ಆ್ಯಪ್ನಗರ

ಬೇಸಾಯದತ್ತ ಆಸಕ್ತಿ ಮೂಡಲಿ: ಶಾಸಕ

ನಾನಾ ಕಾರಣಗಳಿಂದ ಅನೇಕ ರೀತಿಯಲ್ಲಿ ಕೃಷಿ ಜತೆಗೆ ಕೃಷಿಕನೂ ಸೊರಗುತ್ತಿದ್ದಾನೆ. ಕೃಷಿ ಸೊರಗಿದರೆ ದೇಶಕ್ಕೆ ಆಹಾರದ ಅಭಾವ ಉಂಟಾಗಲಿದೆ ಎಂದು ಶಾಸಕ ಎಂ.ವಿ. ವೀರಭದ್ರಯ್ಯ ತಿಳಿಸಿದರು

Vijaya Karnataka 10 Jul 2018, 5:00 am
ಮಧುಗಿರಿ: ನಾನಾ ಕಾರಣಗಳಿಂದ ಅನೇಕ ರೀತಿಯಲ್ಲಿ ಕೃಷಿ ಜತೆಗೆ ಕೃಷಿಕನೂ ಸೊರಗುತ್ತಿದ್ದಾನೆ. ಕೃಷಿ ಸೊರಗಿದರೆ ದೇಶಕ್ಕೆ ಆಹಾರದ ಅಭಾವ ಉಂಟಾಗಲಿದೆ ಎಂದು ಶಾಸಕ ಎಂ.ವಿ. ವೀರಭದ್ರಯ್ಯ ತಿಳಿಸಿದರು.
Vijaya Karnataka Web lets be interested in farmingmla
ಬೇಸಾಯದತ್ತ ಆಸಕ್ತಿ ಮೂಡಲಿ: ಶಾಸಕ


ತಾಲೂಕಿನ ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಕೃಷಿ ಕ್ಷೇತ್ರ ಸಂಕಷ್ಟದಲ್ಲಿದೆ. ನಾನಾ ಕಾರಣಗಳಿಂದ ಕೃಷಿಗೆ ತೊಂದರೆಯಾಗುತ್ತಿದೆ. ಜನಸಂಖ್ಯೆ ಹೆಚ್ಚಳದಿಂದ ಕೃಷಿ ಭೂಮಿ ಕಡಿಮೆಯಾಗುತ್ತಿದ್ದು, ವ್ಯವಸಾಯದ ಜಮೀನು ಇಲ್ಲವಾಗುತ್ತಿದೆ. ಆದ್ದರಿಂದ ಬೇಸಾಯದತ್ತ ಆಸಕ್ತಿ ಮೂಡಿಸುವ ಕೆಲಸವಾಗಬೇಕಿದೆ ಎಂದರು.

ಉಪ ಕೃಷಿ ನಿರ್ದೇಶಕಿ ರೂಪಾದೇವಿ ಮಾತನಾಡಿ, ಕೃಷಿ ಇಲಾಖೆ 105 ವರ್ಷಗಳ ಇತಿಹಾಸ ಹೊಂದಿದ್ದು, ಅಂದಿನಿಂದ ರೈತರ ಸೇವೆಯಲ್ಲಿ ತೊಡಗಿದೆ. ಈ ಹಾದಿಯಲ್ಲಿ ಹತ್ತು ಹಲವಾರು ಯೋಜನೆಗಳನ್ನು ರೂಪಿಸಿಕೊಂಡು ಬಂದಿದ್ದೇವೆ ಎಂದರು.

ಸಮಾರಂಭದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಭಾಗ್ಯಮ್ಮ, ಚೇತನಾ, ಕವಿತಾ, ಅರುಣ್‌, ಬಡವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೀರ್ತಿಸುರೇಶ್‌, ತಾಪಂ ಸದಸ್ಯ ಹೆಚ್‌.ಆರ್‌.ದೊಡ್ಡಯ್ಯ, ತಾಲೂಕು ಕೃಷಿಕ ಸಮಾಜದ ನಿರ್ದೇಶಕಿ ಕೀರ್ತಿಶ್ರೀ, ಸಿದ್ಧಗಂಗಮ್ಮ, ಲಕ್ಷ್ಮೀದೇವಮ್ಮ, ಲಕ್ಷ್ಮೀದೇವಿ, ಎ.ಪಿ.ಎಂ.ಸಿ ಸದಸ್ಯರಾದ ಚಂದ್ರಕುಮಾರ್‌, ಚಿಕ್ಕಮ್ಮ ಮುಂತಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ