ಆ್ಯಪ್ನಗರ

ಆಸ್ತಿ ವಿವಾದ; ಗಂಡನ ಹತ್ಯೆ, ಮೊದಲ ಪತ್ನಿ ಬಂಧನ

ಪತ್ನಿಯೇ ಗಂಡನನ್ನು ಕೊಂದು ಹಳ್ಳಕ್ಕೆ ಎಸೆದಿರುವ ಘಟನೆ ತಾಲೂಕಿನ ಸೋಮನಹಳ್ಳಿಯಲ್ಲಿ ಇತ್ತೀಚೆಗೆ ನಡೆದಿದೆ. ಆಸ್ತಿ ವಿಚಾರವಾಗಿ ಪತಿಯನ್ನು ಕೊಲೆ ಮಾಡಿರುವ ಶಂಕೆ ಮೇರೆಗೆ ಮೊದಲ ಪತ್ನಿ ಶಾಂತಮ್ಮನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

Vijaya Karnataka 14 Nov 2018, 5:00 am
ಚಿಕ್ಕನಾಯಕನಹಳ್ಳಿ: ಪತ್ನಿಯೇ ಗಂಡನನ್ನು ಕೊಂದು ಹಳ್ಳಕ್ಕೆ ಎಸೆದಿರುವ ಘಟನೆ ತಾಲೂಕಿನ ಸೋಮನಹಳ್ಳಿಯಲ್ಲಿ ಇತ್ತೀಚೆಗೆ ನಡೆದಿದೆ. ಆಸ್ತಿ ವಿಚಾರವಾಗಿ ಪತಿಯನ್ನು ಕೊಲೆ ಮಾಡಿರುವ ಶಂಕೆ ಮೇರೆಗೆ ಮೊದಲ ಪತ್ನಿ ಶಾಂತಮ್ಮನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
Vijaya Karnataka Web husband murder first wife arrest
ಆಸ್ತಿ ವಿವಾದ; ಗಂಡನ ಹತ್ಯೆ, ಮೊದಲ ಪತ್ನಿ ಬಂಧನ


ತಾಲೂಕಿನ ಶೆಟ್ಟಿಕೆರೆ ಹೋಬಳಿ ಸೋಮನಹಳ್ಳಿ ನಿವಾಸಿ ಗಂಗಾಧರಯ್ಯರನ್ನು ಕಳೆದ ಭಾನುವಾರ ಕೊಲೆ ಮಾಡಿ, ಹಳ್ಳದಲ್ಲಿ ಎಸೆಯಲಾಗಿತ್ತು. ಮೃತರಿಗೆ ಇಬ್ಬರು ಹೆಂಡತಿಯರಿದ್ದು, ವೈಯಕ್ತಿಕ ದ್ವೇಷದಿಂದ ಗಂಡನನ್ನೇ ಕೊಲೆ ಮಾಡಿರುವ ಶಂಕೆ ಹಿನ್ನೆಲೆಯಲ್ಲಿ ಮೊದಲ ಹೆಂಡತಿ ಶಾಂತಮ್ಮನನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.

ಗಂಗಾಧರಯ್ಯನವರ ಮೊದಲ ಹೆಂಡತಿ ಶಾಂತಮ್ಮನಿಗೆ ಒಬ್ಬ ಮಗಳು ಹಾಗೂ ಎರಡನೇ ಹೆಂಡತಿ ಜಯಮ್ಮನಿಗೆ ಒಬ್ಬ ಮಗನಿದ್ದಾನೆ. ಇತ್ತೀಚೆಗೆ ಶಾಂತಮ್ಮನ ಮಗಳ ವಿವಾಹ ನಡೆದಿತ್ತು. ನಂತರ ಶಾಂತಮ್ಮ ಹಾಗೂ ಜಯಮ್ಮ ನಡುವೆ ಆಸ್ತಿ ವಿಚಾರವಾಗಿ ಸಣ್ಣಪುಟ್ಟ ಘರ್ಷಣೆಗಳು ನಡೆಯುತ್ತಿತ್ತು ಎನ್ನಲಾಗಿದೆ.

ಕಳೆದ ಭಾನುವಾರ ರಾತ್ರಿ ಸೋಮನಹಳ್ಳಿಯಿಂದ ಒಂದು ಕಿ.ಮೀ. ದೂರದ ತೋಟದ ಬಳಿ ಗಂಗಾಧರಯ್ಯನವರನ್ನು ಕೊಲೆ ಮಾಡಲಾಗಿತ್ತು. ಅಲ್ಲಿ ಅವರ ಚಪ್ಪಲಿ, ಪಂಚೆ, ಮೊಬೈಲ್‌ ಪತ್ತೆಯಾಗಿದೆ. ಚಿ.ನಾ. ಹಳ್ಳಿ -ತಿಪಟೂರು ಗಡಿಭಾಗದ ಕಟ್ಟೆಕಳೆವು ಗಡಿ ಹಳ್ಳದಲ್ಲಿ ಶವ ಎಸೆದು ಹೋಗಿದ್ದರು. ಈ ಬಗ್ಗೆ ಸೋಮವಾರ ಬೆಳಗ್ಗೆ ಪೊಲೀಸರಿಗೆ ಸುದ್ದಿ ತಲುಪಿತ್ತು. ತಿಪಟೂರು ಡಿವೈಎಸ್ಪಿ ವೇಣುಗೋಪಾಲ್‌, ಕೆ.ಬಿ.ಕ್ರಾಸ್‌ನ ತನಿಖಾಧಿಕಾರಿ ರಾಮ್‌ಪ್ರಸಾದ್‌, ಚಿ.ನಾ.ಹಳ್ಳಿ ವೃತ್ತ ನಿರೀಕ್ಷ ಕ ಸುರೇಶ್‌, ಪಿಎಸ್‌ಐ ಟಿ.ಎಚ್‌.ಮಂಜುನಾಥ್‌ ಸ್ಥಳ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ