ಆ್ಯಪ್ನಗರ

ಯೋಜನೆ ಹಣಕ್ಕೆ ಠೇವಣಿ ಇಡಬೇಕಿಲ್ಲ

ಸರಕಾರದ ಯೋಜನೆಗಳಲ್ಲಿ ಬಿಡುಗಡೆಯಾಗುವ ಹಣ ಬ್ಯಾಂಕಿನಿಂದ ಪಡೆಯಬಹುದೇ ಹೊರತು ಅದಕ್ಕಾಗಿ ರೈತರು ಬ್ಯಾಂಕ್‌ನಲ್ಲಿ ಠೇವಣಿ ಇಡಬೇಕೆಂಬ ಯಾವುದೇ ನಿಯಮಗಳಿಲ್ಲ. ಆದರೆ ಅಧಿಕಾರಿಗಳು ಠೇವಣಿ ಇಡಿ ಎಂದು ಹೇಳುತ್ತಾರೆ. ಇದರ ಬಗ್ಗೆ ದೂರುಗಳು ಬರುತ್ತಿದ್ದು, ಅಧಿಕಾರಿಗಳು ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.

Vijaya Karnataka 30 Nov 2018, 5:00 am
ಚಿಕ್ಕನಾಯಕನಹಳ್ಳಿ: ಸರಕಾರದ ಯೋಜನೆಗಳಲ್ಲಿ ಬಿಡುಗಡೆಯಾಗುವ ಹಣ ಬ್ಯಾಂಕಿನಿಂದ ಪಡೆಯಬಹುದೇ ಹೊರತು ಅದಕ್ಕಾಗಿ ರೈತರು ಬ್ಯಾಂಕ್‌ನಲ್ಲಿ ಠೇವಣಿ ಇಡಬೇಕೆಂಬ ಯಾವುದೇ ನಿಯಮಗಳಿಲ್ಲ. ಆದರೆ ಅಧಿಕಾರಿಗಳು ಠೇವಣಿ ಇಡಿ ಎಂದು ಹೇಳುತ್ತಾರೆ. ಇದರ ಬಗ್ಗೆ ದೂರುಗಳು ಬರುತ್ತಿದ್ದು, ಅಧಿಕಾರಿಗಳು ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
Vijaya Karnataka Web no plan to deposit money
ಯೋಜನೆ ಹಣಕ್ಕೆ ಠೇವಣಿ ಇಡಬೇಕಿಲ್ಲ


ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಸರಕಾರದ ನಾನಾ ಅಭಿವೃದ್ಧಿ ಯೋಜನೆಗಳಿಗೆ ಸಾಲ ಸೌಲಭ್ಯ ನೀಡುವ ಕುರಿತು ತಾಲೂಕಿನ ಎಲ್ಲ ಬ್ಯಾಂಕ್‌ ವ್ಯವಸ್ಥಾಪಕರ ಜತೆಗಿನ ಸಭೆಯಲ್ಲಿ ಅವರು ಮಾತನಾಡಿದರು.

ಪಶುಭಾಗ್ಯ ಯೋಜನೆಯಲ್ಲಿ ಪಶುಗಳನ್ನು ಕೊಳ್ಳಲು ಪಹಣಿ ಇರಬೇಕು ಎಂದು ರೈತರಿಗೆ ಬ್ಯಾಂಕ್‌ನ ವ್ಯವಸ್ಥಾಪಕರು ಹೇಳಿ ವಾಪಸು ಕಳುಹಿಸುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಹಾಗೂ ಜಮೀನು ಇಲ್ಲದ ಫಲಾನುಭವಿಗಳು ಪಶುಭಾಗ್ಯ ಯೋಜನೆಯಡಿ ಮಂಜೂರು ಆಗಿದ್ದರೆ, ಇಲಾಖೆ ಕೇಳುವ ಪಹಣಿಯನ್ನು ಎಲ್ಲಿಂದ ತರಬೇಕು ಎಂದು ಬ್ಯಾಂಕ್‌ ಅಧಿಕಾರಿಗಳನ್ನು ಶಾಸಕರು ಪ್ರಶ್ನಿಸಿದರು.

ತಾಲೂಕಿನಲ್ಲಿ ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮುದ್ರಾ ಯೋಜನೆ ತಾಲೂಕಿನಲ್ಲಿ ಯಶಸ್ವಿಯಾಗುತ್ತಿಲ್ಲ. ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ ಶಾಸಕರು, ಬ್ಯಾಂಕ್‌ ಅಧಿಕಾರಿಗಳು ಜನರಿಗೆ ಸಮರ್ಪಕ ಮಾಹಿತಿ ನೀಡದಿರುವುದೇ ಯೋಜನೆ ಯಶಸ್ವಿಯಾಗದೇ ಇರಲು ಕಾರಣ. ಆದ್ದರಿಂದ ಅಧಿಕಾರಿಗಳು ಯೋಜನೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.

ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಪುಟ್ಟರಾಜು ಮಾತನಾಡಿ, ವಿಶೇಷ ಘಟಕ ಯೋಜನೆ, ಹಾಲು ಉತ್ಪಾದನೆ, ಉತ್ತೇಜನ, ಗಿರಿಜನ ಉಪಯೋಜನೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಲೀಡ್‌ಬ್ಯಾಂಕ್‌ ಮ್ಯಾನೇಜರ್‌ ಜ್ಯೋತಿಗಣೇಶ್‌, ಜಿಪಂ ಸದಸ್ಯೆ ಮಂಜುಳಮ್ಮ, ತಾಪಂ ಇಒ ನಾರಾಯಣಸ್ವಾಮಿ ಹಾಗೂ ಬ್ಯಾಂಕ್‌ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ