ಆ್ಯಪ್ನಗರ

ಮಾಧುಸ್ವಾಮಿ ಬಗ್ಗೆ ಅವಹೇಳನಕಾರಿ ಪೋಸ್ಟ್‌ : ಜೆಡಿಎಸ್ ವಿರುದ್ಧ ದೂರು

ಕಾನೂನು ಸಚಿವ ಜೆ.ಸಿ. ಮಾಧುಸ್ಚಾಮಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಜೆಡಿಎಸ್ ಪೇಜ್​ ವಿರುದ್ಧ ಬಿಜೆಪಿ ದೂರು ದಾಖಲಿಸಿದೆ. ಜೆಡಿಎಸ್​ ಕರ್ನಾಟಕ ಪೇಜ್​ನಲ್ಲಿ ಅವಹೇಳಕಾರಿ ಪೋಸ್ಟ್​ ಹಾಕಲಾಗಿತ್ತು.

Vijaya Karnataka Web 21 Nov 2019, 8:14 pm
ತುಮಕೂರು: ಕಾನೂನು ಸಚಿವ ಜೆ.ಸಿ. ಮಾಧುಸ್ಚಾಮಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಜೆಡಿಎಸ್ ಪೇಜ್ ವಿರುದ್ಧ ಬಿಜೆಪಿ ದೂರು ದಾಖಲಿಸಿದೆ. ಸಾಮಾಜಿಕ ತಾಣ ಟಿಕ್ ಟಾಕ್ನಲ್ಲಿ ಪುರುಷರಿಗೆ ಮೋಸ ಮಾಡಿ ಹಣ ಪೀಕುತ್ತಿದ್ದ ಮಹಿಳೆಯ ಬಗ್ಗೆ ಇತ್ತೀಚಿಗೆ ಸುದ್ದಿಯಾಗಿತ್ತು.
Vijaya Karnataka Web madhu swamy
ಸಚಿವ ಜೆಸಿ ಮಾಧುಸ್ವಾಮಿ


ಆ ಮಹಿಳೆಯ ಫೋಟೋ ಜೊತೆಗೆ ಸಚಿವ ಮಾಧುಸ್ವಾಮಿ ಫೋಟೋವನ್ನು ಜೋಡಿಸಿ, "ಟಿಕ್ ಟಾಕ್ನಲ್ಲಿ ಪರಿಚಯ, ಮದುವೆಯಾಗ್ತೀನಿ ಎಂದು ಮಾಧುಸ್ವಾಮಿಗೆ ನಾಲ್ಕು ಕೋಟಿ ಪೀಕಿದ ಬ್ಯೂಟಿ" ಎಂದು ಅಡಿ ಬರಹ ಬರೆದು ಜೆಡಿಎಸ್ ಕರ್ನಾಟಕ ಪೇಜ್ನಲ್ಲಿ ಪೋಸ್ಟ್ ಮಾಡಲಾಗಿತ್ತು.



ಈ ಬಗ್ಗೆ ಚಿಕ್ಕನಾಯಕನ ಹಳ್ಳಿ ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಸಂಚಾಲಕ ಯೋಗೇಶ್ವರ್, ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ‌. ಸಚಿವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ