯವಸ್ಥಾಪಕರು ಸ್ಥಳ ಪರಿಶೀಲನೆ ಮಾಡಿದರು. ಆದರೆ 4.50 ಲಕ್ಷ ಸಾಲಕ್ಕೆ ಇಂದು 15 ಲಕ್ಷ ಬಡ್ಡಿ ಬಂದಿದೆ.

Vijaya Karnataka Web 6 Jan 2021, 9:22 pm
ತುಮಕೂರು: ಹಲವು ವರ್ಷಗಳಿಂದ ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ರೈತರಿಗೆ ಸಾಲ ಸೌಲಭ್ಯ ನೀಡಿ ಹೆಚ್ಚು ಬಡ್ಡಿಯನ್ನು ವಿಧಿಸಿ ಸುಲಿಗೆ ಮಾಡುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ತಿಳಿಸಿದರು.
Vijaya Karnataka Web ರೈತರ ಪ್ರತಿಭಟನೆ
ರೈತರ ಪ್ರತಿಭಟನೆ


ದೇಶದಲ್ಲಿ ಹರಡಿದ ಕೋವಿಡ್‍ನಿಂದ ರೈತರು, ಜನ ಸಾಮಾನ್ಯರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ತಾಲೂಕಿನ ಸಾವಿರಾರು ರೈತರು ಸಾಲವನ್ನು ಪಡೆದು ಮಳೆ ಬೇಳೆ ಇಲ್ಲದೆ ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ನಮ್ಮ ಕಣ್ಣಮುಂದಿವೆ ಎಂದರು.

ಸಾಲ ಪಡೆದು ಸಾಲ ಮರು ಪಾವತಿಸಲಾಗದೇ ಸುಸ್ತಿದಾರರಾಗಿರುವ ರೈತರಿಗೆ ಸಾಲಮನ್ನಾ ಸೌಲಭ್ಯವೂ ಕೂಡ ಸಮರ್ಪಕವಾಗಿ ವಿತರಿಸಿಲ್ಲ, ಕೃಷಿ ಸಾಲಕ್ಕೆ ಶೇ 15.5 ರಷ್ಟು ಬಡ್ಡಿ ವಿಧಿಸಲಾಗುತ್ತಿದೆ. ಇದನ್ನು ಕೂಡಲೇ ಸರಿಪಡಿಸದೇ ಹೋದಲ್ಲಿ ಶಾಖೆಯ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕೊಡಿಗೆಹಳ್ಳಿ ಗ್ರಾಮದ ರೈತ ಮಹಿಳೆ ಲಕ್ಷ್ಮಿ ಮಾತನಾಡಿ ಇದೇ ಶಾಖೆಯಲ್ಲಿ 2005 ರಲ್ಲಿ ಕೃಷಿ ಸಾಲವಾಗಿ 16 ಸಾವಿರ ಸಾಲ ಪಡೆದಿದ್ದು ಇಂದಿಗೆ 98 ಸಾವಿರ ಆಗಿದೆ. 16 ಸಾವಿರಕ್ಕೆ 82 ಸಾವಿರ ಬಡ್ಡಿ ಹೇಗೆ ಎಂದು ಪ್ರಶ್ನಿಸಿದರು. ಕೃಷಿ ಸಾಲಕ್ಕೆ ವಾಣಿಜ್ಯ ಬಡ್ಡಿ ವಿಧಿಸಲಾಗಿದೆ. ಇದು ರೈತರ ಶಾಖೆಯೋ ಅಥವಾ ಕಾರ್ಪೊರೇಟ್ ಸಂಸ್ಥೆಯೋ ತಿಳಿಯದು ಎಂದು ಬೇಸರ ವ್ಯಕ್ತಪಡಿಸಿದರು.

ಪಾವಗಡ ಮೇಲಧಿಕಾರಿಗಳ ಆದೇಶದಂತೆ ಸುಸ್ತಿದಾರರಿಗೆ ವಿನಾಯಿತಿ ನೀಡಿ ಸಾಲ ಮರು ಪಾವತಿ ಮಾಡಿಸಲಾಗುತ್ತಿದ್ದು ತಾಲೂಕಿನ 5 ಶಾಖೆಗಳಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ.
ದಯಾನಂದ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ

ಕೆ.ಟಿ.ಹಳ್ಳಿ ಗ್ರಾಮದ ಈಶ್ವರಪ್ಪ ಮಾತನಾಡಿ ದಾಳಿಂಬೆ ಬೆಳೆ ಸಾಲವಾಗಿ ಕಳೆದ ಹತ್ತು ವರ್ಷಗಳ ಹಿಂದೆ 4.50 ಲಕ್ಷ ಸಾಲ ಪಡೆಯಲಾಗಿತ್ತು, ಬೆಳೆ ರೋಗಕ್ಕೆ ತುತ್ತಾಗಿ ಬೆಳೆ ನಾಶವಾದಾಗ ಇದೇ ಶಾಖಾ ವ್ಯವಸ್ಥಾಪಕರು ಸ್ಥಳ ಪರಿಶೀಲನೆ ಮಾಡಿದರು. ಆದರೆ 4.50 ಲಕ್ಷ ಸಾಲಕ್ಕೆ ಇಂದು 15 ಲಕ್ಷ ಬಡ್ಡಿ ಬಂದಿದೆ. ಜೀವನ ನಿರ್ವಹಣಿಯೇ ಕಷ್ಠವಾಗಿರುವಾಗ ಹೆಚ್ಚು ಸಾಲಕಟ್ಟಿ ಎಂದರೆ ನಾವು ಏನು ಮಾಡಬೇಕು. ನಮಗೆ ಸ್ವಲ್ಪ ವಿಷ ಕೊಟ್ಟು ಬಿಡಿ ಎಂದು ಕಣ್ಣಿರು ಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ