ಆ್ಯಪ್ನಗರ

ತುಮಕೂರು: ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದ ಆರೋಪಿಗೆ ಶಿಕ್ಷೆ!

ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದ ಆರೋಪಿಗೆ ತುಮಕೂರಿನ 3ನೇ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ 1 ವರ್ಷ ಸಾದಾ ಶಿಕ್ಷೆ ಮತ್ತು ದಂಡ ವಿಧಿಸಿದೆ. ನ್ಯಾಯಾಲಯವು, ಬುಧವಾರ ಈ ಸಂಬಂಧ ವಿಚಾರಣೆ ನಡೆಸಿದಾಗ ಆರೋಪಿ ಶಿವಪ್ಪ ಮಾಡಿರುವ ಅಪರಾಧ ಸಾಕ್ಷ್ಯಾಧಾರಗಳಿಂದ ರುಜುವಾತಾಗಿದೆ

Vijaya Karnataka Web 29 Oct 2020, 12:58 pm
ತುಮಕೂರು: ಮನೆ ಮುಂದಿನ ಚಪ್ಪಡಿ ಮೇಲೆ ಕುಳಿತಿದ್ದ ಪರಿಶಿಷ್ಟ ಜಾತಿಯ ವ್ಯಕ್ತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದ ಆರೋಪಿಗೆ ತುಮಕೂರಿನ 3ನೇ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ 1 ವರ್ಷ ಸಾದಾ ಶಿಕ್ಷೆ ಮತ್ತು ದಂಡ ವಿಧಿಸಿದೆ.
Vijaya Karnataka Web arrest
ಸಾಂದರ್ಭಿಕ ಚಿತ್ರ


ತುಮಕೂರು ಗ್ರಾಮಾಂತರ ಪೊಲೀಸ್‌ ಠಾಣೆಯ ಹೆಗ್ಗೆರೆ ಹೊಸ ಬಡಾವಣೆಯ ನಿವಾಸಿ ಶಿವಪ್ಪ ಶಿಕ್ಷೆಗೊಳಗಾದ ಆರೋಪಿ. 2016ರ ಮೇ 23ರಂದು ಹೊಸ ಬಡಾವಣೆಯ ನಿವಾಸಿ ರಮೇಶ್‌ ಎಂಬುವವರ ಮನೆ ಮುಂದಿನ ಚರಂಡಿ ಮೇಲೆ ಹಾಕಿದ್ದ ಕಲ್ಲುಚಪ್ಪಡಿ ಮೇಲೆ ಕುಳಿತಿದ್ದ ಪ.ಜಾತಿಗೆ ಸೇರಿದ ವ್ಯಕ್ತಿಯನ್ನು ಸವರ್ಣೀಯ ಜಾತಿಗೆ ಸೇರಿದ ಆರೋಪಿ ಶಿವಪ್ಪ ನಿಂದಿಸಿ, ದೊಣ್ಣೆಯಿಂದ ತಲೆಗೆ ಹೊಡೆದು, ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕಿದ್ದರು.

ಈ ಬಗ್ಗೆ ತುಮಕೂರು ಗ್ರಾಮಾಂತರ ಠಾಣೆಯ ಮುಖ್ಯ ಪೇದೆ ವಿಶ್ವೇಶ್ವರಯ್ಯ ಪ್ರಕರಣ ದಾಖಲಿಸಿಕೊಂಡಿದ್ದರು. ತುಮಕೂರು ನಗರ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರ ಬಿ.ಟಿ.ಚಿದಾನಂದಸ್ವಾಮಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪತ್ರ ಸಲ್ಲಿಸಿದ್ದರು.

ತುಮಕೂರು 3ನೇ ಅಪರ ಜಿಲ್ಲಾಮತ್ತು ಸತ್ರ ವಿಶೇಷ ನ್ಯಾಯಾಲಯವು, ಬುಧವಾರ ಈ ಸಂಬಂಧ ವಿಚಾರಣೆ ನಡೆಸಿದಾಗ ಆರೋಪಿ ಶಿವಪ್ಪ ಮಾಡಿರುವ ಅಪರಾಧ ಸಾಕ್ಷ್ಯಧಾರಗಳಿಂದ ರುಜುವಾತಾಗಿದೆ. ಹೀಗಾಗಿ ನ್ಯಾಯಾಧೀಶ ಎಚ್‌.ಎಸ್‌.ಮಲ್ಲಿಕಾರ್ಜುನಸ್ವಾಮಿ ಅವರು ಆರೋಪಿಗೆ 1 ವರ್ಷ ಸಾದಾ ಸಜೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಆರೋಪಿಯು ದಂಡ ಕಟ್ಟಲು ತಪ್ಪಿದಲ್ಲಿ 3 ತಿಂಗಳ ಸಜೆ ಅನುಭವಿಸುವಂತೆ ಶಿಕ್ಷೆ ವಿಧಿಸಿ, ಹಾಗೂ ಗಾಯಾಳುವಿಗೆ (ಹಲ್ಲೆಗೊಳಗಾದ ವ್ಯಕ್ತಿ) ಸೂಕ್ತ ಪರಿಹಾರ ನೀಡಲು ಪರಿಗಣಿಸುವಂತೆ ಜಿಲ್ಲಾಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಕ ಎಸ್‌.ರಾಜಣ್ಣ ವಾದ ಮಂಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ