ಆ್ಯಪ್ನಗರ

ರೈತರಿಗೆ ಮಾಹಿತಿ ನೀಡದೆ ಏಕಾಏಕಿ ಡೈರಿ ಬಂದ್‌

ರೈತರು ಡೈರಿಗೆ ನೀಡುವ ಹಾಲಿಗೂ ರಾಜಕೀಯ ಕೆಸರು ಮೆತ್ತಿಕೊಂಡಿದ್ದು, ಗುಣಮಟ್ಟದ ಹಾಲು ನೀಡುತ್ತಿಲ್ಲ ಎಂಬ ಕಾರಣ ನೀಡಿ ಮಧುಗಿರಿಯ ಕೊಡಿಗೇನಹಳ್ಳಿ ಹೋಬಳಿಯ ಯಾಕಾರ್ಲಹಳ್ಳಿಯ‌ಲ್ಲಿ ಡೈರಿ ಬಂದ್‌ ಮಾಡಲಾಗಿದೆ.

Vijaya Karnataka Web 12 Apr 2018, 3:53 pm
ತುಮಕೂರು: ರೈತರು ಡೈರಿಗೆ ನೀಡುವ ಹಾಲಿಗೂ ರಾಜಕೀಯ ಕೆಸರು ಮೆತ್ತಿಕೊಂಡಿದ್ದು, ಗುಣಮಟ್ಟದ ಹಾಲು ನೀಡುತ್ತಿಲ್ಲ ಎಂಬ ಕಾರಣ ನೀಡಿ ಮಧುಗಿರಿಯ ಕೊಡಿಗೇನಹಳ್ಳಿ ಹೋಬಳಿಯ ಯಾಕಾರ್ಲಹಳ್ಳಿಯ‌ಲ್ಲಿ ಡೈರಿ ಬಂದ್‌ ಮಾಡಲಾಗಿದೆ.

ರೈತರಿಗೆ ಮಾಹಿತಿ ನೀಡದೆ ಏಕಾಏಕಿ ಬಂದ್ ಮಾಡಿರುವುದರಿಂದ ಎರಡು ದಿನದಿಂದ ಬೆಳಗ್ಗೆ 400ಲೀಟರ್‌, ಸಂಜೆ 350ಲೀಟರ್‌ ಹಾಲು ನಷ್ಟವಾಗಿದೆ. ಕಾರ್ಯದರ್ಶಿ ತಿಮ್ಮಯ್ಯ ಅವರ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಗ್ರಾಮಸ್ಥರು ಜೆಡಿಎಸ್ ಪರ ವಾಲಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಏಕಾ ಏಕಿ ಡೈರಿ ಬಂದ್ ಮಾಡಿದ್ದರಿಂದ ರೈತರು ಕಂಗಾಲಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ