ಆ್ಯಪ್ನಗರ

ಹಾಸನ ರೇವಣ್ಣನ ಸಾಮ್ರಾಜ್ಯನಾ? ಜೆ.ಸಿ. ಮಾಧುಸ್ವಾಮಿ ಟಾಂಗ್

"ತಾವು ಕಷ್ಟ ಪಡೋಕೆ ಸಚಿವರಾಗಿರುವುದು.‌ ತಮ್ಮ ಅಧಿಕಾರವಧಿಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಕೆಲಸ ಮಾಡುತ್ತೇವೆ. ಎರಡೆರಡು ಜಿಲ್ಲೆಗಳ ಉಸ್ತುವಾರಿಯಿಂದ ತಮಗೆ ಯಾವುದೇ ಒತ್ತಡವಾಗುವುದಿಲ್ಲ,” ಎಂದು ಜೆ.ಸಿ. ಮಾಧುಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.

Vijaya Karnataka 19 Sep 2019, 5:20 pm
ತುಮಕೂರು: ಹಾಸನ ಕರ್ನಾಟಕ ರಾಜ್ಯದ ಒಳಗಡೆ ಇದೆ. ಹಾಸನವನ್ನು ಯಾರಿಗೂ ಬರೆದು ಕೊಟ್ಟಿಲ್ಲ. ಅದು ರೇವಣ್ಣನ ಸಾಮ್ರಾಜ್ಯವಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಟಾಂಗ್ ನೀಡಿದರು.
Vijaya Karnataka Web JC Madhu Swamy


‘ಹಾಸನದಲ್ಲಿ ಎಚ್.ಡಿ. ರೇವಣ್ಣ ಎಲ್ಲಾ ವಿಷಯದಲ್ಲೂ ಹೆಚ್ಚು ಹಸ್ತಕ್ಷೇಪ ಮಾಡುತ್ತಿದ್ದಾರೆ’ ಎಂಬ ಸುದ್ದಿಗಾರರ ಪ್ರಶ್ನೆಗೆ ಗುರುವಾರ ಉತ್ತರಿಸಿದ ಅವರು, “ತುಮಕೂರಿಗಿಂತ ಹಾಸನ ತುಂಬಾ ಚೆನ್ನಾಗಿಯೇ ಇದೆ. ಹಾಸನವನ್ನು ರೈಲ್ವೆ ಹಳಿಯ ಮೇಲೆ ತರುವ ಸಾಮರ್ಥ್ಯ ತಮಗೆ ಇದೆ ಅಂತ ಹಾಸನ ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಿಸಿದ್ದಾರೆ. ಅಧಿಕಾರಿಗಳು ನನ್ನ ಮಾತು ಕೇಳಬೇಕು ಅನ್ನೋ ಆಕ್ಷೇಪ ಮಾಡುವ ರಾಜಕಾರಣಿ ನಾನಲ್ಲ,” ಎಂದು ಎಚ್.ಡಿ. ರೇವಣ್ಣ ಅವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

ಸರಕಾರ ದಿವಾಳಿಯಾಗಿದ್ದರೆ ಅದನ್ನಾದರೂ ಘೋಷಣೆ ಮಾಡಿ: ರೇವಣ್ಣ ಆಕ್ರೋಶ

ಕಷ್ಟ ಪಡೋಕೆ ಸಚಿವ ಆಗಿರೋದು

ಸಚಿವ ಸ್ಥಾನದ ಜತೆಗೆ ಒಬ್ಬೊಬ್ಬರಿಗೆ ಎರಡೆರಡು ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ. ಇದರಿಂದ ಒತ್ತಡ ಉಂಟಾಗುವುದಿಲ್ಲವೇ ಎಂಬ ಪ್ರಶ್ನೆಗೆ, 'ತಾವು ಕಷ್ಟ ಪಡೋಕೆ ಸಚಿವರಾಗಿರುವುದು.‌ ತಮ್ಮ ಅಧಿಕಾರವಧಿಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಕೆಲಸ ಮಾಡುತ್ತೇವೆ. ತಮಗೆ ಯಾವುದೇ ಒತ್ತಡವಾಗುವುದಿಲ್ಲ,' ಎಂದು ಸಮರ್ಥಿಸಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ