ಆ್ಯಪ್ನಗರ

ಚುನಾವಣೆಯಲ್ಲಿ ಕ್ಷೇತ್ರದ ಜನತೆಗೆ ನೀಡಿದ್ದ ವಾಗ್ದಾನದಂತೆ ನಡೆದುಕೊಂಡಿದ್ದೇನೆ: ಶಾಸಕ ವೀರಭದ್ರಯ್ಯ

ಕ್ಷೇತ್ರದಲ್ಲಿ ಕೈಗಾರಿಕಾ ವಲಯ ಮಂಜೂರಾಗಿದೆ. ಕೆಲವೇ ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಲಿದ್ದು, ಅತಿ ಶೀಘ್ರದಲ್ಲೇ ಕೈಗಾರಿಕೆಗಳು ಕ್ಷೇತ್ರವನ್ನು ಪ್ರವೇಶಿಸಲಿದೆ. ಇದರಿಂದ ಕ್ಷೇತ್ರದ ನಿರುದ್ಯೋಗ ದೂರಾಗಲಿದ್ದು, ಇದಕ್ಕೆ ಕಾರಣರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದ್ದಾರೆ.

Vijaya Karnataka Web 26 Feb 2021, 1:08 pm
ಮಧುಗಿರಿ: ಚುನಾವಣೆಯಲ್ಲಿ ಕ್ಷೇತ್ರದ ಜನತೆಗೆ ನೀಡಿದ್ದ ವಾಗ್ದಾನದಂತೆ ಕೈಗಾರಿಕಾ ವಲಯ ಮಂಜೂರಾಗಿದೆ. ಇಂದು ಗೆಜೆಟ್ ನೋಟಿಪಿಕೇಷನ್ ಆಗಿದ್ದು, ನುಡಿದಂತೆ ನಡೆದಿದ್ದೇನೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Vijaya Karnataka Web veerabhadraiah


ಹಲವರ ಪಿತೂರಿಯಿದ್ದರೂ ಈ ಕಾರ್ಯ ಸಾಧನೆ ನನಗೆ ತೃಪ್ತಿ ತಂದಿದೆ. ಕ್ಷೇತ್ರದಲ್ಲಿ ಕೈಗಾರಿಕಾ ವಲಯ ಮಂಜೂರಾಗಿದೆ. ಕೆಲವೇ ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಲಿದ್ದು, ಅತಿ ಶೀಘ್ರದಲ್ಲೇ ಕೈಗಾರಿಕೆಗಳು ಕ್ಷೇತ್ರವನ್ನು ಪ್ರವೇಶಿಸಲಿದೆ. ಇದರಿಂದ ಕ್ಷೇತ್ರದ ನಿರುದ್ಯೋಗ ದೂರಾಗಲಿದ್ದು, ಇದಕ್ಕೆ ಕಾರಣರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
‘ನಾನು ಹೋರಾಟಕ್ಕೆ ಸಿದ್ಧನಾಗಿದ್ದೇನೆ, ನೀವು ಪಾದಯಾತ್ರೆಗೆ ಸಿದ್ಧರಾಗಿ’; ಎಚ್‌ಡಿ ದೇವೇಗೌಡ
ಕರ್ನಾಟಕ ಕೆಐಎಡಿಬಿ ಆಕ್ಟ್ ಪ್ರಕಾರ ಸಕ್ಷನ್ 28/1ಪ್ರಕಾರ ಗೆಜೆಟ್ ನೋಟಿಫಿಕೇಷನ್ ಕೂಡ ಅಂಗೀಕಾರಗೊಂಡಿದೆ ಎಂದು ತಿಳಿಸಿರುವ ಅವರು, ಡಿ.ವಿ.ಹಳ್ಳಿಯಲ್ಲಿ 12.35 ಎಕರೆ, ಮದ್ಲೇರಹಳ್ಳಿಯಲ್ಲಿ 160.17 ಎಕರೆ, ದಬ್ಬೇಗಟ್ಟದಲ್ಲಿ 132.32 ಎಕರೆ, ಕಂಬದಹಳ್ಳಿಯಲ್ಲಿ 9.01 ಎಕರೆ, ಹರಿಹರಪುರ 21.6 ಎಕರೆ, ಒಟ್ಟು 336.11 ಎಕರೆ ಭೂಸ್ವಾಧೀನಕ್ಕೆ ಒಳಪಡುವ ಭೂಮಿಯಾಗಿದ್ದು, ಇದರಲ್ಲಿ 39.6 ಎಕರೆ ಕರಾಬು, ಹಾಗೂ 297.5 ಎಕರೆ ಹಿಡುವಳಿ ಜಮೀನಾಗಿದೆ. ಕೈಗಾರಿಕಾ ಪ್ರದೇಶ ಎನ್ನುವುದರ ಜೊತೆಗೆ ಭೂಸ್ವಾದೀನ ನಡೆದು ಆದಷ್ಟೂ ಬೇಗ ಕೈಗಾರಿಕೆಗಳು ಮಧುಗಿರಿ ಪ್ರವೇಶಿಸಲಿವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ