ಆ್ಯಪ್ನಗರ

933 ಫಲಾನುಭವಿಗಳಿಗೆ ಮನೆ ಹಂಚಿಕೆ

ನಗರದ ದಿಬ್ಬೂರಿನಲ್ಲಿ ಕೊಳೆಗೇರಿ ಅಭಿವೃದ್ಧಿ ನಿಗಮದ ವತಿಯಿಂದ ನಿರ್ಮಾಣವಾಗಿರುವ 1200 ಮನೆಗಳಲ್ಲಿ ಮೊದಲನೇ ಹಂತವಾಗಿ ವಂತಿಗೆ ಪಾವತಿಸಿದ 933 ಮನೆಗಳನ್ನು ಫಲಾನುಭವಿಗಳಿಗೆ ಜಿಲ್ಲಾಧಿಕಾರಿ ಡಾ.ವಿಶಾಲ್‌ ಅವರ ಅಧ್ಯಕ್ಷತೆಯಲ್ಲಿ ಲಾಟರಿ ಮೂಲಕ ಹಂಚಿಕೆ ಮಾಡಲಾಯಿತು.

Vijaya Karnataka 21 Jul 2018, 4:31 pm
ತುಮಕೂರು: ನಗರದ ದಿಬ್ಬೂರಿನಲ್ಲಿ ಕೊಳೆಗೇರಿ ಅಭಿವೃದ್ಧಿ ನಿಗಮದ ವತಿಯಿಂದ ನಿರ್ಮಾಣವಾಗಿರುವ 1200 ಮನೆಗಳಲ್ಲಿ ಮೊದಲನೇ ಹಂತವಾಗಿ ವಂತಿಗೆ ಪಾವತಿಸಿದ 933 ಮನೆಗಳನ್ನು ಫಲಾನುಭವಿಗಳಿಗೆ ಜಿಲ್ಲಾಧಿಕಾರಿ ಡಾ.ವಿಶಾಲ್‌ ಅವರ ಅಧ್ಯಕ್ಷತೆಯಲ್ಲಿ ಲಾಟರಿ ಮೂಲಕ ಹಂಚಿಕೆ ಮಾಡಲಾಯಿತು.
Vijaya Karnataka Web home distribution for 933 beneficiaries
933 ಫಲಾನುಭವಿಗಳಿಗೆ ಮನೆ ಹಂಚಿಕೆ


ಮನೆ ಪಡೆದ ಫಲಾನುಭವಿಗಳಿಗೆ ಆದೇಶ ಪತ್ರವನ್ನು ಮೇಯರ್‌ ಸುಧೀಶ್ವರ್‌, ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ನಯಾಜ್‌ ಅಹಮದ್‌, ವಾರ್ಡ್‌ ಸದಸ್ಯ ರಾಜಣ್ಣ, ಪಾಲಿಕೆ , ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಅನುಪಮಾ, ಆಯುಕ್ತ ಮಂಜುನಾಥಸ್ವಾಮಿ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಎಇಇ ಹನುಮಂತ ರೆಡ್ಡಿ, ಸಹಾಯಕ ಎಂಜಿನಿಯರ್‌ ಬಿ.ಆರ್‌. ಚೇತನ್‌ಕುಮಾರ್‌, ಶಂಕರ್‌ ಮತ್ತಿತರಿದ್ದರು.

ಮನೆ ಹಂಚಿಕೆ ನಂತರ ಬಡಾವಣೆಗೆ ಭೇಟಿ ನೀಡಿ ವೀಕ್ಷಿಸಿದ ಜಿಲ್ಲಾಧಿಕಾರಿ ಡಾ. ವಿಶಾಲ್‌, ಒಡೆದು ಹೋಗಿರುವ ಕಿಟಕಿಗಳನ್ನು ಫಲಾನುಭವಿಗಳು ಮನೆಗೆ ಸೇರುವ ಮುನ್ನವೇ ರಿಪೇರಿ ಮಾಡಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

20ಟಿಎಂಆರ್‌5

ನಗರದ ದಿಬ್ಬೂರಿನಲ್ಲಿ ಕೊಳೆಗೇರಿ ಅಭಿವೃದ್ಧಿ ನಿಗಮದಿಂದ ನಿರ್ಮಾಣವಾಗಿರುವ 1200 ಮನೆಗಳಲ್ಲಿ ಮೊದಲನೇ ಹಂತವಾಗಿ ವಂತಿಗೆ ಪಾವತಿಸಿದ 933 ಮನೆಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಿದ ನಂತರ ಜಿಲ್ಲಾಧಿಕಾರಿ ಡಾ. ವಿಶಾಲ್‌ ಬಡಾವಣೆಗೆ ಭೇಟಿ ನೀಡಿ ಮನೆಗಳನ್ನು ವೀಕ್ಷಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ