ಆ್ಯಪ್ನಗರ

ವಾಣಿಜ್ಯ ಕ್ಷೇತ್ರದಲ್ಲಿ ವಿಫುಲ ಅವಕಾಶ

ಜಾಗತೀಕರಣದ ನಂತರ ವಾಣಿಜ್ಯ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ಭಾರತದ ಆರ್ಥಿಕತೆಯಲ್ಲಿ ಬಹು ಪ್ರಾಮುಖ್ಯತೆ ಬಂದಿದೆ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೈ.ಎಸ್‌.ಸಿದ್ದೇಗೌಡ ತಿಳಿಸಿದರು.

Vijaya Karnataka 17 Mar 2019, 5:00 am
ತುಮಕೂರು: ಜಾಗತೀಕರಣದ ನಂತರ ವಾಣಿಜ್ಯ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ಭಾರತದ ಆರ್ಥಿಕತೆಯಲ್ಲಿ ಬಹು ಪ್ರಾಮುಖ್ಯತೆ ಬಂದಿದೆ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೈ.ಎಸ್‌.ಸಿದ್ದೇಗೌಡ ತಿಳಿಸಿದರು.
Vijaya Karnataka Web more opportunities in commerce field says tumkur vc
ವಾಣಿಜ್ಯ ಕ್ಷೇತ್ರದಲ್ಲಿ ವಿಫುಲ ಅವಕಾಶ


ವಿವಿ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವಾಣಿಜ್ಯಶಾಸ್ತ್ರ ಸಂಶೋಧನಾ ವೇದಿಕೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಉನ್ನತ ಶಿಕ್ಷ ಣದಲ್ಲಿ ಬೋಧನೆ, ಸಂಶೋಧನೆ, ವಿಸ್ತರಣೆ ಬಹುಮುಖ್ಯ ಅಂಶಗಳು. ವಾಣಿಜ್ಯಶಾಸ್ತ್ರ ಸಂಶೋಧನಾ ವೇದಿಕೆಯ ಮುಖಾಂತರ ಅನೇಕ ಉತ್ತಮವಾದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಸಂಶೋಧಕರು ಹಾಗೂ ವಿದ್ಯಾರ್ಥಿಗಳಿಗೆ ಹೊಸ ಜ್ಞಾನಭಂಡಾರದ ಅರಿವು ಮೂಡಿಸುವ ಮೂಲಕ ಜಾಗತೀಕರಣದ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ಸಜ್ಜಾಗುವ ರೀತಿಯಲ್ಲಿ ಬೆಳೆಸಬೇಕು ಎಂದರು.

ಪ್ರೊ.ಕೆ.ಈರೇಶಿ ಮಾತನಾಡಿ, ಒಬ್ಬ ಜ್ಞಾನಿ ಎಲ್ಲಿಯೇ ಹೋದರೂ ಆತ ಗೌರವಕ್ಕೆ ಪಾತ್ರನಾಗುತ್ತಾನೆ. ವಿದ್ಯೆಗೆ ಯಾವುದೇ ಭೇದಭಾವವಿಲ್ಲ. ವಿದ್ಯೆ ಪಡೆಯಲು ಯಾವುದೇ ತಡೆಯಿಲ್ಲ. ವಿದ್ಯೆ ಎಂಬುದು ಎಲ್ಲರ ಸ್ವತ್ತು. ವಿದ್ಯೆಯು ಕಲಿಕಾ ಸಾಮಾರ್ಥ್ಯ‌ವಾದರೆ, ಸಂಶೋಧನೆಯು ಪ್ರಶ್ನಾರ್ಥಕವಾಗಿ ಪ್ರಚೋಧಿಸುತ್ತದೆ ಎಂದು ಹೇಳಿದರು.

ವಿಭಾಗದ ಮುಖ್ಯಸ್ಥ ಪ್ರೊ.ಬಿ.ಶೇಖರ್‌ ಮಾತನಾಡಿ, ಜಾಗತಿಕ ಪ್ರಪಂಚದಲ್ಲಿ ವಾಣಿಜ್ಯಶಾಸ್ತ್ರ ವಿಸ್ತಾರಗೊಳ್ಳುತ್ತಿದೆ. ವಾಣಿಜ್ಯ ವಿಷಯದಲ್ಲಿನ ಸಂಶೋಧನೆಯು ವಿವಿಧ ಆಯಾಮಗಳಲ್ಲಿ ಅತ್ಯಗತ್ಯವಾಗಿದೆ ಎಂದರು. ಪ್ರೊ.ಪಿ.ಪರಮಶಿವಯ್ಯ, ಪ್ರೊ.ಜಿ.ಸುದರ್ಶನರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ